Foods to control hair Fall: ಇತ್ತೀಚೆಗೆ ಸಾಮಾನ್ಯವಾದ ಕೂದಲು ಉದುರುವಿಕೆ ಸಮಸ್ಯೆಯನ್ನು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಯಂತ್ರಿಸಬಹುದು. ಈ ಲೇಖನದಲ್ಲಿ ಕೂದಲು ಬೆಳವಣಿಗೆಗೆ ಸಹಕರಿಸುವ ಹಾಗೂ ಕೂದಲು ಉದುರುವುದನ್ನು ತಡೆಯುವ ಸೂಪರ್‌ಫುಡ್‌ಗಳ ಬಗ್ಗೆ ವಿವರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಇಂದು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ದಿನನಿತ್ಯದ ಜೀವನಶೈಲಿಯಲ್ಲಿ ಕೆಲವೊಂದು ಆಹಾರಗಳನ್ನು ಅಳವಡಿಸಿಕೊಳ್ಳಬೇಕು. ಈ ಲೇಖನದಲ್ಲಿ ಐದು ಸೂಪರ್ ಫುಡ್‌ಗಳ ಮಾಹಿತಿಯನ್ನು ಈ ಲೇಖನದಲ್ಲಿದೆ.
24
ಹಸಿರು ತರಕಾರಿ & ನಟ್ಸ್ ಮತ್ತು ಸೀಡ್ಸ್
ಪಾಲಕ್ ಮತ್ತು ಇತರ ಹಸಿರು ಎಲೆ ತರಕಾರಿಗಳಲ್ಲಿ ಕಬ್ಬಿಣ ಮತ್ತು ಇತರ ಖನಿಜಾಂಶಗಳು ಹೇರಳವಾಗಿದೆ. ಇದು ಕೂದಲಿನ ಕಿರುಚೀಲಗಳನ್ನು ಆರೋಗ್ಯವಾಗಿಡುತ್ತದೆ. ಈ ಹಸಿರು ತರಕಾರಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ.
ನಟ್ಸ್ ಮತ್ತು ಸೀಡ್ಸ್
ಬಾದಾಮಿ, ವಾಲ್‌ನಟ್, ಅಗಸೆ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಇ ನೀಡಿ ಕೂದಲನ್ನು ಬಲಪಡಿಸುತ್ತವೆ ಮತ್ತು ನೆತ್ತಿಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
34
ಮೀನು ಮತ್ತು ಅವಕಾಡೊ
ಕೊಬ್ಬಿನ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಈ ಅಂಶಗಳುಯ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬಯೋಟಿನ್, ವಿಟಮಿನ್ ಇ, ವಿಟಮಿನ್ ಡಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೊಂದಿರುವ ಅವಕಾಡೊ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಅವಕಾಡೋವನ್ನು ಸೇರಿಸಿಕೊಳ್ಳಿ.
ಬ್ಲೂಬೆರ್ರಿ, ಸ್ಟ್ರಾಬೆರಿಯಂತಹ ಬೆರ್ರಿಗಳು ಕೂದಲನ್ನು ಬಲಪಡಿಸಲು ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯಕವಾಗಿವೆ. ಬೆರ್ರಿ ಹಣ್ಣುಗಳ ಸೇವನೆಯಿಂದ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.