How to clean tiles at home easily: ಮನೆಯನ್ನು ಕ್ಲೀನ್ ಮಾಡೋದು ದೊಡ್ಡ ಟಾಸ್ಕ್ ಆಗಿದೆ. ಒಮ್ಮೊಮ್ಮೆ ಅಡುಗೆ ಮನೆ ಆಹಾರ ಪದಾರ್ಥಗಳು, ಎಣ್ಣೆ ಅಥವಾ ಇನ್ನಿತರ ದ್ರವದಿಂದ ಮನೆ ಗಲೀಜು ಆಗುವುದು. ಟೈಲ್ಸ್ ನೆಲವನ್ನು ಕ್ಲೀನ್ ಮಾಡೋದು ಹೇಗೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಉಗುರುಬೆಚ್ಚಗಿನ ನೀರು ಹಾಕಿ ಫ್ಲೋರ್ ಕ್ಲೀನ್ ಮಾಡಬಹುದು. ಚೆನ್ನಾಗಿ ಹಿಂಡಿದ ಮೈಕ್ರೋಫೈಬರ್ ಮಾಪ್ (ನೆಲ ಒರೆಸುವ ಬಟ್ಟೆಯಿಂದ ಫ್ಲೋರ್ ಕ್ಲೀನ್ ಮಾಡಿ. ಆಗ ಫ್ಲೋರ್‌ನಲ್ಲಿದ್ದ ಧೂಳು, ಕೊಳಕು, ಪಾದದ ಗುರುತು ಹೋಗುತ್ತದೆ. ನೆಲದ ಮೇಲೆ ನೀರು ಇಲ್ಲದಂತೆ ನೋಡಿಕೊಳ್ಳಿ.
26
ಬಿಳಿ ವಿನೆಗರ್ (White vinegar)
ಬಿಳಿ ವಿನೆಗರ್ ಬಳಸಿ ಒರೆಸಿದರೆ ಖನಿಜಗಳ ಕಲೆ ಹೋಗುತ್ತದೆ, ಹಗುರವಾದ ಕೊಳಕು ಹೋಗುತ್ತದೆ. ಸೆರಾಮಿಕ್ ಅಥವಾ ಪೋರ್ಸಿಲೈನ್ ಟೈಲ್ಸ್ ಕ್ಲೀನ್ ಮಾಡಲು ಬಿಳಿ ವಿನೆಗರ್ ಹಾಗೂ ನೀರಿನ ಮಿಶ್ರಣ ಹಾಕಿ. ಮಾರ್ಬಲ್, ಸುಣ್ಣದಕಲ್ಲು (limestone) ಅಥವಾ ಗ್ರಾನೈಟ್‌ನಂತಹ ನೈಸರ್ಗಿಕ ಟೈಲ್ಸ್‌ಗಳಿಗೆ ಬಿಳಿ ವಿನೆಗರ್ ಹಾಕಿದ್ರೆ ಕಲ್ಲಿನ ಹೊಳಪು ಹೋಗುತ್ತದೆ.
36
ಅಡುಗೆ ಸೋಡಾ (Baking soda)
ಅಡುಗೆ ಸೋಡಾದಿಂದ ಗಟ್ಟಿ ಕಲೆ, ಕೆಟ್ಟ ವಾಸನೆ ಹೋಗುತ್ತದೆ. ಕಲೆ ಇರುವ ಜಾಗಕ್ಕೆ ಸ್ವಲ್ಪ ಅಡುಗೆ ಸೋಡಾ ಹಾಕಿ, ಒದ್ದೆಯಾದ ಬಟ್ಟೆ ಅಥವಾ ಬ್ರಷ್‌ನಿಂದ ಉಜ್ಜಿ. ಆಗ ಯಾವುದೇ ಗೀರು ಆಗದೆ, ಕೊಳಕನ್ನು ತೆಗೆಯುತ್ತದೆ.
ಸಸ್ಯಜನ್ಯ ಎಣ್ಣೆಗಳಿಂದ ತಯಾರಾಗುವ, ಸುಲಭವಾಗಿ ಕರಗುವ ಕ್ಯಾಸ್ಟೈಲ್ ಸೋಪ್ ಸೂಕ್ತ. ಉಗುರುಬೆಚ್ಚಗಿನ ನೀರಿನಲ್ಲಿ ಈ ಸೋಪ್ ಹಾಕಿ, ಆಮೇಲೆ ಬಟ್ಟೆ ಒದ್ದೆ ಮಾಡಿ ಫ್ಲೋರ್ ಒರೆಸಿ. ಇದರಿಂದ ಕಲೆ ಹೋಗುತ್ತದೆ.
56
ತಾಜಾ ವಾಸನೆಗಾಗಿ ನಿಂಬೆ ರಸ (Lemon juice)
ನೆಲ ಕ್ಲೀನ್ ಮಾಡಲು, ಫ್ರೆಶ್ ಆಗಿಡಲು ಲಿಂಬೆ ರಸ ಒಳ್ಳೆಯದು. ಉಗುರುಬೆಚ್ಚಗಿನ ನೀರಿಗೆ ಹನಿ ನಿಂಬೆ ರಸ ಹಾಕಿ, ನೆಲ ಒರೆಸುವುದರಿಂದ ಜಿಡ್ಡು ಹೋಗುತ್ತದೆ. ಮಾರ್ಬಲ್, ಗ್ರಾನೈಟ್ ನೆಲಕ್ಕೆ ಇದನ್ನು ಬೆಳೆಸಬಾರದು.
66
ಸ್ಟೀಮ್ ಮಾಪ್
ಸ್ಟೀಮ್ ಮಾಪ್‌ಗಳಿಂದ ಕಲೆ ಹೋಗುತ್ತದೆ. ಬಿಸಿ ಹಬೆಯಿಂದ ನೆಲದ ಮೇಲಿನ ಕೊಳಕು, ಜಿಡ್ಡು ಮತ್ತು ಬ್ಯಾಕ್ಟೀರಿಯಾ ಹೋಗುತ್ತದೆ. ಮೈಕ್ರೋಫೈಬರ್ ಮಾಪ್ ಬಳಕೆಯಿಂದ ಒಂದಿಷ್ಟು ಕಲೆ, ಜಿಡ್ಡು ಕೂಡ ಹೋಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.