ನೇರಳೆ ಮರದ ತುಂಡನ್ನು ವಾಟರ್‌ ಟ್ಯಾಂಕ್‌ನಲ್ಲಿ ಹಾಕಿಡಿ, 10 ವರ್ಷ ಕ್ಲೀನ್‌ ಮಾಡೋ ಕೆಲಸನೇ ಇರಲ್ಲ!

Published : Nov 04, 2024, 05:09 PM IST

ನೀರಿನ ಟ್ಯಾಂಕ್‌ನಲ್ಲಿ ಬ್ಯಾಕ್ಟೀರಿಯಾ, ಫಂಗಸ್‌ಗಳ ಬೆಳವಣಿಗೆ ತಡೆಯಲು ನೇರಳೆ ಮರದ ತುಂಡು ಹಾಕುವುದು ಒಳ್ಳೆಯದು ಅಂತ ತಜ್ಞರು ಹೇಳ್ತಾರೆ.

PREV
15
ನೇರಳೆ ಮರದ ತುಂಡನ್ನು ವಾಟರ್‌ ಟ್ಯಾಂಕ್‌ನಲ್ಲಿ ಹಾಕಿಡಿ, 10 ವರ್ಷ ಕ್ಲೀನ್‌ ಮಾಡೋ ಕೆಲಸನೇ ಇರಲ್ಲ!
ನೀರಿನ ಟ್ಯಾಂಕ್

ಮನೆಯ ನೀರಿನ ಟ್ಯಾಂಕ್‌ನ ಸ್ವಚ್ಛತೆ ಮುಖ್ಯ. ಸ್ವಚ್ಛಗೊಳಿಸದಿದ್ದರೆ ಫಂಗಸ್, ಬ್ಯಾಕ್ಟೀರಿಯಾ ಬೆಳೆದು ನೀರು ಕೆಡುತ್ತದೆ. ಕಲುಷಿತ ನೀರು ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.

25
ನೀರಿನ ಟ್ಯಾಂಕ್

ನೇರಳೆ ಮರದ ತುಂಡು ಟ್ಯಾಂಕ್‌ನಲ್ಲಿ ಹಾಕಿದ್ರೆ ಸೂಕ್ಷ್ಮಜೀವಿಗಳ ಬೆಳವಣಿಗೆ ತಡೆಯುತ್ತೆ ಅಂತಾ ತಜ್ಞರು ಹೇಳ್ತಾರೆ. ನೇರಳೆ ಮರದಲ್ಲಿ ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ.

35
ನೇರಳೆ ಮರದಿಂದ ಟ್ಯಾಂಕ್ ಕ್ಲೀನ್

ನೇರಳೆ ಮರದ ತುಂಡು ಟ್ಯಾಂಕ್‌ನಲ್ಲಿ ಹಾಕಿದ್ರೆ ಬ್ಯಾಕ್ಟೀರಿಯಾ, ಫಂಗಸ್‌ಗಳನ್ನ ತೆಗೆದು ನೀರು ಶುದ್ಧವಾಗಿರುತ್ತೆ. ಹೀಗೆ ಮಾಡಿದ್ರೆ 10 ವರ್ಷ ಫಂಗಸ್ ಸಮಸ್ಯೆ ಇರಲ್ಲ. ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಅಲ್ಲದೇ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಕೀಟಗಳು ಅಥವಾ ಹಸಿರು ಪಾಚಿ ಸಂಗ್ರಹವಾಗುವುದನ್ನು ತಡೆಯುತ್ತದೆ.

45
ನೇರಳೆ ಮರದಿಂದ ಟ್ಯಾಂಕ್ ಕ್ಲೀನ್

ನೀರು ಕೆಡದಂತೆ ನೇರಳೆ ಮರದ ತುಂಡನ್ನು ಸ್ವಚ್ಛಮಾಡಿ ಟ್ಯಾಂಕ್‌ನಲ್ಲಿ ಹಾಕಬೇಕು. ಕನಿಷ್ಠ 200 ಗ್ರಾಂ ತೂಕದ ತುಂಡನ್ನು ಟ್ಯಾಂಕ್‌ನಲ್ಲಿ ಹಾಕಿದರೆ ಒಳ್ಳೆಯದು.

55
ನೇರಳೆ ಮರದಿಂದ ಟ್ಯಾಂಕ್ ಕ್ಲೀನ್

ನೇರಳೆ ಮರದ ತುಂಡಿನ ಬದಲು ಎಲೆಗಳನ್ನು ಕೂಡ ಬಳಸಬಹುದು. ಆದರೆ ಮರದ ತುಂಡು ಗಟ್ಟಿಯಾಗಿರುವುದರಿಂದ ಅದನ್ನು ಬಳಸುವುದು ಉತ್ತಮ. ನೇರಳೆ ಮರದ ವಿಶೇಷತೆ ಇದೆ. ಅದೇನೆಂದರೆ, ಇದು ನೀರಿನಲ್ಲಿ ಕೊಳೆಯುವುದಿಲ್ಲ. ಪ್ರಾಚೀನ ಕಾಲದಿಂದಲೂ ದೋಣಿಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತಿತ್ತು. (Disclaimer: ಈ ಲೇಖನವು ಇಂಟರ್ನೆಟ್‌ನಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Asianet Suvarna Newsಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಇದಕ್ಕೆ ಜವಾಬ್ದಾರಿಯಲ್ಲ)

Read more Photos on
click me!

Recommended Stories