Geyser Safety Tips : ಆರು ತಿಂಗಳ ನಂತ್ರ ಗೀಸರ್ ಆನ್‌ ಮಾಡ್ತಿದ್ದರೆ ಸ್ವಿಚ್ ಒತ್ತುವ ಈ ತಪ್ಪನ್ನು ಮಾಡಬೇಡಿ

Published : Sep 28, 2026, 02:49 PM IST

ಬಹುತೇಕ ಭಾರತೀಯರ ಮನೆಯಲ್ಲಿ ಗೀಸರ್ ಬಳಕೆ ಸಾಮಾನ್ಯವಾಗಿದೆ. ಚಳಿ- ಮಳೆಗಾಲದಲ್ಲಿ ಬೆಳ್ಳಂಬೆಳಿಗ್ಗೆ ಜನರು ಗೀಸರ್ ನಿಂದ ಬರುವ ಬೆಚ್ಚಗಿನ ನೀರನ್ನು ಬಳಸ್ತಾರೆ. ಆದ್ರೆ ಗೀಸರ್‌ ಬಳಸುವಾಗ ಎಚ್ಚರಿಕೆ ಬಹಳ ಮುಖ್ಯ. ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ಅಪಾಯ ನಿಶ್ಚಿತ.

PREV
14
ಗೀಸರ್ ಬಳಸುವ ಮುನ್ನ ವೈರ್ ಮತ್ತು ಸ್ವಿಚ್ ಪರಿಶೀಲಿಸಿ

ಪ್ರತಿ ದಿನ ಗೀಸರ್‌ ಬಳಸ್ತಿದ್ದರೆ ಆಗಾಗ ಅದರನ್ನು ಸರ್ವಿಸ್‌ ಮಾಡುವುದು ಮುಖ್ಯ. ಅದೇ ನೀವು ಬಹಳ ದಿನಗಳ ನಂತರ ಗೀಸರ್ ಆನ್ ಮಾಡುತ್ತಿದ್ದರೆ, ತಕ್ಷಣ ಸ್ವಿಚ್ ಆನ್ ಮಾಡಿ ಬಳಸಬೇಡಿ. ಮೊದಲು ಗೀಸರ್ನ ಸ್ವಿಚ್, ವೈರ್ ಮತ್ತು ಹೀಟಿಂಗ್ ಎಲಿಮೆಂಟ್ಗಳನ್ನು ಪರಿಶೀಲಿಸಿ. ಯಾವುದೇ ವೈರ್ ಹಾಳಾಗಿದ್ದರೆ, ಸುಟ್ಟ ಗುರುತು ಕಂಡುಬಂದರೆ ಅಥವಾ ಬೇರೆ ರೀತಿಯ ಸಮಸ್ಯೆ ಕಂಡುಬಂದರೆ ತಕ್ಷಣ ಎಲೆಕ್ಟ್ರಿಷಿಯನ್ನಿಂದ ಸರಿಪಡಿಸಿಕೊಳ್ಳಿ.

24
ಇವುಗಳನ್ನು ಚೆಕ್ ಮಾಡಿ

ಗೀಸರ್ ಹಲವು ತಿಂಗಳುಗಳಿಂದ ಬಳಕೆಯಾಗದೆ ಇದ್ದರೆ ಸೇಫ್ಟಿ ವಾಲ್ವ್, ಥರ್ಮೋಸ್ಟಾಟ್ ಹಾಗೂ ನೀರು ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ಇಂತಹ ಪರಿಶೀಲನೆಗಳನ್ನು ತಜ್ಞರಿಂದ ಮಾಡಿಸಿಕೊಳ್ಳುವುದು ಉತ್ತಮ. ಗೀಸರ್ ಅಥವಾ ಪೈಪ್ನಲ್ಲಿ ಯಾವುದೇ ಲೀಕೇಜ್ ಕಂಡುಬಂದರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ಸರಿಪಡಿಸಬೇಕು.

34
ನೇರವಾಗಿ ಸ್ನಾನಕ್ಕೆ ಹೋಗಬೇಡಿ

ಎಲ್ಲವನ್ನೂ ಪರಿಶೀಲಿಸಿದ ನಂತರವೂ ಗೀಸರ್ ಅನ್ನು ತಕ್ಷಣ ಆನ್ ಮಾಡಿ ಸ್ನಾನಕ್ಕೆ ಹೋಗಬೇಡಿ. ಮೊದಲು ಸ್ವಲ್ಪ ಸಮಯ ಗೀಸರ್ ಕಾರ್ಯನಿರ್ವಹಿಸುತ್ತಿದೆಯೇ ಎಂದು ಗಮನಿಸಿ. ಗೀಸರ್ನಿಂದ ಅಸಹಜ ಶಬ್ದ ಬರುತ್ತಿದೆಯೇ, ನೀರು ಸರಿಯಾಗಿ ಬಿಸಿಯಾಗುತ್ತಿದೆಯೇ ಅಥವಾ ವಿದ್ಯುತ್ ಲೀಕೇಜ್ನ ಯಾವುದೇ ಲಕ್ಷಣವಿದೆಯೇ ಎಂಬುದನ್ನು ಗಮನಿಸಿ. ಏನಾದರೂ ಸಮಸ್ಯೆ ಕಂಡುಬಂದರೆ ತಕ್ಷಣ ಗೀಸರ್ ಆಫ್ ಮಾಡಿ ತಜ್ಞರಿಂದ ಪರಿಶೀಲಿಸಿಕೊಳ್ಳಿ.

44
ಗೀಸರ್ ಸರ್ವಿಸ್

ಎಸಿಗೆ ಸರ್ವಿಸ್ ಮಾಡಿಸುವಂತೆ ಗೀಸರ್ಗೂ ನಿಯಮಿತವಾಗಿ ಸರ್ವಿಸ್ ಮಾಡಿಸುವುದು ಅಗತ್ಯ. ವಿಶೇಷವಾಗಿ ಹಲವು ತಿಂಗಳುಗಳಿಂದ ಗೀಸರ್ ಬಳಸದೆ ಇದ್ದರೆ ಮತ್ತೆ ಬಳಸುವ ಮೊದಲು ಒಮ್ಮೆ ಸರ್ವಿಸ್ ಮಾಡಿಸಿಕೊಳ್ಳುವುದು ಸುರಕ್ಷಿತ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories