ಮಳೆಗಾಲದಲ್ಲಿ ಸಿಡಿಲು ಬಡಿದು ಸಾವನ್ನಪ್ಪುವವರ ಸಂಖ್ಯೆ ಜಾಸ್ತಿ. ಮಳೆಗಾಲದಲ್ಲಿ ಮೊಬೈಲ್ ಬಳಸಲು ಕೆಲವರು ಹೆದರ್ತಾರೆ. ಮೊಬೈಲ್ ಬಳಕೆಯಿಂದ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚು ಅಂತ ನಂಬ್ತಾರೆ. ಅದು ಎಷ್ಟು ಸತ್ಯ?
ಮಳೆ ಬಂದಾಗ ಅಥವಾ ಗುಡುಗು-ಮಿಂಚು ಕಾಣಿಸಿಕೊಂಡಾಗ ಮೊಬೈಲ್ ಬಳಸಲು ಜನ ಹೆದರೋದು ಸಹಜ. ಮೊಬೈಲ್ ಸಿಡಿಲನ್ನು ಆಕರ್ಷಿಸುತ್ತೆ ಎನ್ನುವ ನಂಬಿಕೆ ಇದೆ. ಆದ್ರೆ ತಜ್ಞರು ಇದನ್ನು ಸುಳ್ಳು ಎನ್ನುತ್ತಿದ್ದಾರೆ. ಮೊಬೈಲ್ ಫೋನ್ ಟವರ್ಗಳೊಂದಿಗೆ ರೇಡಿಯೋ ತರಂಗಗಳ ಮೂಲಕ ಸಂಪರ್ಕ ಸಾಧಿಸುತ್ತದೆ. ಈ ರೇಡಿಯೋ ಸಿಗ್ನಲ್ಗಳು ಸಿಡಿಲನ್ನು ಸೆಳೆಯುವಷ್ಟು ಶಕ್ತಿಯುತವಾಗಿರುವುದಿಲ್ಲ. ಹಾಗಾಗಿ ಕೇವಲ ಮೊಬೈಲ್ ಬಳಸುತ್ತಿದ್ದೀರಿ ಎಂಬ ಕಾರಣಕ್ಕೆ ಸಿಡಿಲು ನಿಮ್ಮ ಮೇಲೆ ಬೀಳುವುದಿಲ್ಲ.
25
ಸಿಡಿಲು ಬಡಿಯಲು ಕಾರಣ ಏನು?
ಸಿಡಿಲು ಸಾಮಾನ್ಯವಾಗಿ ಎತ್ತರದ ಸ್ಥಳಗಳಲ್ಲಿ ಬೀಳುತ್ತದೆ. ಮರಗಳು, ವಿದ್ಯುತ್ ಕಂಬಗಳು, ಟವರ್ಗಳು, ತೆರೆದ ಮೈದಾನಗಳು ಹಾಗೂ ಗುಡ್ಡದ ಮೇಲಿರುವವರು ಹೆಚ್ಚು ಅಪಾಯದಲ್ಲಿರುತ್ತಾರೆ. ಆದ್ದರಿಂದ ಇಂತಹ ಸ್ಥಳಗಳಲ್ಲಿ ನಿಲ್ಲುವುದನ್ನು ತಪ್ಪಿಸಬೇಕು.
35
ಮರದ ಕೆಳಗೆ ಆಶ್ರಯ ಪಡೆಯಬೇಡಿ
ಮಳೆ ಬಂದಾಗ ಮರದ ಕೆಳಗೆ ನಿಲ್ಲುವುದು ಸುರಕ್ಷಿತ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ದೊಡ್ಡ ತಪ್ಪು. ಸಿಡಿಲು ಹೆಚ್ಚಾಗಿ ಮರಗಳ ಮೇಲೆ ಬೀಳುವ ಕಾರಣ, ಮರದ ಕೆಳಗೆ ನಿಲ್ಲುವುದು ಜೀವಕ್ಕೆ ಅಪಾಯಕಾರಿಯಾಗಿದೆ.
ತುರ್ತು ಕರೆ ಮಾಡಬೇಕಾದರೆ ಮೊಬೈಲ್ ಬಳಸಬಹುದು. ಆದರೆ ತೆರೆದ ಜಾಗದಲ್ಲಿ ಅಥವಾ ಮರದ ಕೆಳಗೆ ನಿಂತು ಮಾತನಾಡಬೇಡಿ. ಸಾಧ್ಯವಾದರೆ ಸುರಕ್ಷಿತ ಕಟ್ಟಡದ ಒಳಗೆ ಹೋಗಿ ಫೋನ್ ಬಳಸಿ.
55
ಸಿಡಿಲಿಗೆ ಸಾವು
ಪ್ರತಿ ವರ್ಷ ಭಾರತದಲ್ಲಿ ಸಾವಿರಾರು ಜನರು ಸಿಡಿಲು ಬಡಿದು ಸಾಯುತ್ತಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2023 ರಲ್ಲಿ, ದೇಶದಲ್ಲಿ ಸುಮಾರು 2,560 ಜನರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶವು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಒಟ್ಟು ಸಾವುಗಳಲ್ಲಿ ಸರಿಸುಮಾರು ಶೇಕಡಾ 40 ರಷ್ಟಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.