Kitchen Chimney Cleaning: ಹೀಗೆ ಮಾಡಿದ್ರೆ ಕಿಚನ್ ಚಿಮಣಿ ಮೇಲಿರೋ ಜಿಡ್ಡು, ಹೊಗೆ ಬೇಗ ಹೋಗುತ್ತೆ!

Published : May 15, 2026, 05:06 PM IST

Kitchen Chimney Cleaning Tips: ಕಿಚನ್ ಚಿಮಣಿ ದೀರ್ಘಕಾಲ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ, ತಿಂಗಳಿಗೆ ಒಂದೆರಡು ಸಲನಾದ್ರೂ ಅದನ್ನು ಕ್ಲೀನ್ ಮಾಡ್ಲೇಬೇಕು. ಹೆಚ್ಚು ಖರ್ಚು, ಕಷ್ಟ ಇಲ್ಲದೆ ಚಿಮಣಿಯನ್ನ ಹೊಚ್ಚ ಹೊಸದರಂತೆ ಹೊಳೆಯುವಂತೆ ಮಾಡಲು ಇಲ್ಲಿ 3 ಸ್ಮಾರ್ಟ್ ವಿಧಾನಗಳಿವೆ. 

PREV
14
3 ಸ್ಮಾರ್ಟ್ ವಿಧಾನಗಳು

ಅಡುಗೆ ಮನೆಯಲ್ಲಿ ಪ್ರತಿದಿನ ಅಡುಗೆ ಮಾಡೋದ್ರಿಂದ ಚಿಮಣಿ ಮೇಲೆ ಎಣ್ಣೆ, ಹೊಗೆ ಮತ್ತು ಜಿಡ್ಡು ಕೂತುಕೊಳ್ಳುವುದು ತುಂಬಾನೇ ಕಾಮನ್. ಇದನ್ನು ಸರಿಯಾದ ಸಮಯಕ್ಕೆ ಕ್ಲೀನ್ ಮಾಡಿಲ್ಲ ಅಂದ್ರೆ, ಚಿಮಣಿಯ ಸಕ್ಷನ್ ಪವರ್ ಕಮ್ಮಿ ಆಗುತ್ತೆ ಮತ್ತು ಕಿಚನ್‌ನಲ್ಲಿ ಕೆಟ್ಟ ವಾಸನೆ ಕೂಡ ಬರುತ್ತೆ. ಚಿಮಣಿ ಕ್ಲೀನ್ ಮಾಡಿಸೋಕೆ ಅಂತಾ ಹಲವರು ದುಬಾರಿ ಸರ್ವೀಸ್ ಚಾರ್ಜ್ ಕೊಡ್ತಾರೆ. 

ಮನೆಯಲ್ಲಿರೋ ಕೆಲವು ಸಿಂಪಲ್ ವಸ್ತುಗಳನ್ನು ಬಳಸಿ ನೀವೇ ಅದನ್ನು ಸುಲಭವಾಗಿ ಕ್ಲೀನ್ ಮಾಡಬಹುದು. ಕಿಚನ್ ಚಿಮಣಿಯ ಎಣ್ಣೆ ಜಿಡ್ಡು ಮತ್ತು ಕೊಳೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ 3 ಸ್ಮಾರ್ಟ್ ವಿಧಾನಗಳು ಇಲ್ಲಿವೆ.

24
ಬೇಕಿಂಗ್ ಸೋಡಾ, ಡಿಶ್‌ವಾಶ್ ಲಿಕ್ವಿಡ್ ಬಳಸಿ

ಚಿಮಣಿ ಫಿಲ್ಟರ್ ಮೇಲೆ ಎಣ್ಣೆ ಜಿಡ್ಡು ಹೆಚ್ಚಾಗಿದ್ರೆ, ಬೇಕಿಂಗ್ ಸೋಡಾ ಮತ್ತು ಡಿಶ್‌ವಾಶ್ ಲಿಕ್ವಿಡ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತೆ. ಮೊದಲು ಫಿಲ್ಟರ್ ತೆಗೆದು ಬಿಸಿ ನೀರಿಗೆ ಹಾಕಿ. ಈಗ ಅದಕ್ಕೆ 1-2 ಚಮಚ ಬೇಕಿಂಗ್ ಸೋಡಾ ಮತ್ತು ಸ್ವಲ್ಪ ಡಿಶ್‌ವಾಶ್ ಲಿಕ್ವಿಡ್ ಸೇರಿಸಿ. 15-20 ನಿಮಿಷ ಹಾಗೆಯೇ ಬಿಡಿ. ನಂತರ ಬ್ರಶ್‌ನಿಂದ ನಿಧಾನವಾಗಿ ಉಜ್ಜಿ. ಇದರಿಂದ ಜಿಡ್ಡು ಸುಲಭವಾಗಿ ಬಿಟ್ಟುಕೊಳ್ಳುತ್ತದೆ.

34
ವೈಟ್ ವಿನೆಗರ್, ಬಿಸಿ ನೀರಿನ ಬಳಕೆ

ಚಿಮಣಿಯ ಹೊರಭಾಗ ಮತ್ತು ಹಠಮಾರಿ ಎಣ್ಣೆ ಕಲೆಗಳನ್ನು ತೆಗೆಯಲು ವೈಟ್ ವಿನೆಗರ್ (ಬಿಳಿ ವಿನೆಗರ್) ಒಂದು ಒಳ್ಳೆ ಆಯ್ಕೆ. ಒಂದು ಸ್ಪ್ರೇ ಬಾಟಲಿಯಲ್ಲಿ ಸಮಪ್ರಮಾಣದಲ್ಲಿ ಬಿಸಿ ನೀರು ಮತ್ತು ವಿನೆಗರ್ ಮಿಶ್ರಣ ಮಾಡಿ. ಜಿಡ್ಡಿರುವ ಜಾಗಕ್ಕೆ ಸ್ಪ್ರೇ ಮಾಡಿ. 10 ನಿಮಿಷಗಳ ನಂತರ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ. ಇದರಿಂದ ಚಿಮಣಿ ಹೊಳೆಯಲು ಶುರುವಾಗುತ್ತೆ ಮತ್ತು ಕೆಟ್ಟ ವಾಸನೆಯೂ ಕಡಿಮೆಯಾಗುತ್ತೆ.

44
ನಿಂಬೆ, ಬಿಸಿ ನೀರಿನ ಸ್ಟೀಮ್ ಟ್ರಿಕ್

ಚಿಮಣಿಯಲ್ಲಿ ಎಣ್ಣೆ ಜಿಡ್ಡು ಹೆಚ್ಚಾಗಿದ್ರೆ, ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಅದಕ್ಕೆ ನಿಂಬೆಹಣ್ಣಿನ ಹೋಳುಗಳನ್ನು ಹಾಕಿ. ಈ ಪಾತ್ರೆಯನ್ನು ಚಿಮಣಿಯ ಕೆಳಗೆ ಇಟ್ಟು ಸ್ವಲ್ಪ ಹೊತ್ತು ಕುದಿಸಿ. ಇದರಿಂದ ಬರುವ ಹಬೆಯು ಜಿಡ್ಡನ್ನು ಸಡಿಲಗೊಳಿಸುತ್ತದೆ. ನಂತರ ಒದ್ದೆ ಬಟ್ಟೆಯಿಂದ ಕ್ಲೀನ್ ಮಾಡಿ. ಈ ವಿಧಾನ ನ್ಯಾಚುರಲ್ ಆಗಿದ್ದು, ಕಿಚನ್‌ನಲ್ಲಿ ಫ್ರೆಶ್ ಪರಿಮಳವನ್ನು ನೀಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories