ಸಂಗಾತಿಯನ್ನ ಕೊಂ*ದವರನ್ನು ನೆನಪಿಟ್ಟುಕೊಂಡ ಹಾವು ಸೇಡು ತೀರಿಸಿಕೊಳ್ಳುತ್ತಾ? ಶೇ.99 ರಷ್ಟು ಜನರಿಗೆ ಈ ರಹಸ್ಯ ತಿಳಿದಿಲ್ಲ!

Published : Apr 30, 2026, 07:38 AM IST

Do snakes take revenge: ಸಿನಿಮಾಗಳಲ್ಲಿ ನೋಡುವಂತೆ ಹಾವಿನ ಕಣ್ಣುಗಳಲ್ಲಿ ಹಂತಕನ ಚಿತ್ರ ಅಚ್ಚಾಗಿರುತ್ತದೆಯೇ? ಇಂತಹ ನೂರಾರು ಪ್ರಶ್ನೆ ಮತ್ತು ನಂಬಿಕೆಗಳು ನಮ್ಮ ಜನರಲ್ಲಿ ದಶಕಗಳಿಂದ ಮನೆಮಾಡಿವೆ. ಆದರೆ ಈ ಸೇಡಿನ ಕಥೆಗಳ ಹಿಂದೆ ಅಡಗಿರುವ ಅಸಲಿ ವೈಜ್ಞಾನಿಕ ಸತ್ಯವೇನು? ಆಸಕ್ತಿದಾಯಕ ಮಾಹಿತಿ ಇಲ್ಲಿದೆ. 

PREV
16
ಸಂಗಾತಿಯ ಸಾವಿಗೆ ಕಾರಣ ಯಾರು ಗೊತ್ತಾಗುತ್ತಾ?

ಹಾವು ತನ್ನ ಸಂಗಾತಿ ಸಾವಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುತ್ತೆ ಎಂಬ ನಂಬಿಕೆ ಅನೇಕ ಜನರಲ್ಲಿದೆ. ಆದರೆ ಇದು ನಿಜವಾಗಿಯೂ ನಡೆಯುತ್ತದೆಯೇ?, ಸತ್ತ ಹಾವಿನ ಕಣ್ಣುಗಳನ್ನು ನೋಡಿ, ತನ್ನ ಸಂಗಾತಿಯ ಸಾವಿಗೆ ಕಾರಣ ಯಾರು ಎಂದು ತಿಳಿದುಕೊಂಡು ಹಾವುಗಳು ಪ್ರತೀಕಾರ ತೀರಿಸಿಕೊಳ್ಳುತ್ತವೆಯೇ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂದು ಇಲ್ಲಿ ತಿಳಿಯೋಣ.

26
ಮತ್ಯಾಕೆ ಹಾವು ಪದೇ ಪದೇ ಕಚ್ಚುತ್ತೆ?

ಹಾವುಗಳ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳು ಪ್ರಚಾರದಲ್ಲಿವೆ. ಉದಾಹರಣೆಗೆ, ಒಬ್ಬನೇ ವ್ಯಕ್ತಿಯನ್ನು ಹಾವು ಪದೇ ಪದೇ ಕಚ್ಚಿರುವುದನ್ನು ನೀವು ಪತ್ರಿಕೆಗಳಲ್ಲಿ ಅಥವಾ ಟಿವಿಯಲ್ಲಿ ನೋಡಿರಬಹುದು. ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.

36
ಸೇಡು ತೀರಿಸಿಕೊಳ್ಳಬಲ್ಲವೇ?

ಹಾವುಗಳು ದ್ವೇಷ ಸಾಧಿಸುತ್ತವೆಯೇ? ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳಬಲ್ಲವೇ? ಎಂಬ ಪ್ರಶ್ನೆಗೆ ಉತ್ತರ 'ಇಲ್ಲ' ಎಂದೇ ಹೇಳಬಹುದು. ವಿಜ್ಞಾನಿಗಳ ಪ್ರಕಾರ, ಹಾವುಗಳ ಮೆದುಳು ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲ. ಆದ್ದರಿಂದ, ಅವು ಯಾವುದೇ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳುವ ಸಾಧ್ಯತೆಯೇ ಇಲ್ಲ.

46
ಅದು ಕಚ್ಚೋದು ಯಾವಾಗ?

ಆದುದರಿಂದ ಹಾವು ಯಾರ ಮೇಲೆಯೂ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ಆದರೆ ನೀವು ಅದರ ದಾರಿಗೆ ಅಡ್ಡ ಬಂದರೆ ಅಥವಾ ಅದಕ್ಕೆ ಅಪಾಯವಿದೆ ಎಂದು ಅನಿಸಿದರೆ ಮಾತ್ರ ಅದು ಕಚ್ಚುತ್ತದೆ. ಆದರೆ ಸತ್ತ ಹಾವಿನ ಸುತ್ತಮುತ್ತ ಮತ್ತೊಂದು ಹಾವು ಸುರುಳಿ ಸುತ್ತಿಕೊಂಡು ಇರುವುದನ್ನು ನೀವು ಹಲವು ಬಾರಿ ನೋಡಿರಬಹುದು. ಹೀಗೆ ಏಕೆ ಸಂಭವಿಸುತ್ತದೆ ಎಂದರೆ..?

56
ಸಂಗಾತಿ ಹಾವನ್ನ ಆಕರ್ಷಿಸುತ್ತೆ!

ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಹಾವು ಸತ್ತಾಗ ಅದರ ದೇಹದಿಂದ ಒಂದು ವಿಶೇಷವಾದ ವಾಸನೆ ಬರಲು ಪ್ರಾರಂಭವಾಗುತ್ತದೆ. ಈ ವಾಸನೆಯು ಅದರ ಸಂಗಾತಿ ಹಾವನ್ನು ತನ್ನತ್ತ ಆಕರ್ಷಿಸುತ್ತದೆ.

66
ವಿಜ್ಞಾನಿಗಳು ಹೇಳೋದೇನು?

ಆದ್ದರಿಂದ ಯಾವಾಗಲೂ ನೆನಪಿಡಬೇಕಾದ ಒಂದು ವಿಷಯವೆಂದರೆ, ಹಾವು ಯಾರ ಮೇಲೆಯೂ ಸೇಡು ತೀರಿಸಿಕೊಳ್ಳುವುದಿಲ್ಲ. ತನಗೆ ಅಪಾಯವಿದೆ ಎಂದು ಭಾವಿಸಿದಾಗ ಮಾತ್ರ ಅದು ದಾಳಿ ಮಾಡಿ ಕಚ್ಚುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories