ಮನೆಯಲ್ಲಿ ಎಷ್ಟು ದಿನ ಮೊಸರನ್ನು ಸಂಗ್ರಹಿಸಿಡಬಹುದು, ಎಷ್ಟು ದಿನದಲ್ಲಿ ಹಾಳಾಗುತ್ತದೆ?

Published : Sep 23, 2025, 11:44 AM IST

Curd Storage Hacks: ಮೊಸರನ್ನು ನಾವು ಹೆಚ್ಚು ದಿನಗಳ ಕಾಲ ಸಂಗ್ರಹಿಸುವುದರಿಂದ ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಗುಣಮಟ್ಟ ಮತ್ತು ಚಟುವಟಿಕೆ ಕಡಿಮೆಯಾಗಬಹುದು. ಅದಕ್ಕಾಗಿಯೇ ಮೊಸರನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಯಾರೇ ಆಗಲಿ ಶಿಫಾರಸ್ಸು ಮಾಡಲ್ಲ.

PREV
18
ಎಷ್ಟು ಕಾಲ ಫ್ರೆಶ್ ಆಗಿರುತ್ತದೆ?

ಸಾಮಾನ್ಯವಾಗಿ ಮೊಸರನ್ನು ಪ್ರತಿ ದಿನ, ಪ್ರತಿ ಮನೆಯಲ್ಲೂ ಸೇವಿಸುತ್ತಾರೆ. ಮೊಸರು ರುಚಿಗೆ ಮಾತ್ರವಲ್ಲ, ಇದರಿಂದ ಅಪಾರ ಆರೋಗ್ಯ ಪ್ರಯೋಜನಗಳಿವೆ. ಆದರೆ ಮನೆಯಲ್ಲಿ ತಯಾರಿಸಿದ ಮೊಸರಿರಬಹುದು ಅಥವಾ ಅಂಗಡಿಯಲ್ಲಿ ಖರೀದಿಸಿದ್ದಿರಬಹುದು ಎಷ್ಟು ಕಾಲ ಫ್ರೆಶ್ ಆಗಿರುತ್ತದೆಯೆಂದು ಎಂದಾದರೂ ಯೋಚಿಸಿದ್ದೀರಾ?. ಏಕೆಂದರೆ ನಮಗೆ ಮೊಸರಿನ ಸಂಪೂರ್ಣ ಪ್ರಯೋಜನ ಸಿಗಬೇಕೆಂದರೆ ಅದು ಹಾಳಾಗಿರಬಾರದು ಅಂದರೆ ಹುಳಿಯಾಗಿರಬಾರದು. ಹಾಗಾದರೆ ನಾವು ಅಂಗಡಿಯಿಂದ ಮೊಸರನ್ನು ತಂದಾಗ ಅಥವಾ ನಾವೇ ಹಾಲಿಗೆ ಹೆಪ್ಪು ಹಾಕಿದಾಗ ಮನೆಯಲ್ಲಿ ಎಷ್ಟು ದಿನಗಳ ಕಾಲ ಸಂಗ್ರಹಿಸಬಹುದು ಎಂಬುದನ್ನು ನೋಡೋಣ ಬನ್ನಿ..

28
ಇದರಲ್ಲಿದೆ ನೈಸರ್ಗಿಕ ಪ್ರೋಬಯಾಟಿಕ್

ಮೊಸರಿನಲ್ಲಿ ನೈಸರ್ಗಿಕ ಪ್ರೋಬಯಾಟಿಕ್ ಇದೆ. ಇದು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಮೊಸರನ್ನು ನಾವು ಹೆಚ್ಚು ದಿನಗಳ ಕಾಲ ಸಂಗ್ರಹಿಸುವುದರಿಂದ ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಗುಣಮಟ್ಟ ಮತ್ತು ಚಟುವಟಿಕೆ ಕಡಿಮೆಯಾಗಬಹುದು. ಅದಕ್ಕಾಗಿಯೇ ಮೊಸರನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಯಾರೇ ಆಗಲಿ ಶಿಫಾರಸ್ಸು ಮಾಡಲ್ಲ.

38
ಬೇಗನೆ ಹುಳಿಯಾಗುತ್ತೆ

ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸಿದ ತಾಜಾ ಮೊಸರನ್ನು ರೆಫ್ರಿಜರೇಟರ್‌ನಲ್ಲಿ 2 ರಿಂದ 3 ದಿನಗಳವರೆಗೆ ಮಾತ್ರ ಇಡಬಹುದು. ಹವಾಮಾನವು ಬಿಸಿಯಾಗಿದ್ದರೆ ಈ ಅವಧಿ ಇನ್ನೂ ಕಡಿಮೆಯಾಗಬಹುದು. ಏಕೆಂದರೆ ಮೊಸರು ಶಾಖದಲ್ಲಿ ಬೇಗನೆ ಹುಳಿಯಾಗುತ್ತದೆ.

48
ಪ್ಯಾಕ್ ಮಾಡಿದ ಮೊಸರಾದರೆ

ಇನ್ನು ಪ್ಯಾಕ್ ಮಾಡಿದ ಮೊಸರಿನ ವಿಷಯಕ್ಕೆ ಬಂದರೆ ಅದರ ಪ್ಯಾಕೇಜಿಂಗ್ ಮತ್ತು ಸಂಸ್ಕರಣೆಯಿಂದಾಗಿ ಇದು ಸ್ವಲ್ಪ ಹೆಚ್ಚು ಕಾಲ ಉಳಿಯುತ್ತದೆ. ಪ್ಯಾಕ್ ಮಾಡಿದ ಮೊಸರು ಸಾಮಾನ್ಯವಾಗಿ ರೆಫ್ರಿಜರೇಟರ್‌ನಲ್ಲಿ 7 ರಿಂದ 10 ದಿನಗಳವರೆಗೆ ಇರುತ್ತದೆ. ಆದರೆ ಪ್ಯಾಕೇಜ್‌ನಲ್ಲಿ ಪಟ್ಟಿ ಮಾಡಲಾದ ಮುಕ್ತಾಯ ದಿನಾಂಕದೊಳಗೆ ಅದನ್ನು ಸೇವಿಸಬೇಕು. ಸಾಧ್ಯವಾದಷ್ಟು ಪ್ಯಾಕ್ ಒಪನ್ ಮಾಡಿ 2-3 ದಿನಗಳಲ್ಲಿ ಅದನ್ನು ಸೇವಿಸಲು ಪ್ರಯತ್ನಿಸಿ. ಏಕೆಂದರೆ ಗಾಳಿಗೆ ಮತ್ತು ಚಮಚಕ್ಕೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ಕೆಟ್ಟ ಬ್ಯಾಕ್ಟೀರಿಯಾದ ಬೆಳವಣಿಗೆಯ ಅಪಾಯ ಹೆಚ್ಚಾಗುತ್ತದೆ. 

58
ಹುಳಿಯಾದ್ಮೇಲೆ ಬಳಸಬಾರ್ದು

ಕೆಲವು ಜನರು ಮೊಸರು ಒಮ್ಮೆ ಹುಳಿಯಾದ ನಂತರ ಅದನ್ನು ಇನ್ನೂ ಹಲವಾರು ದಿನಗಳವರೆಗೆ ಬಳಸಬಹುದು ಎಂದು ನಂಬುತ್ತಾರೆ. ಆದರೆ ನಿಮಗೆ ಗೊತ್ತಾ?, ಹುಳಿ ಮೊಸರು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು ಮತ್ತು ಕೆಲವೊಮ್ಮೆ ಅಸಿಡಿಟಿ ಅಥವಾ ಗ್ಯಾಸ್‌ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಸಮಯದಲ್ಲಿ ಹುಳಿ ಮೊಸರು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

68
ಈ ಟಿಪ್ಸ್ ಫಾಲೋ ಮಾಡಿ

ಹಾಗೆಯೇ ಹುಳಿ ಮೊಸರನ್ನು ಕರಿ, ಇಡ್ಲಿ ಹಿಟ್ಟು, ದೋಸೆ ಹಿಟ್ಟು ಅಥವಾ ಮ್ಯಾರಿನೇಟ್ ಮಾಡುವಾಗ ಬಳಸಬಹುದಾದರೂ, ಅದು ತಾಜಾ ಬಳಕೆಗೆ ಸೂಕ್ತವಲ್ಲ. ಮೊಸರನ್ನು ಸಂಗ್ರಹಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳಿವೆ. 

78
ಕೋಣೆಯ ಉಷ್ಣಾಂಶದಲ್ಲಿ ಪದೇ ಪದೇ ಇಡ್ಬೇಡಿ

ಯಾವಾಗಲೂ ಮೊಸರನ್ನು ರೆಫ್ರಿಜರೇಟರ್‌ನಲ್ಲಿ ಗಾಳಿಯಾಡದ ಡಬ್ಬಿಯಲ್ಲಿ ಇರಿಸಿ. ದೀರ್ಘಕಾಲದವರೆಗೆ ಅದರ ತಾಜಾತನವನ್ನು ಕಾಪಾಡಿಕೊಳ್ಳಲು ರೆಫ್ರಿಜರೇಟರ್‌ನ ಅತ್ಯಂತ ತಣ್ಣನೆಯ ಭಾಗದಲ್ಲಿ ಇರಿಸಲು ಪ್ರಯತ್ನಿಸಿ. ಮೊಸರು ತೆಗೆಯುವಾಗ ಶುದ್ಧವಾದ ಚಮಚವನ್ನು ಬಳಸಿ ಮತ್ತು ದೀರ್ಘಕಾಲದವರೆಗೆ ಕೋಣೆಯ ಉಷ್ಣಾಂಶದಲ್ಲಿ ಪದೇ ಪದೇ ಇಡುವುದನ್ನು ತಪ್ಪಿಸಿ.

88
ತಾಜಾ ಮೊಸರು ಸೇವಿಸುವ ಅಭ್ಯಾಸವಿರಲಿ

ಒಟ್ಟಾರೆಯಾಗಿ ಮನೆಯಲ್ಲಿ ತಯಾರಿಸಿದ ಮೊಸರನ್ನು 2-3 ದಿನಗಳವರೆಗೆ ಸಂಗ್ರಹಿಸಬಹುದು. ಆದರೆ ಪ್ಯಾಕ್ ಮಾಡಿದ ಮೊಸರನ್ನು 7-10 ದಿನಗಳವರೆಗೆ ಸಂಗ್ರಹಿಸಬಹುದು. ಆದರೆ ಮೊಸರು ತಾಜಾವಾಗಿದ್ದಷ್ಟೂ ಅದರ ರುಚಿ ಮತ್ತು ಆರೋಗ್ಯ ಪ್ರಯೋಜನಗಳು ಉತ್ತಮವಾಗಿರುತ್ತವೆ ಎಂಬುದನ್ನು ಯಾವಾಗಲೂ ನೆನಪಿಡಿ. ಹಳೆಯ ಅಥವಾ ಹುಳಿ ಮೊಸರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ತಾಜಾ ಮೊಸರು ಸೇವಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ.

Read more Photos on
click me!

Recommended Stories