DIY gold cleaning hacks: ಆಭರಣಗಳು ದಿನಬಳಕೆಯಿಂದಾಗಿ, ಧೂಳು ಮತ್ತು ಬೆವರಿನ ಕಾರಣದಿಂದ ಕಾಲಾನಂತರದಲ್ಲಿ ಹೊಳಪನ್ನು ಕಳೆದುಕೊಳ್ಳುತ್ತವೆ. ಈ ಒಡವೆಗಳನ್ನು ಮತ್ತೆ ಹೊಸದರಂತೆ, ಫಳಫಳ ಹೊಳೆಯುವಂತೆ ಮಾಡಲು ಪ್ರತಿ ಬಾರಿ ಅಕ್ಕಸಾಲಿಗರ ಬಳಿ ಹೋಗಬೇಕಿಲ್ಲ ಅಥವಾ ದುಬಾರಿ ಕೆಮಿಕಲ್ ಖರೀದಿಸುವ ಅಗತ್ಯವೂ ಇಲ್ಲ.
ದುಬಾರಿ ಕ್ಲೀನರ್ ಬೇಡ ಚಿನ್ನದ ಆಭರಣಗಳು ಕೇವಲ ಅಲಂಕಾರದ ವಸ್ತುಗಳಲ್ಲ, ಅವುಗಳ ಜೊತೆಗೆ ನಮಗೆ ಬೆಲೆಕಟ್ಟಲಾಗದ ಭಾವನೆಗಳು ಮತ್ತು ನೆನಪುಗಳು ಅಡಗಿರುತ್ತವೆ. ಅದು ಮದುವೆಯ ಉಂಗುರವಾಗಿರಲಿ ಅಥವಾ ತಲೆತಲಾಂತರದಿಂದ ಬಂದ ಒಡವೆಯಾಗಿರಲಿ, ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ. ಆದರೆ ಸಮಯ ಕಳೆದಂತೆ ಧೂಳು, ಬೆವರು, ಎಣ್ಣೆ ಮತ್ತು ಪರ್ಫ್ಯೂಮ್‌ನಿಂದಾಗಿ ಚಿನ್ನದ ಒಡವೆಗಳ ಹೊಳಪು ಮರೆಯಾಗಬಹುದು. ನಿಮ್ಮ ಆಭರಣಗಳು ಮೊದಲಿನಂತೆ ಹೊಳೆಯಬೇಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ಲೀನರ್‌ಗಳ ಅಗತ್ಯವಿಲ್ಲ. ಮನೆಯಲ್ಲಿಯೇ ಲಭ್ಯವಿರುವ ಕೆಲವು ಸುಲಭ ವಸ್ತುಗಳನ್ನು ಬಳಸಿ ಚಿನ್ನದ ಆಭರಣಗಳನ್ನು ಹೇಗೆ ಹೊಸದರಂತೆ ಹೊಳೆಯುವಂತೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
25
ಟೂತ್‌ಪೇಸ್ಟ್‌ನಿಂದ ಸ್ವಚ್ಛಗೊಳಿಸಿ
ಟೂತ್‌ಪೇಸ್ಟ್‌ನಿಂದ ಸ್ವಚ್ಛಗೊಳಿಸಿ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್ ಅತ್ಯಂತ ಸುಲಭವಾದ ಮಾರ್ಗವಾಗಿದೆ. ಸ್ವಲ್ಪ ಪ್ರಮಾಣದ ಸಾಧಾರಣ ಟೂತ್‌ಪೇಸ್ಟ್ ತೆಗೆದುಕೊಳ್ಳಿ ಮತ್ತು ಮೃದುವಾದ ಬಟ್ಟೆ ಅಥವಾ ಬ್ರಷ್ ಸಹಾಯದಿಂದ ಆಭರಣದ ಮೇಲೆ ಮೆಲ್ಲಗೆ ಹಚ್ಚಿ. ಕೆಲವು ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಶುದ್ಧ ಬಟ್ಟೆಯಿಂದ ಒರೆಸಿರಿ. ಇದು ಆಭರಣದ ಮೇಲಿರುವ ಸಾಧಾರಣ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
35
ಬೇಕಿಂಗ್ ಸೋಡಾ ಬಳಸಿ
ಬೇಕಿಂಗ್ ಸೋಡಾ ಬಳಸಿ ಒಂದು ವೇಳೆ ಆಭರಣಗಳ ಮೇಲೆ ಹೆಚ್ಚು ಕೊಳೆ ಸಂಗ್ರಹವಾಗಿದ್ದರೆ ಬೇಕಿಂಗ್ ಸೋಡಾ ಬಳಸಬಹುದು. ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಆಭರಣಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಬಿಡಿ. ನಂತರ ಮೃದುವಾದ ಬ್ರಷ್‌ನಿಂದ ಮೆಲ್ಲಗೆ ಉಜ್ಜಿ ನೀರಿನಿಂದ ತೊಳೆಯಿರಿ. ಇದು ಹಠಮಾರಿ ಕೊಳೆಯನ್ನು ಹೋಗಲಾಡಿಸಲು ಬಹಳ ಉಪಯುಕ್ತ.
ಚಿನ್ನದ ಚೈನ್‌ಗಳ ಹೊಳಪು ಹೆಚ್ಚಿಸಲು ಟಿಪ್ಸ್ ಚಿನ್ನದ ಚೈನ್‌ಗಳನ್ನು ಸ್ವಚ್ಛಗೊಳಿಸಲು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಲಿಕ್ವಿಡ್ ಡಿಶ್ ಸೋಪ್ (ಪಾತ್ರೆ ತೊಳೆಯುವ ದ್ರವ) ಬೆರೆಸಿ ಅದರಲ್ಲಿ ಚೈನ್ ಅನ್ನು ಕೆಲವು ನಿಮಿಷ ನೆನೆಸಿಡಿ. ನಂತರ ಮೃದುವಾದ ಬ್ರಷ್‌ನಿಂದ ಹಗುರವಾಗಿ ಉಜ್ಜಿರಿ. ಬಳಿಕ ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿರಿ.
55
ಸ್ವಚ್ಛಗೊಳಿಸುವಾಗ ಈ ಎಚ್ಚರಿಕೆ ವಹಿಸಿ
ಸ್ವಚ್ಛಗೊಳಿಸುವಾಗ ಈ ಎಚ್ಚರಿಕೆ ವಹಿಸಿ ಆಭರಣಗಳನ್ನು ಸ್ವಚ್ಛಗೊಳಿಸುವಾಗ ಅತಿಯಾಗಿ ಜೋರಾಗಿ ಉಜ್ಜಬೇಡಿ, ಇದರಿಂದ ಒಡವೆಯ ಮೇಲೆ ಗೀರುಗಳು (Scratches) ಬೀಳಬಹುದು. ಒಂದು ವೇಳೆ ಆಭರಣಗಳಲ್ಲಿ ಅಮೂಲ್ಯವಾದ ರತ್ನಗಳು ಅಥವಾ ಹರಳುಗಳಿದ್ದರೆ, ಯಾವುದೇ ಮನೆಮದ್ದನ್ನು ಬಳಸುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮ. ನಿಯಮಿತವಾಗಿ ಇಂತಹ ಸಣ್ಣ ಪುಟ್ಟ ಸ್ವಚ್ಛತೆ ಮಾಡುವುದರಿಂದ ನಿಮ್ಮ ಚಿನ್ನದ ಆಭರಣಗಳು ದೀರ್ಘಕಾಲದವರೆಗೆ ಹೊಸದರಂತೆ ಹೊಳೆಯುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.