ಇದರಲ್ಲಿ ಬೆಳ್ಳಿ ಆಭರಣಗಳನ್ನು ಮುಳುಗಿಸಿಡಿ ಸಾಕು... ಐದೇ ನಿಮಿಷದಲ್ಲಿ ಫಳ ಫಳ ಹೊಳೆಯುತ್ತೆ

Published : Sep 01, 2026, 06:38 PM IST

Clean silver jewelry at home: ಬೆಳ್ಳಿಯ ಆಭರಣಗಳು ಸಮಯ ಕಳೆದಂತೆ ಗಾಳಿಯ ಸಂಪರ್ಕಕ್ಕೆ ಬಂದು ಕಪ್ಪಾಗುವುದು ಸಾಮಾನ್ಯ. ಇವುಗಳನ್ನು ಮತ್ತೆ ಮೊದಲಿನಂತೆ ಮಿನುಗಿಸಲು ಇನ್ನು ಮುಂದೆ ದುಬಾರಿ ಕೆಮಿಕಲ್ ಅಥವಾ ಪಾಲಿಶ್ ಮಾಡುವ ಅಗತ್ಯವಿಲ್ಲ.

PREV
15
ಎರಡು ಪದಾರ್ಥ ಸಾಕು

ಎರಡು ಪದಾರ್ಥ ಸಾಕು
ನಿಮ್ಮ ನೆಚ್ಚಿನ ಬೆಳ್ಳಿ ಚೈನು, ಉಂಗುರ, ಕಡಗ ಅಥವಾ ಬೆಳ್ಳಿ ನಾಣ್ಯಗಳು ಸಮಯ ಕಳೆದಂತೆ ಕಪ್ಪಾಗುತ್ತಿವೆಯೇ? ಬೆಳ್ಳಿ ಆಭರಣಗಳು ಹಳೆಯದಾದಂತೆ ಅದರ ನೈಜ ಹೊಳಪು ಮರೆಯಾಗಿ ಕಳೆಗುಂದುವುದು ಸಾಮಾನ್ಯ. ಇದಕ್ಕಾಗಿ ಪ್ರತಿ ಬಾರಿ ದುಬಾರಿ ಕೆಮಿಕಲ್ ಕ್ಲೀನರ್‌ಗಳನ್ನು ಬಳಸಬೇಕಿಲ್ಲ ಅಥವಾ ಅಕ್ಕಸಾಲಿಗರ ಬಳಿ ಹೋಗಬೇಕಿಲ್ಲ. ಅಡುಗೆ ಮನೆಯಲ್ಲಿರುವ ಎರಡು ಪದಾರ್ಥ ಬಳಸಿ ಕೇವಲ ಐದೇ ನಿಮಿಷದಲ್ಲಿ ಇವುಗಳನ್ನು ಹೊಸದರಂತೆ ಮಿನುಗಿಸಬಹುದು.

25
ಬೆಳ್ಳಿ ಆಭರಣಗಳು ಕಪ್ಪಾಗಲು ಕಾರಣವೇನು?

ಬೆಳ್ಳಿ ಆಭರಣಗಳು ಕಪ್ಪಾಗಲು ಕಾರಣವೇನು?
ಬೆಳ್ಳಿಯು ಗಾಳಿಯಲ್ಲಿರುವ ಸಲ್ಫರ್ ಸಂಪರ್ಕಕ್ಕೆ ಬಂದಾಗ ಅದರ ಮೇಲೆ ಒಂದು ಕಪ್ಪು ಪದರ ಉಂಟಾಗುತ್ತದೆ. ಇದನ್ನು ವಿಜ್ಞಾನದ ಭಾಷೆಯಲ್ಲಿ 'ಟಾರ್ನಿಷ್' ಎನ್ನಲಾಗುತ್ತದೆ. ಸಾಮಾನ್ಯವಾಗಿ ಪಾಲಿಶ್ ಮಾಡುವಾಗ ಈ ಪದರವನ್ನು ಉಜ್ಜಿ ತೆಗೆಯಲಾಗುತ್ತದೆ, ಆದರೆ ಹೆಚ್ಚು ಉಜ್ಜುವುದರಿಂದ ಆಭರಣದ ಮೇಲೆ ಗೀರುಗಳು ಬೀಳುವ ಸಾಧ್ಯತೆ ಇರುತ್ತದೆ. ಆದರೆ ನಾವಿಲ್ಲಿ ಹೇಳುವ ಈ ವಿಧಾನವು ಯಾವುದೇ ಗೀರು ಬೀಳದಂತೆ ಕಪ್ಪು ಪದರವನ್ನು ತೆಗೆಯಲು ಸಹಾಯ ಮಾಡುತ್ತದೆ.

35
ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು
1 ಶೀಟ್ ಅಲ್ಯೂಮಿನಿಯಂ ಫಾಯಿಲ್.
1 ದೊಡ್ಡ ಚಮಚ ಬೇಕಿಂಗ್ ಸೋಡಾ.
1 ದೊಡ್ಡ ಚಮಚ ಉಪ್ಪು.
2 ರಿಂದ 4 ಕಪ್ ಕುದಿಯುವ ಬಿಸಿ ನೀರು.
ಬಿಸಿ ತಡೆಯಬಲ್ಲ ಒಂದು ಬೌಲ್ ಅಥವಾ ಪಾತ್ರೆ.
ಒರೆಸಲು ಮೃದುವಾದ ಬಟ್ಟೆ.

45
ಶುಚಿಗೊಳಿಸುವ ಹಂತಗಳು

ಶುಚಿಗೊಳಿಸುವ ಹಂತಗಳು
ಹಂತ 1: ಮೊದಲು ಒಂದು ಬೌಲ್ ಅಥವಾ ಪಾತ್ರೆಯ ಒಳಭಾಗಕ್ಕೆ ಅಲ್ಯೂಮಿನಿಯಂ ಫಾಯಿಲ್ ಅನ್ನು ಹರಡಿ. ಫಾಯಿಲ್‌ನ ಹೊಳೆಯುವ ಭಾಗ ಮೇಲ್ಮುಖವಾಗಿರಲಿ.

ಹಂತ 2: ಈಗ ಕಪ್ಪಾದ ಬೆಳ್ಳಿ ಆಭರಣಗಳನ್ನು ಫಾಯಿಲ್‌ನ ಮೇಲೆ ಇಡಿ. ಆಭರಣಗಳು ಫಾಯಿಲ್ ಅನ್ನು ನೇರವಾಗಿ ಸ್ಪರ್ಶಿಸುತ್ತಿರಬೇಕು.

ಹಂತ 3: ಆಭರಣಗಳ ಮೇಲೆ ಬೇಕಿಂಗ್ ಸೋಡಾ ಮತ್ತು ಉಪ್ಪನ್ನು ಸಮಪ್ರಮಾಣದಲ್ಲಿ ಉದುರಿಸಿ.

ಹಂತ 4: ಈಗ ಜಾಗರೂಕತೆಯಿಂದ ಕುದಿಯುವ ಬಿಸಿ ನೀರನ್ನು ಪಾತ್ರೆಗೆ ಸುರಿಯಿರಿ. ಆಭರಣಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರಲಿ.

ಹಂತ 5: ಹೀಗೆ 5 ರಿಂದ 10 ನಿಮಿಷಗಳ ಕಾಲ ಬಿಡಿ. ಅಲ್ಯೂಮಿನಿಯಂ ಫಾಯಿಲ್ ಮತ್ತು ಸೋಡಾದ ನಡುವಿನ ರಾಸಾಯನಿಕ ಪ್ರಕ್ರಿಯೆಯಿಂದ ಬೆಳ್ಳಿಯ ಮೇಲಿರುವ ಕಪ್ಪು ಪದರ ನಿಧಾನವಾಗಿ ಬಿಟ್ಟುಕೊಳ್ಳುತ್ತದೆ.

ಹಂತ 6: ಕೊನೆಯದಾಗಿ ಆಭರಣಗಳನ್ನು ಹೊರತೆಗೆದು ಶುದ್ಧ ನೀರಿನಿಂದ ತೊಳೆದು, ಮೃದುವಾದ ಬಟ್ಟೆಯಿಂದ ನೀರಿಲ್ಲದಂತೆ ಚೆನ್ನಾಗಿ ಒರೆಸಿ.

55
ಯಾವುದೇ ಅಡ್ಡಪರಿಣಾಮ ಇರಲ್ಲ

ಯಾವುದೇ ಅಡ್ಡಪರಿಣಾಮ ಇರಲ್ಲ
ಈ ಸರಳ ಮತ್ತು ನೈಸರ್ಗಿಕ ವಿಧಾನದಿಂದ ನಿಮ್ಮ ಬೆಳ್ಳಿ ಆಭರಣಗಳು ಮತ್ತೆ ಮಿರಮಿರ ಮಿನುಗುತ್ತವೆ. ಯಾವುದೇ ಅಡ್ಡಪರಿಣಾಮವಿಲ್ಲದೆ ಆಭರಣಗಳ ಅಂದವನ್ನು ಹೆಚ್ಚಿಸಲು ಇದು ಅತ್ಯುತ್ತಮ ಮನೆಮದ್ದಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories