Under stairs space ideas: ಈಗಿನ ಕಾಲದಲ್ಲಿ ಇಂಟೀರಿಯರ್ ಡಿಸೈನ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದರಲ್ಲೂ ಹೆಚ್ಚಿನ ಮನೆಗಳಲ್ಲಿ ಮೆಟ್ಟಿಲುಗಳ ಕೆಳಗಿನ ಖಾಲಿ ಜಾಗವನ್ನು ಬಳಸದೆ ಹಾಗೆಯೇ ಬಿಟ್ಟಿರುತ್ತಾರೆ. ಆದರೆ, ಸಣ್ಣದೊಂದು ಐಡಿಯಾ ಇದ್ದರೆ ಈ ಜಾಗವನ್ನು ಸಹ ಸುಂದರವಾಗಿ ಪರಿವರ್ತಿಸಬಹುದು.
ಈಗಂತೂ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರತ್ಯೇಕ ಕೋಣೆ ಇಲ್ಲದಿದ್ದರೂ, ಮೆಟ್ಟಿಲುಗಳ ಕೆಳಗಿನ ಜಾಗವನ್ನು ಪುಟ್ಟ ಕಚೇರಿಯನ್ನಾಗಿ ಪರಿವರ್ತಿಸಬಹುದು. ಒಂದು ಸಣ್ಣ ಡೆಸ್ಕ್, ಆರಾಮದಾಯಕ ಕುರ್ಚಿ ಮತ್ತು ಲ್ಯಾಪ್‌ಟಾಪ್‌ಗೆ ಬೇಕಾದ ವ್ಯವಸ್ಥೆ ಮಾಡಿದರೆ ಸಾಕು. ಅಗತ್ಯ ಫೈಲ್‌ಗಳು, ಪುಸ್ತಕಗಳನ್ನು ಇಡಲು ಗೋಡೆಗೆ ಶೆಲ್ಫ್‌ಗಳನ್ನು ಅಳವಡಿಸಿದರೆ ಇನ್ನೂ ಅನುಕೂಲ. ಡ್ಯೂಪ್ಲೆಕ್ಸ್ ಮನೆಯ ಮೆಟ್ಟಿಲ ಕೆಳಗಿನ ಜಾಗ ಇದಕ್ಕೆ ಹೇಳಿ ಮಾಡಿಸಿದ್ದು.
25
ಪುಸ್ತಕಗಳನ್ನ ಓದುವುದನ್ನು ಇಷ್ಟಪಡುವವರಿಗೆ
ಪುಸ್ತಕಗಳನ್ನು ಓದುವುದನ್ನು ಇಷ್ಟಪಡುವವರಿಗೆ ಮೆಟ್ಟಿಲುಗಳ ಕೆಳಗಿನ ಜಾಗವು ಅದ್ಭುತ ಆಯ್ಕೆಯಾಗಿದೆ. ಒಂದು ಚಿಕ್ಕ ಸೋಫಾ ಅಥವಾ ಕುಶನ್ ಸೀಟಿಂಗ್ ವ್ಯವಸ್ಥೆ ಮಾಡಿ, ಪಕ್ಕದಲ್ಲಿ ಸ್ಟ್ಯಾಂಡಿಂಗ್ ಲ್ಯಾಂಪ್ ಇಟ್ಟರೆ, ಆರಾಮವಾಗಿ ಕುಳಿತು ಓದುವ ಸ್ಥಳವಾಗಿ ಬದಲಾಗುತ್ತದೆ. ಬೆಳಗ್ಗೆ ಟೀ ಕುಡಿಯುತ್ತಾ ಪೇಪರ್ ಓದಲು ಅಥವಾ ಸಂಜೆ ಪುಸ್ತಕಗಳೊಂದಿಗೆ ಸಮಯ ಕಳೆಯಲು ಇದು ಸೂಕ್ತವಾದ ಜಾಗ.
35
ಅಲಂಕಾರಿಕ ವಸ್ತುಗಳ ಪ್ರದರ್ಶನ
ಮೆಟ್ಟಿಲುಗಳ ಕೆಳಗಿನ ಇಳಿಜಾರಿನ ಜಾಗವನ್ನು ಬಳಸಿಕೊಂಡು ವಿಶೇಷ ವಿನ್ಯಾಸದ ಬುಕ್ ಶೆಲ್ಫ್‌ಗಳನ್ನು ಅಳವಡಿಸಬಹುದು. ನಿಮ್ಮ ನೆಚ್ಚಿನ ಪುಸ್ತಕಗಳು, ಪ್ರಶಸ್ತಿಗಳು, ಫೋಟೋ ಫ್ರೇಮ್‌ಗಳು ಅಥವಾ ಅಲಂಕಾರಿಕ ವಸ್ತುಗಳನ್ನು ಇಲ್ಲಿ ಸುಂದರವಾಗಿ ಪ್ರದರ್ಶಿಸಬಹುದು. ಹೀಗೆ ಮಾಡುವುದರಿಂದ ಮನೆಯ ಇಂಟೀರಿಯರ್‌ಗೆ ವಿಶೇಷ ಆಕರ್ಷಣೆ ಬರುತ್ತದೆ ಮತ್ತು ಖಾಲಿ ಜಾಗವೂ ಸದುಪಯೋಗವಾಗುತ್ತದೆ.
ಮನೆಯಲ್ಲಿ ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳಿದ್ದರೆ, ಮೆಟ್ಟಿಲುಗಳ ಕೆಳಗಿನ ಜಾಗವನ್ನು ಅವುಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಬಹುದು. ಆರಾಮದಾಯಕವಾದ ಬೆಡ್, ಆಹಾರ ಇಡುವ ಜಾಗ ಮತ್ತು ಆಟಿಕೆಗಳನ್ನು ಇಡಲು ಒಂದು ಸಣ್ಣ ಕ್ಯಾಬಿನೆಟ್ ವ್ಯವಸ್ಥೆ ಮಾಡಿದರೆ, ಅವುಗಳು ನೆಮ್ಮದಿಯಿಂದ ವಿಶ್ರಾಂತಿ ಪಡೆಯುವ ಸ್ಥಳವಾಗಿ ಬದಲಾಗುತ್ತದೆ. ಇದರಿಂದ ಮನೆಯ ಇತರ ಭಾಗಗಳು ಸಹ ಅಚ್ಚುಕಟ್ಟಾಗಿ ಕಾಣಿಸುತ್ತವೆ.
55
ಮನೆಯ ಅಂದ ದ್ವಿಗುಣ
ಮೆಟ್ಟಿಲುಗಳ ಕೆಳಗಿನ ಖಾಲಿ ಜಾಗವನ್ನು ಸಣ್ಣ ಇಂಡೋರ್ ಗಾರ್ಡನ್ ಆಗಿ ಪರಿವರ್ತಿಸಬಹುದು. ಕುಂಡಗಳಲ್ಲಿನ ಗಿಡಗಳು, ಅಲಂಕಾರಿಕ ಕಲ್ಲುಗಳು ಮತ್ತು ಸಣ್ಣ ಲೈಟಿಂಗ್‌ನೊಂದಿಗೆ ಆ ಜಾಗವನ್ನು ಆಕರ್ಷಕವಾಗಿ ರೂಪಿಸಬಹುದು. ಹತ್ತಿರದಲ್ಲಿ ಕಿಟಕಿ ಇದ್ದರೆ, ನೈಸರ್ಗಿಕ ಬೆಳಕು ಸಿಕ್ಕಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಹಸಿರು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ತರುವುದಲ್ಲದೆ, ಮನೆಯ ಅಂದವನ್ನು ದ್ವಿಗುಣಗೊಳಿಸುತ್ತದೆ.
ಮೆಟ್ಟಿಲ ಕೆಳಗಿನ ಜಾಗ ಚಿಕ್ಕದಾಗಿದ್ದರೂ, ಸರಿಯಾದ ಐಡಿಯಾದಿಂದ ಅದನ್ನು ಮನೆಯ ಅತ್ಯಂತ ಉಪಯುಕ್ತ ಭಾಗವನ್ನಾಗಿ ಮಾಡಿಕೊಳ್ಳಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಡಿಸೈನ್ ಆಯ್ಕೆ ಮಾಡಿಕೊಂಡರೆ, ಹೆಚ್ಚುವರಿ ಕೋಣೆಯ ಅಗತ್ಯವಿಲ್ಲದೆ ಮನೆಯಲ್ಲಿ ಮತ್ತಷ್ಟು ಸೌಕರ್ಯವನ್ನು ಪಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.