ಈ ಆಹಾರಗಳನ್ನ ಕುಕ್ಕರ್‌ನಲ್ಲಿ ಬೇಯಿಸೋಕೆ ಹೋಗ್ಬೇಡಿ

First Published | Nov 4, 2024, 5:00 PM IST

ಬೇಗ ಅಡುಗೆ ಆಗುತ್ತೆ ಎಂಬ ಕಾರಣಕ್ಕೆ ಬಹುತೇಕರು ಪ್ರೆಶರ್ ಕುಕ್ಕರ್‌ನಲ್ಲಿ ತರಕಾರಿ ಬೇಳೆ ಸೇರಿದಂತೆ ಎಲ್ಲವನ್ನು ಬೇಯಿಸಿ ಅಡುಗೆ ಮಾಡುತ್ತಾರೆ. ಇದರಿಂದ ಆಹಾರದ ಪೌಷ್ಟಿಕಾಂಶ ಕಡಿಮೆ ಆಗುತ್ತವಂತೆ. ಕೆಲವು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸಲೇಬಾರದಂತೆ ಆ ಆಹಾರ ಯಾವುದು ಹಾಗೆ ಯಾಕೆ ಅಂತ ಇಲ್ಲಿದೆ ಮಾಹಿತಿ.

ಪ್ರೆಶರ್ ಕುಕ್ಕರ್ ಬಹುತೇಕ ಎಲ್ಲರ ಮನೆಯಲ್ಲೂ ಇರುತ್ತದೆ. ಬಹಳಷ್ಟು ಜನ ಪ್ರೆಶರ್ ಕುಕ್ಕರ್‌ನಲ್ಲಿಯೇ ಅಡುಗೆ ಮಾಡುತ್ತಾರೆ. ಯಾಕಂದ್ರೆ.. ಇದರಲ್ಲಿ ಅಡುಗೆ ಮಾಡುವುದು ತುಂಬಾ ಸುಲಭ. ಹೆಚ್ಚು ಹೊತ್ತು ಒಲೆಯ ಹತ್ತಿರ ನಿಲ್ಲಬೇಕಾಗಿಲ್ಲ. ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಎಲ್ಲರೂ ಪ್ರೆಶರ್ ಕುಕ್ಕರ್ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಈ ಪ್ರೆಶರ್ ಕುಕ್ಕರ್‌ನಲ್ಲಿ ಎಲ್ಲಾ ರೀತಿಯ ಅಡುಗೆಗಳನ್ನು ಮಾಡಬಾರದಂತೆ.

ಪ್ರೆಶರ್ ಕುಕ್ಕರ್

ತಜ್ಞರ ಪ್ರಕಾರ, ಸಾಮಾನ್ಯವಾಗಿ ಅಡುಗೆ ಮಾಡುವುದಕ್ಕಿಂತ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಆಹಾರದ ಪೌಷ್ಟಿಕಾಂಶಗಳು ಕಡಿಮೆಯಾಗುತ್ತವಂತೆ. ಕೆಲವು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸಲೇಬಾರದಂತೆ. ಅದೇಕೆ ಎಂಬುದನ್ನು ತಿಳಿದುಕೊಳ್ಳೋಣ..

Latest Videos


ಅನ್ನ: ನಮ್ಮಲ್ಲಿ ಬಹಳಷ್ಟು ಜನ ಪ್ರೆಶರ್ ಕುಕ್ಕರ್‌ನಲ್ಲಿ ಅನ್ನ ಬೇಯಿಸುತ್ತಾರೆ. ಆದರೆ.. ಅನ್ನವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದಂತೆ. ಯಾಕಂದ್ರೆ ಕುಕ್ಕರ್‌ನಲ್ಲಿ ಅನ್ನ ಬೇಯಿಸುವುದರಿಂದ ಅದರ ಒತ್ತಡದಿಂದಾಗಿ ಜೀರ್ಣಕ್ರಿಯೆ ಸಮಸ್ಯೆಗಳು ಬರುತ್ತವಂತೆ. ಅಷ್ಟೇ ಅಲ್ಲ, ಯೂರಿಕ್ ಆಸಿಡ್ ಕೂಡ ಹೆಚ್ಚಾಗಲು ಕಾರಣವಾಗುತ್ತದೆಯಂತೆ

ಸೊಪ್ಪುಗಳು: ಬಹಳಷ್ಟು ಜನ ಪ್ರೆಶರ್ ಕುಕ್ಕರ್‌ನಲ್ಲಿ ಸೊಪ್ಪುಗಳನ್ನು ಬೇಯಿಸುತ್ತಾರೆ. ಆದರೆ.. ಸೊಪ್ಪುಗಳನ್ನು ಕೂಡ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದಂತೆ. ಯಾಕಂದ್ರೆ ಹೀಗೆ ಬೇಯಿಸುವುದರಿಂದ ಅದರಿಂದ ನೈಟ್ರೋಜನ್ ಅನಿಲ ಬಿಡುಗಡೆಯಾಗುತ್ತದಂತೆ. ಇದು ವಿಷಕಾರಿಯಾಗುತ್ತದೆ.

ನೂಡಲ್ಸ್: ನೂಡಲ್ಸ್‌ಗಳನ್ನು ಕೂಡ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದಂತೆ. ಯಾಕಂದ್ರೆ ಇವುಗಳಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ. ಈ ಪಿಷ್ಟ ಹೊರಗೆ ಹೋಗಬೇಕು. ಇದು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ, ಜಾಗ್ರತೆ ವಹಿಸಬೇಕು

ಮೀನು: ಮೀನುಗಳನ್ನು ಕೂಡ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಹೀಗೆ ಬೇಯಿಸುವುದರಿಂದ ಮೀನಿನ ರುಚಿ ಹಾಳಾಗುವುದಲ್ಲದೆ, ಅದರಿಂದ ಬ್ಯಾಕ್ಟೀರಿಯಾ ಹೊರಬಂದು ನಮ್ಮ ಆರೋಗ್ಯವನ್ನು ಹಾಳುಮಾಡುತ್ತದಂತೆ. ಆದ್ದರಿಂದ ಆ ತಪ್ಪು ಮಾಡಬಾರದು. ಮೀನಿನಲ್ಲಿರುವ ಪೌಷ್ಟಿಕಾಂಶಗಳು ಕೂಡ ಕಡಿಮೆಯಾಗುತ್ತವೆ, ಮೀನು ಮಾತ್ರವಲ್ಲ ಸಮುದ್ರ ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸಬಾರದು.

ಪಾಸ್ತಾ: ಪಾಸ್ತಾವನ್ನು ಕೂಡ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಯಾಕಂದ್ರೆ.. ಪಾಸ್ತಾದಲ್ಲೂ ಪಿಷ್ಟ ಹೆಚ್ಚಾಗಿರುತ್ತದೆ. ಆದ್ದರಿಂದ ಇದನ್ನು ಕುಕ್ಕರ್‌ನಲ್ಲಿ ಬೇಯಿಸಿ ತಿನ್ನುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ.

ಬಟಾಟೆ: ನೀವು ಬಟಾಟೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುತ್ತಿದ್ದರೆ.. ಆ ಅಭ್ಯಾಸವನ್ನು ಈಗಲೇ ಬದಲಾಯಿಸಿಕೊಳ್ಳಿ. ಯಾಕಂದ್ರೆ .. ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪೌಷ್ಟಿಕಾಂಶಗಳು ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

click me!