ಮೂರು ನಿಗೂಢ ವಸ್ತುಗಳ ಲಿಕ್ವಿಡ್‌ನಿಂದ ಕ್ಲೀನ್ ಮಾಡಿದ್ರೆ ಕನ್ನಡಿ, ಗಾಜಿನ ಪರಿಕರ ಫಳಫಳ

Published : Sep 21, 2026, 01:18 PM IST

ಮನೆಯಲ್ಲಿರುವ ಕನ್ನಡಿ ಮತ್ತು ಗಾಜಿನ ವಸ್ತುಗಳನ್ನು ಸ್ವಚ್ಛಗೊಳಿಸಲು ಈ ಮಿಶ್ರಣವು ಅತ್ಯಂತ ಪರಿಣಾಮಕಾರಿಯಾಗಿದೆ. ಈ ದ್ರವವನ್ನು ಬಳಸಿ ಕನ್ನಡಿ, ಲೋಹದ ಪೀಠೋಪಕರಣಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ಮೇಲಿನ ಕಲೆಗಳನ್ನು ಸುಲಭವಾಗಿ ತೆಗೆಯಬಹುದು.

PREV
15
ಕ್ಲೀನಿಂಗ್‌ಗೆ ಅಲ್ಕೋಹಾಲ್ ಬಳಕೆ

ಮನೆಯಲ್ಲಿರುವ ಕನ್ನಡಿ, ಕಿಟಕಿಗೆ ಅಳವಡಿಸಲಾಗಿರುವ ಗಾಜು ಸೇರಿದಂತೆ ಇನ್ನಿತರ ವಸ್ತುಗಳನ್ನು ಕ್ಲೀನ್ ಮಾಡೋದು ಸವಾಲಿನ ಕೆಲಸವಾಗಿದೆ. ಹೆಚ್ಚು ಕೆಮಿಕಲ್ ಬಳಕೆಯಾದ್ರೆ ಗಾಜಿನ ಮೇಲೆ ಕೊಳೆ ಹಾಗೆಯೇ ಉಳಿಯುತ್ತವೆ. ಗಾಜು ಜೋರಾಗಿ ಉಜ್ಜೋದರಿಂದ ಗೆರೆಗಳು ಉಳಿಯುತ್ತವೆ. ಇಂದು ನಾವು ನಿಮಗೆ ಮನೆಯಲ್ಲಿರುವ ಎರಡು ವಸ್ತುಗಳ ಜೊತೆ ಅಲ್ಕೋಹಾಲ್ ಬಳಸಿದ್ರೆ ಗಾಜಿನ ಪರಿಕರಗಳು ಫಳಫಳ ಎಂದು ಹೊಳೆಯುತ್ತವೆ.

25
ಬೇಕಾಗುವ ಸಾಮಾಗ್ರಿ ಮತ್ತು ಲಿಕ್ವಿಡ್ ತಯಾರಿಸುವ ವಿಧಾನ

ವಿನೆಗರ್, ಕಾರ್ನ್‌ಸ್ಟಾರ್ಚ್ ಮತ್ತು ಆಲ್ಕೋಹಾಲ್

ಈ ಮೂರು ವಸ್ತುಗಳನ್ನು ಒಂದು ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸ್ಪ್ರೇಗೆ ಮಾದರಿಯಷ್ಟು ಬೇಕಾಗುವಷ್ಟು ದ್ರವ ಸೇರಿಸಿಕೊಳ್ಳಿ. ನೀವು ತಯಾರಿಸುವ ಲಿಕ್ವಿಡ್ ಗಾಢವಾಗಿರುವಂತೆ ನೋಡಿಕೊಳ್ಳಬೇಕು.

35
ಕ್ಲೀನಿಂಗ್ ಮಾಡೋದು ಹೇಗೆ?

ಮೊದಲಿಗೆ ಕನ್ನಡಿಯನ್ನು ಸ್ವಚ್ಚ ನೀರಿನಿಂದ ತೊಳೆದುಕೊಂಡು ಒಣಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಸ್ಕ್ರಬರ್‌ನ್ನು ತಯಾರಿಸಿಕೊಂಡಿರುವ ಲಿಕ್ವಿಡ್‌ನಲ್ಲಿ ಅದ್ದಿ ಕನ್ನಡಿ ಮೇಲೆ ಒರೆಸಿಕೊಳ್ಳಿ. ನಿಮ್ಮಲ್ಲಿ ಸ್ಕ್ರಬರ್‌ ಇಲ್ಲದಿದ್ರೆ ಕಾಟನ್ ಬಟ್ಟೆ ಬಳಸಿಕೊಳ್ಳಬಹುದು.

45
ಕನ್ನಡಿ ಮತ್ತು ಗಾಜಿನ ಪರಿಕರ

ಕನ್ನಡಿ ಮೇಲೆ ಒರೆಸಿದ ನಂತರ 10 ರಿಂದ 15 ನಿಮಿಷ ಬಿಡಬೇಕು. ಆ ಬಳಿಕ ತಣ್ಣೀರಿನಿಂದ ಕನ್ನಡಿ ಮತ್ತು ಗಾಜಿನ ಪರಿಕರಗಳನ್ನು ತೊಳೆದುಕೊಳ್ಳಿ. ನೀರಿನಿಂದ ತೊಳೆದ ನಂತರ ಒಣಬಟ್ಟೆಯಿಂದ ಒರೆಸಿಕೊಂಡರೆ ಕನ್ನಡಿ ಸ್ವಚ್ಛವಾಗುತ್ತದೆ.

55
ಇನ್ನಿತರ ವಸ್ತುಗಳು

ಕನ್ನಡಿ, ಗಾಜಿನ ವಸ್ತುಗಳ ಜೊತೆಯಲ್ಲಿ ಲೋಹದ ಪೀಠೋಪಕರಣ, ಫ್ಯಾನ್ಸ್, ಕಬ್ಬಿಣದ ತಿಜೋರಿ, ಪ್ಲಾಸ್ಟಿಕ್ ಕುರ್ಚಿಗಳನ್ನು ಸಹ ಈ ಲಿಕ್ವಿಡ್‌ನಿಂದ ತೊಳೆದುಕೊಳ್ಳಬಹುದು. ಮನೆಯಲ್ಲಿರುವ ಇನ್ನಿತರ ವಸ್ತುಗಳ ಮೇಲಿನ ಕಲೆಗಳು ಸಹ ಸುಲಭವಾಗಿ ಕ್ಲೀನ್ ಆಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories