Udupi style coconut chutney: ದೋಸೆ ಅಥವಾ ಇಡ್ಲಿಗೆ ಪ್ರತಿದಿನ ಮಾಡುವ ಸಾಧಾರಣ ಚಟ್ನಿ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಉಡುಪಿ ಹೋಟೆಲ್‌ಗಳಲ್ಲಿ ಸಿಗುವ ಆ ವಿಶಿಷ್ಟ ರುಚಿಯ ಚಟ್ನಿಯನ್ನು ನೀವೇಕೆ ಮನೆಯಲ್ಲಿ ಪ್ರಯತ್ನಿಸಬಾರದು?.
ಇಡ್ಲಿ, ದೋಸೆಗೆ ಯಾವಾಗಲೂ ಒಂದೇ ರೀತಿಯ ಚಟ್ನಿ ತಿಂದು ಬೇಜಾರಾಗಿದ್ದರೆ, ಈ ಬಾರಿ ಸ್ವಲ್ಪ ವಿಭಿನ್ನವಾದ ರುಚಿ ಹೊಂದಿರುವ ಉಡುಪಿ ಸ್ಟೈಲ್ ಚಟ್ನಿ ಪ್ರಯತ್ನಿಸಿ. ಇದರಲ್ಲಿ ಗೋಡಂಬಿ, ಪುದೀನಾ ಮತ್ತು ಬೆಳ್ಳುಳ್ಳಿ ಬಳಸುವುದರಿಂದ ಇದಕ್ಕೆ ವಿಶೇಷವಾದ ಸುವಾಸನೆ ಮತ್ತು ರುಚಿ ಸಿಗುತ್ತದೆ.
25
ಬೇಕಾಗುವ ಸಾಮಗ್ರಿಗಳು
ತುರಿದ ಹಸಿ ಕೊಬ್ಬರಿ: 1/2 ಕಪ್ ಗೋಡಂಬಿ: 1/4 ಕಪ್ ಕೊತ್ತಂಬರಿ ಸೊಪ್ಪು: ಒಂದು ಹಿಡಿಯಷ್ಟು ಪುದೀನಾ ಎಲೆಗಳು: 8–10 ಹಸಿಮೆಣಸಿನಕಾಯಿ: 4–5 ಬೆಳ್ಳುಳ್ಳಿ ಎಸಳು: 4–5 ಶುಂಠಿ: ಒಂದು ಸಣ್ಣ ತುಂಡು ಹುಣಸೆಹಣ್ಣು: ಸ್ವಲ್ಪ ಉಪ್ಪು: ರುಚಿಗೆ ತಕ್ಕಷ್ಟು ನೀರು: ಅವಶ್ಯಕತೆಗೆ ತಕ್ಕಂತೆ
35
ಒಗ್ಗರಣೆಗೆ
ಎಣ್ಣೆ:2 ಟೇಬಲ್ ಚಮಚ ಸಾಸಿವೆ:1/2 ಟೀ ಚಮಚ ಉದ್ದಿನ ಬೇಳೆ:1 ಟೀ ಚಮಚ ಒಣ ಮೆಣಸಿನಕಾಯಿ:1
ಮೊದಲು ಹಸಿ ಕೊಬ್ಬರಿಯನ್ನು ತುರಿದು ಇಟ್ಟುಕೊಳ್ಳಿ. ಕೊತ್ತಂಬರಿ ಮತ್ತು ಪುದೀನಾ ಎಲೆಗಳನ್ನು ಸ್ವಚ್ಛವಾಗಿ ತೊಳೆದಿಡಿ. ಶುಂಠಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಗೋಡಂಬಿ, ಕೊತ್ತಂಬರಿ ಸೊಪ್ಪು, ಪುದೀನಾ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ (ಸ್ಮೂತ್ ಆಗಿ) ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ವರ್ಗಾಯಿಸಿ. ನಿಮಗೆ ಬೇಕಾದ ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಸೇರಿಸಿ ಸರಿಪಡಿಸಿಕೊಳ್ಳಿ.
55
ಒಗ್ಗರಣೆ ಹಾಕುವ ವಿಧಾನ
ಒಂದು ಸಣ್ಣ ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ ಹಾಕಿ, ಅದು ಸಿಡಿದ ಮೇಲೆ ಉದ್ದಿನ ಬೇಳೆ ಮತ್ತು ಒಣ ಮೆಣಸಿನಕಾಯಿ ಸೇರಿಸಿ ಕೆಂಪಾಗುವವರೆಗೆ ಹುರಿಯಿರಿ. ಈ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿ ಚೆನ್ನಾಗಿ ಬೆರೆಸಿ. ಈಗ ರುಚಿಕರವಾದ ಉಡುಪಿ ಸ್ಟೈಲ್ ಕೊಬ್ಬರಿ ಚಟ್ನಿ ಸಿದ್ಧ! ಇದು ಇಡ್ಲಿ, ದೋಸೆ, ವಡೆ ಅಥವಾ ಉಪ್ಪಿಟ್ಟಿನ ಜೊತೆಗೆ ತಿನ್ನಲು ತುಂಬಾ ಅದ್ಭುತವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.