ಸೀಲಿಂಗ್ Vs ಟೇಬಲ್ ಫ್ಯಾನ್: ವಿದ್ಯುತ್ ಬಿಲ್ ಉಳಿಸಲು ನಿಮ್ಮ ಮನೆಗೆ ಯಾವುದು ಬೆಸ್ಟ್?

Published : Apr 13, 2026, 05:57 PM IST

ಸೀಲಿಂಗ್ ಫ್ಯಾನ್ ಮತ್ತು ಟೇಬಲ್ ಫ್ಯಾನ್‌ಗಳ ನಡುವಿನ ವ್ಯತ್ಯಾಸವೇನು? ಸೀಲಿಂಗ್ ಫ್ಯಾನ್ ಇಡೀ ಕೋಣೆಗೆ ಗಾಳಿ ನೀಡಿದರೆ, ಟೇಬಲ್ ಫ್ಯಾನ್ ಕಡಿಮೆ ವಿದ್ಯುತ್ ಬಳಸುತ್ತದೆ ಮತ್ತು ಇದನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. 

PREV
15
ಸೀಲಿಂಗ್ ಫ್ಯಾನ್ Vs ಟೇಬಲ್ ಫ್ಯಾನ್

ಬೇಸಿಗೆ ಆರಂಭವಾಗುತ್ತಿದ್ದಂತೆ ಎಲ್ಲಾ ಮನೆಗಳಲ್ಲಿಯೂ ಫ್ಯಾನ್ ಅನಿವಾರ್ಯವಾಗುತ್ತದೆ. ಕೆಲವರು ಸೀಲಿಂಗ್ ಫ್ಯಾನ್ ಬಳಸಿದ್ರೆ, ಒಂದಿಷ್ಟು ಜನರು ಟೇಬಲ್ ಫ್ಯಾನ್ ಬಳಕೆ ಮಾಡುತ್ತಾರೆ. ಆದ್ರೆ ಈ ಎರಡು ಫ್ಯಾನ್‌ಗಳಿಂದ ಯಾವುದರಿಂದ ಅತ್ಯಧಿಕ ಬಿಲ್ ಬರುತ್ತೆ ಎಂಬ ಮಾಹಿತಿ ಇಲ್ಲಿದೆ.

25
ಸೀಲಿಂಗ್ ಫ್ಯಾನ್

ಸೀಲಿಂಗ್ ಫ್ಯಾನ್ ಸಂಪೂರ್ಣವಾಗಿ ತಾನಿರುವ ಕೋಣೆಗೆ ಸಮಾನ ರೂಪದಲ್ಲಿ ಗಾಳಿಯನ್ನು ಹರಡುತ್ತದೆ. ದೊಡ್ಡ ಕೋಣೆಗಳಾಗಿದ್ರೆ ಸೀಲಿಂಗ್ ಫ್ಯಾನ್ ಬಳಕೆ ಉತ್ತಮ ಆಯ್ಕೆಯಾಗುತ್ತದೆ. ಸೀಲಿಂಗ್‌ ಫ್ಯಾನ್‌ಗಳು ಇಡೀ ಕೋಣೆಯನ್ನು ತಂಪಾಗಿಸುತ್ತವೆ. ಕೇವಲ ನಿಮ್ಮ ಸುತ್ತಮುತ್ತ ಗಾಳಿ ಬೇಕಿದ್ರೆ ಅಥವಾ ಒಂದೆಡೆಯಲ್ಲಿ ನೀವು ಕುಳಿತು ಕೆಲಸ ಮಾಡುತ್ತಿದ್ರೆ ಟೇಬಲ್ ಫ್ಯಾನ್ ಆಯ್ಕೆ ಮಾಡಿಕೊಳ್ಳಬಹುದು.

35
ವಿದ್ಯುತ್ ಬಳಕೆ

ಸಾಮಾನ್ಯವಾಗಿ ಸೀಲಿಂಗ್ ಫ್ಯಾನ್ 60 ರಿಂದ 80 ವಾಟ್‌ ವರೆಗೆ ವಿದ್ಯುತ್ ಬಳಸಿಕೊಂಡ್ರೆ, ಟೇಬಲ್ ಫ್ಯಾನ್ 30 ರಿಂದ 50 ವ್ಯಾಟ್‌ನಲ್ಲಿ ಕೆಲಸ ಮಾಡುತ್ತದೆ. ಇದರರ್ಥ ಟೇಬಲ್ ಫ್ಯಾನ್ ಬಳಕೆ ಮಾಡೋದರಿಂದ ಕಡಿಮೆ ವಿದ್ಯುತ್ ಬಿಲ್ ಬರುತ್ತದೆ. ನೀವು ಇಡೀ ದಿನ ಫ್ಯಾನ್ ಬಳಸುತ್ತಿದ್ರೆ ಟೇಬಲ್ ಫ್ಯಾನ್ ಬಳಕೆ ಮಾಡೋದು ಉತ್ತಮವಾಗಿದೆ. ಆದ್ರೆ ಸೀಲಿಂಗ್ ಫ್ಯಾನ್ ಇಡೀ ಕೋಣೆಗೆ ಗಾಳಿಯನ್ನು ನೀಡುತ್ತದೆ. ಆದ್ರೆ ಟೇಬಲ್ ನಿಗಧಿತ ಸ್ಥಳಕ್ಕೆ ಮಾತ್ರ ಗಾಳಿಯನ್ನು ನೀಡುತ್ತದೆ. ಹಾಗಾಗಿ ಎರಡರ ಸೇವೆಯಲ್ಲಿಯೂ ವ್ಯತ್ಯಾಸವಿದೆ.

45
ಟೇಬಲ್ ಫ್ಯಾನ್ ಬಳಕೆ ಲಾಭ

ಟೇಬಲ್ ಫ್ಯಾನ್ ಬಳಕೆಯ ಪ್ರಮುಖ ಲಾಭವೆಂದ್ರೆ ಇದನ್ನು ನಿಮಗೆ ಬೇಕಾಗಿರುವ ಸ್ಥಳಕ್ಕೆ ಸುಲಭವಾಗಿ ಶಿಫ್ಟ್ ಮಾಡಿಕೊಳ್ಳಬಹುದು. ಅಡುಗೆಮನೆ, ಬೆಡ್‌ರೂಮ್, ಬಾಲ್ಕನಿ, ಹಾಲ್‌ಗೆ ಹೀಗೆ ಬೇಕಿರುವ ಸ್ಥಳಕ್ಕೆ ಟೇಬಲ್ ಫ್ಯಾನ್ ಶಿಫ್ಟ್ ಮಾಡಬಹುದು. ಆದ್ರೆ ಸೀಲಿಂಗ್ ಫ್ಯಾನ್ ಒಮ್ಮೆ ಅಳವಡಿಸಿದ್ರೆ ಅದು ಫಿಕ್ಸ್. ಸೀಲಿಂಗ್ ಫ್ಯಾನ್ ಪದೇ ಪದೇ ಸ್ಥಳಾಂತರಿಸಲು ಸಾಧ್ಯವಿಲ್ಲ. ಸೀಲಿಂಗ್ ಫ್ಯಾನ್ ಸ್ಥಳಾಂತರ ಜೇಬಿಗೆ ಭಾರವಾಗುತ್ತದೆ.

ಇದನ್ನೂ ಓದಿ: ಶೂಗಳನ್ನು ತೊಳೆಯೋಕೆ ಸಮಯ ಇಲ್ಲವಾ? ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸಿಂಪಲ್ ಸಲಹೆಗಳು

55
ಯಾವುದು ಬೆಸ್ಟ್?

ಸೀಲಿಂಗ್ ಫ್ಯಾನ್‌ಗಿಂತ ಟೇಬಲ್ ಫ್ಯಾನ್ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಸೀಲಿಂಗ್ ಫ್ಯಾನ್ ಅಳವಡಿಕೆಗೂ ನೀವು ಹಣ ಖರ್ಚು ಮಾಡಬೇಕಾಗುತ್ತದೆ. ಸೀಲಿಂಗ್ ಫ್ಯಾನ್ ಎತ್ತರದಲ್ಲಿ ಅಳವಡಿಕೆ ಮಾಡಿರೋದರಿಂದ ಪದೇ ಪದೇ ಸ್ವಚ್ಛಗೊಳಿಸಲು ಸಾಧ್ಯವಾಗಲ್ಲ. ಆದ್ರೆ ಟೇಬಲ್ ಫ್ಯಾನ್ ಸುಲಭವಾಗಿ ಸ್ವಚ್ಚಗೊಳಿಸಬಹುದು. ವಿದ್ಯುತ್ ಉಳಿಸಲು ಮತ್ತು ಮನೆ ಚಿಕ್ಕದಾಗಿದ್ರೆ ಸೀಲಿಂಗ್ ಫ್ಯಾನ್ ಒಳ್ಳೆಯ ಆಯ್ಕೆಯಾಗಲಿದೆ. ಯಾವ ಫ್ಯಾನ್ ನಿಮಗೆ ಬೇಕು ಅನ್ನೋದು ನಿಮ್ಮ ಅಗತ್ಯಗಳನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories