ಫ್ರಿಡ್ಜ್‌ನಲ್ಲಿ ಕಾಯಿನ್ ಇಡೋದು ಯಾಕೆ? ವಾರಗಟ್ಟಲೇ ಮನೆ ಲಾಕ್‌ ಮಾಡಿ ಹೋಗ್ತಿದ್ರೆ ಈ ಸೀಕ್ರೆಟ್ ಹೇಳುತ್ತದೆ ನಾಣ್ಯ!

Published : Jun 11, 2026, 12:27 PM IST

Freezer coin hack: ನಾವು ರಜಾದಿನದಲ್ಲಿ ಬೇರೆ ಊರಿಗೆ ಹೋದಾಗ ಮನೆಯಲ್ಲಿ ವಿದ್ಯುತ್ ಕೈಕೊಟ್ಟರೆ, ಫ್ರಿಡ್ಜ್‌ನಲ್ಲಿಟ್ಟ ಆಹಾರ ಪದಾರ್ಥಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಆದರೆ ಕರೆಂಟ್ ಎಷ್ಟು ಸಮಯದವರೆಗೆ ಇರಲಿಲ್ಲ ಎಂಬುದನ್ನ ಪತ್ತೆಹಚ್ಚಲು ಈ ಕಾಯಿನ್ ಹ್ಯಾಕ್ ಟ್ರೈ ಮಾಡಿ.

PREV
15
ಹೆಚ್ಚಿನ ಪದಾರ್ಥಗಳು ಫ್ರೀಜರ್‌ನಲ್ಲಿರುತ್ತವೆ

ಹೆಚ್ಚಿನ ಪದಾರ್ಥಗಳು ಫ್ರೀಜರ್‌ನಲ್ಲಿರುತ್ತವೆ
ನೀವು ರಜೆಯ ದಿನಗಳಲ್ಲಿ ಮನೆಗೆ ಬೀಗ ಹಾಕಿ ಎಲ್ಲಾದರೂ ಹೊರಡುವ ಪ್ಲಾನ್ ಮಾಡುತ್ತಿದ್ದರೆ, ಕೇವಲ ಹೋಗುವ ಪ್ಲಾನ್ ಅಷ್ಟೇ ಮುಖ್ಯವಲ್ಲ. ಅದರೊಂದಿಗೆ ನೀವು ಮನೆಯನ್ನು ಕೂಡ ಸಂಪೂರ್ಣವಾಗಿ ವ್ಯವಸ್ಥಿತವಾಗಿ ಇಡಬೇಕಾಗುತ್ತದೆ. ಹೌದು, ಅಡುಗೆ ಸಾಮಗ್ರಿಗಳು ಸುರಕ್ಷಿತವಾಗಿರಲು ಮತ್ತು ಹಾಳಾಗದಿರಲು ನೀವು ಸಾಕಷ್ಟು ಪದಾರ್ಥಗಳನ್ನು ಫ್ರೀಜರ್‌ನಲ್ಲಿ ಇಟ್ಟು ಹೋಗುತ್ತೀರಿ ಅಲ್ಲವೇ, ಆದರೆ ಈ ಮಧ್ಯೆ ಒಂದು ವೇಳೆ ಪವರ್ ಕಟ್ (ವಿದ್ಯುತ್ ವ್ಯತ್ಯಯ) ಸಂಭವಿಸಿದರೆ, ಫ್ರೀಜರ್‌ನಲ್ಲಿ ಇಟ್ಟಿರುವ ವಸ್ತುಗಳು ಕೂಡ ಹಾಳಾಗಬಹುದು.

ಒಂದು ವೇಳೆ ನೀವು ಇಲ್ಲದಿದ್ದಾಗ ವಿದ್ಯುತ್ ಕೈಕೊಟ್ಟರೆ ಮತ್ತು ನಿಮ್ಮ ಫ್ರೀಜರ್ ತಂಪಾಗದಿದ್ದರೆ, ತಿನ್ನುವ-ಕುಡಿಯುವ ಸಾಮಗ್ರಿಗಳು ಹಾಳಾಗುವ ಭಯವಿರುತ್ತದೆ. ಇಂತಹ ಸಂದರ್ಭದಲ್ಲಿ ಫ್ರೀಜರ್‌ನಲ್ಲಿ ನಾಣ್ಯ ಇಡುವ ಈ ಹ್ಯಾಕ್ (ಉಪಾಯ) ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ. 

25
ವೈರಲ್ ಆಗ್ತಿದೆ ಫ್ರೀಜರ್‌ನಲ್ಲಿ ನಾಣ್ಯ ಇಡುವ ಹ್ಯಾಕ್

ವೈರಲ್ ಆಗ್ತಿದೆ ಫ್ರೀಜರ್‌ನಲ್ಲಿ ನಾಣ್ಯ ಇಡುವ ಹ್ಯಾಕ್
ಸೋಶಿಯಲ್ ಮೀಡಿಯಾದಲ್ಲಿ ಕ್ರಿಯೇಟರ್ಸ್ ನಾನಾ ರೀತಿಯ ವಿಶಿಷ್ಟ ಹ್ಯಾಕ್‌ಗಳನ್ನು ಟ್ರೈ ಮಾಡುವುದನ್ನು ನಾವು ನೋಡುತ್ತೇವೆ. ಅವುಗಳಲ್ಲಿ ಕೆಲವು ನಿಜವಾಗಿಯೂ ಸಹಾಯ ಮಾಡುತ್ತವೆ ಮತ್ತು ನಿಮ್ಮ ದೈನಂದಿನ ಕೆಲಸವನ್ನು ಸುಲಭಗೊಳಿಸುತ್ತವೆ. ಫ್ರೀಜರ್‌ನಲ್ಲಿ ನಾಣ್ಯ ಇಡುವ ಹ್ಯಾಕ್ ಕೂಡ ಅಂತಹದ್ದೇ ಒಂದಾಗಿದೆ. ಪವರ್ ಕಟ್ ಸಮಸ್ಯೆ ಹಳ್ಳಿಗಳಲ್ಲಿ ಮಾತ್ರವಲ್ಲ, ಸಾಕಷ್ಟು ನಗರಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಇರುತ್ತದೆ. ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನು ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಈ ಹ್ಯಾಕ್ ನಿಮಗೆ ಖಂಡಿತ ಸಹಾಯ ಮಾಡುತ್ತದೆ. 

35
ನಾಣ್ಯ ಎಲ್ಲವನ್ನೂ ಹೇಳುತ್ತದೆ

ನಾಣ್ಯ ಎಲ್ಲವನ್ನೂ ಹೇಳುತ್ತದೆ
ಈ ಸರಳ ಟ್ರಿಕ್ ತುಂಬಾ ಕೆಲಸಕ್ಕೆ ಬರುತ್ತದೆ. ವಿದ್ಯುತ್ ಕೈಕೊಟ್ಟಾಗ ಫ್ರೀಜರ್‌ನಲ್ಲಿ ಇಟ್ಟಿದ್ದ ವಸ್ತುಗಳು ಎಲ್ಲಾದರೂ ಹಾಳಾಗಿದೆಯೇ ಎಂಬುದನ್ನು ಇದರಿಂದ ನೀವು ಸುಲಭವಾಗಿ ಪತ್ತೆಹಚ್ಚಬಹುದು.

45
ನೀವು ಮಾಡಬೇಕಾದದ್ದು ಇಷ್ಟೇ..

ನೀವು ಮಾಡಬೇಕಾದದ್ದು ಇಷ್ಟೇ..
*ಒಂದು ಗಾಜಿನ ಅಥವಾ ಪಾರದರ್ಶಕ (Transparent) ಲೋಟವನ್ನು ತೆಗೆದುಕೊಂಡು ಅದರಲ್ಲಿ ನೀರು ತುಂಬಿಸಿ ಫ್ರೀಜರ್‌ನಲ್ಲಿ ಇಡಿ.
*ಅದರಲ್ಲಿ ನೀರು ಸಂಪೂರ್ಣವಾಗಿ ಗಡ್ಡೆಯಾದ (ಐಸ್) ನಂತರ, ಅದರ ಮೇಲೆ ಒಂದು ನಾಣ್ಯವನ್ನು ಇಟ್ಟು ಮತ್ತೆ ಫ್ರೀಜರ್‌ನಲ್ಲಿ ಇಡಿ.
*ಈಗ ನೀವು ಮನೆಯಿಂದ ದೂರವಿರುವಾಗ ವಿದ್ಯುತ್ ಎಷ್ಟು ಸಮಯದವರೆಗೆ ಇರಲಿಲ್ಲ ಎಂಬುದನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ.
*ಹೇಗೆಂದರೆ ಯಾವಾಗಲಾದರೂ ಕರೆಂಟ್ ಹೋದಾಗ, ಲೋಟದಲ್ಲಿರುವ ಐಸ್ ಕರಗಲು ಪ್ರಾರಂಭಿಸುತ್ತದೆ ಮತ್ತು ನಾಣ್ಯವು ಅಷ್ಟೇ ಕೆಳಗೆ ಹೋಗುತ್ತದೆ.
*ಈ ನಾಣ್ಯದ ಟ್ರಿಕ್‌ನಿಂದ ನೀವು ಫ್ರೀಜರ್‌ನಲ್ಲಿ ಇಟ್ಟಿರುವ ಆಹಾರವು ಎಷ್ಟು ಬಾರಿ ಡಿಫ್ರಾಸ್ಟ್ (ಐಸ್ ಕರಗಿರುವುದು) ಆಗಿರಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು. ಅಷ್ಟೇ ಅಲ್ಲ, ನಾಣ್ಯವು ಲೋಟದ ಮಧ್ಯದಲ್ಲಿ ಸಿಲುಕಿಕೊಂಡಿದೆಯೇ ಅಥವಾ ಸಂಪೂರ್ಣವಾಗಿ ಕೆಳಗೆ ಹೋಗಿದೆಯೇ ಎಂಬುದರ ಮೂಲಕ, ಫ್ರೀಜರ್ ಎಷ್ಟು ಸಮಯದವರೆಗೆ ಕೂಲಿಂಗ್ ಮಾಡುತ್ತಿರಲಿಲ್ಲ ಎಂಬುದು ತಿಳಿಯುತ್ತದೆ.

55
ಪದೇ ಪದೇ ಡಿಫ್ರಾಸ್ಟ್ ಆದ ಆಹಾರ ಸೇವಿಸುವುದು ಅಸುರಕ್ಷಿತ

ಪದೇ ಪದೇ ಡಿಫ್ರಾಸ್ಟ್ ಆದ ಆಹಾರ ಸೇವಿಸುವುದು ಅಸುರಕ್ಷಿತ
ಫ್ರೀಜರ್‌ನಲ್ಲಿ ಇಟ್ಟಿರುವ ಆಹಾರವು ಹಲವು ಬಾರಿ ಡಿಫ್ರಾಸ್ಟ್ ಆಗಿ, ನಂತರ ಮತ್ತೆ ಐಸ್ ಆಗಿದ್ದರೆ, ಅಂತಹ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದರಿಂದ ಫುಡ್ ಪಾಯ್ಸನಿಂಗ್ (ಆಹಾರ ವಿಷಪೂರಿತವಾಗುವುದು) ಆಗುವ ಅಪಾಯವಿರುತ್ತದೆ. ಆದ್ದರಿಂದ ಈ ಸರಳವಾದ ಹ್ಯಾಕ್ ರಜಾದಿನಗಳಲ್ಲಿ ನಿಮಗೆ ತುಂಬಾ ಉಪಯುಕ್ತವಾಗುತ್ತದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories