ಇಲ್ಲಿವೆ ನಾಸಾ ರೆಕಮಂಡ್ ಮಾಡಿದ ಗಾಳಿಯನ್ನು ಸ್ವಚ್ಛಗೊಳಿಸುವ 10 ಇಂಡೋರ್ ಪ್ಲಾಂಟ್‌ಗಳು

First Published | Aug 14, 2024, 11:11 AM IST

ಇನ್‌ಡೋರ್‌ ಪ್ಲಾಂಟ್‌ಗಳನ್ನು ಕೇವಲ ಸೌಂದರ್ಯದ ಉದ್ದೇಶಕ್ಕೆ ಮಾತ್ರ ಬಳಸುವುದಿಲ್ಲ, ಒಳಗಿನ ವಾತಾವರಣದಲ್ಲಿ ತುಂಬಿರುವ ಮಿತಿ ಮೀರಿದ ಮಾಲಿನ್ಯಕ್ಕೆ ಅದು ಮುಕ್ತಿ ನೀಡಿ, ವಾತಾವರಣವನ್ನು ಸ್ವಚ್ಛಗೊಳಿಸುತ್ತದೆ. ಮಹಾನಗರಗಳ ಮಾಲಿನ್ಯ ಹೆಚ್ಚುತ್ತಿರುವ ಈ ಸಮಯದಲ್ಲಿ ಗಾಳಿಯನ್ನು ಸ್ವಚ್ಛಗೊಳಿಸುವ, ನಾಸಾ ಸಲಹೆ ನೀಡಿದ 10 ಇನ್‌ಡೋರ್ ಪ್ಲಾಂಟ್‌ಗಳ ಮಾಹಿತಿ ಇಲ್ಲಿದೆ.

ಅರೆಕಾ ಪಾಮ್

ಅರೆಕಾ ಪಾಮ್ ಕೂಡ ಒಂದು ಒಳಾಂಗಣದಲ್ಲಿ ಇಡಬಹುದಾದ ಪ್ಲಾಂಟ್‌ ಆಗಿದ್ದು, ಇದು ಗಾಳಿಯ ಗುಣಮಟ್ಟವನ್ನು ಉತ್ತಮಗೊಳಿಸುವುದಕ್ಕೆ ಹೆಸರುವಾಸಿಯಾಗಿದೆ. ಇದು ವಾತಾವರಣದಲ್ಲಿರುವ ಫಾರ್ಮಾಲ್ಡಿಹೈಡ್, ಕ್ಸೈಲೀನ್, ಟೊಲ್ಯೂನ್ ಮುಂತಾದ ವಿಷಗಳನ್ನು ತೆಗೆದು ಹಾಕುತ್ತದೆ. 

ಬಂಬು ಪಾಮ್

ಬಂಬುಪಾಮ್‌ ಕೂಡ ಗಾಳಿಯನ್ನು ಸ್ವಚ್ಛಗೊಳಿಸುವ ಮತ್ತೊಂದು ಅದ್ಭುತವಾದ ಒಳಾಂಗಣ ಪ್ಲಾಂಟ್ ಆಗಿದ್ದು, ಇದು ಕೂಡ ಬೆಂಜಿನೆ, ಫಾರ್ಮಾಲ್ಡಿಹೈಡ್, ಟ್ರೈಕ್ಲೋರೆಥಿಲೀನ್ ಎಂಬ ವಿಷಾಂಶವನ್ನು ಗಾಳಿಯಿಂದ ತೆಗೆದು ಹಾಕುತ್ತದೆ. ಕಡಿಮೆ ಬೆಳಕಿನ ಸ್ಥಿತಿಯಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಹೀಗಾಗಿ ಒಳಾಂಗಣದಲ್ಲಿ ಬೆಳೆಯುವುದಕ್ಕೆ ಇದು ಹೆಚ್ಚು ಪ್ರಸಿದ್ಧವಾಗಿದೆ. 

Tap to resize

ರಬ್ಬರ್ ಪ್ಲಾಂಟ್

ರಬ್ಬರ್ ಪ್ಲಾಂಟ್  ಹೊಳಪಿನಿಂದ ಕೂಡಿದ ದೊಡ್ಡದಾದ ಎಲೆಗಳನ್ನು ಹೊಂದಿರುವುದರಿಂದ ಇದೊಂದು ಒಳಾಂಗಣದಲ್ಲಿ ಇಡುವಂತಹ ಅದ್ಭುತ ಸೌಂದರ್ಯದ ಸಸಿಯಾಗಿದ್ದು, ಇದು ಕೂಡ ಫಾರ್ಮಾಲ್ಡಿಹೈಡ್ ವಿಷವನ್ನು ಗಾಳಿಯಲ್ಲಿ ಇಲ್ಲದಂತೆ ಮಾಡುತ್ತದೆ. 

ಇಂಗ್ಲೀಷ್ ಐವಿ

ಇಂಗ್ಲೀಷ್ ಐವಿ ಸೌಂದರ್ಯದಿಂದ ಕೂಡಿದ ದಟ್ಟ ಹಸಿರು ಬಣ್ಣದ ಎಲೆಗಳನ್ನು ಹೊಂದಿದೆ. ಬಳ್ಳಿಯಂತೆ ಇರುವುದರಿಂದ ಇದು ಸೌಂದರ್ಯದ ಕಾರಣಕ್ಕೂ ಎಲ್ಲರನ್ನು ಸೆಳೆಯುತ್ತದೆ. ಇದು ಕೂಡ ಗಾಳಿಯಲ್ಲಿರುವ ವಿಷಕಾರಿ ಅಂಶವನ್ನು ಹೊರಗೆಡವುತ್ತದೆ. 

ಪೀಸ್ ಲಿಲ್ಲಿ

ಪೀಸ್ ಲಿಲ್ಲಿ ತಾನು ಬಿಡುವ ಶ್ವೇತವರ್ಣದ ಹೂಗಳ ಕಾರಣಕ್ಕೆ ಸೌಂದರ್ಯವರ್ಧಕ ಮಾತ್ರವಲ್ಲ, ಗಾಳಿಯಲ್ಲಿರುವ ಅಮೋನಿಯಾ, ಫಾರ್ಮಾಲ್ಡಿಹೈಡ್, ಬೆಂಜಿನೆ ಮುಂತಾದ ವಿಷಕಾರಿ ಅಂಶಗಳನ್ನು ಹೊರ ಚೆಲ್ಲುತ್ತದೆ. ಈ ಸಸಿಗಳು ಸೂರ್ಯನ ಬಿಸಿಲಿಗಿಂತ ಹೆಚ್ಚು ನೆರಳನ್ನು ಹೆಚ್ಚು ಇಷ್ಟಪಡುತ್ತವೆ. 

ಬೋಸ್ಟನ್ ಪೆರ್ನ್

ಬೋಸ್ಟನ್‌ ಪೆರ್ನ್‌ ಉದ್ದವಾದ ಕಮಾನಿನಂತಹ ಎಲೆಗಳನ್ನು ಹೊಂದಿದೆ. ಇದನ್ನು ತೂಗು ಹಾಕುವ ಹೂಕುಂಡಗಳಲ್ಲಿ ನೆಟ್ಟು ನೇತುಹಾಕುವುದರಿಂದ ಇವುಗಳ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ವಾತಾವರಣದಲ್ಲಿರುವ  ಫಾರ್ಮಾಲ್ಡಿಹೈಡ್ ಹಾಗೂ ಕ್ಸೈಲಿನ್ ಎಂಬ ವಿಷಾಂಶವನ್ನು ತೆಗೆದು ಹಾಕುತ್ತದೆ. 

ಡಂಬ್ ಕ್ಯಾನೆ

ಡಂಬ್ ಕ್ಯಾನೆ ಕೂಡ ಅತ್ಯಂತ ಪ್ರಸಿದ್ಧವಾದ ಮನೆಯೊಳಗಿಡಬಹುದಾದ ಸಸಿಯಾಗಿದೆ. ದೊಡ್ಡದಾದ ಆಕರ್ಷಣೀಯ ಎಲೆಗಳನ್ನು ಇದು ಹೊಂದಿದ್ದು, ಕ್ಸೈಲಿನ್, ಟೊಲ್ಯೂನ್ ಮುಂತಾದ ವಿಷದ ಅಂಶಗಳನ್ನು ಗಾಳಿಯಿಂದ ತೆಗೆದು ಹಾಕುತ್ತದೆ. ನೇರ ಸೂರ್ಯನ ಬೆಳಕಿಲ್ಲದೇ ಇದು ಸುಂದರವಾಗಿ ಬೆಳೆಯುತ್ತದೆ. 

ಪೋಥೋಸ್

ಹಾಗೆಯೇ ನಾಸಾದಿಂದ ರೆಕಮಂಡ್ ಮಾಡಿದ ಇನ್ನೊಂದು ಅದ್ಭುತವಾದ ಇನ್‌ಡೋರ್ ಪ್ಲಾಂಟ್ ಎಂದರೆ ಪೋಥೋಸ್, ಮನಿ ಪ್ಲಾಂಟ್ ಎಂದು ಕೂಡ ಇದನ್ನು ವಾಸ್ತು ಪ್ರಕಾರವಾಗಿ ಕರೆಯುತ್ತಾರೆ.  ಫಾರ್ಮಾಲ್ಡಿಹೈಡ್ ಹಾಗೂ ಕ್ಸೈಲಿನ್, ಬೆಂಜಿನ್ ಮುಂತಾದ ವಿಷಾಂಶವನ್ನು ಗಾಳಿಯಿಂದ ತೆಗೆಯುತ್ತದೆ. 

ಸ್ನೇಕ್ ಪ್ಲಾಂಟ್‌

ಹಾಗೆಯೇ ಕಡಿಮೆ ಬಜೆಟ್‌ನಲ್ಲಿ ನಿರ್ವಹಿಸಬಹುದಾದ ಇನ್ನೊಂದು ಪ್ಲಾಂಟ್ ಎಂದರೆ ಸ್ನೇಕ್ ಪ್ಲಾಂಟ್,  ಈ ಸಸಿ ಕೂಡ ಕಡಿಮೆ ಬೆಳಕಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ಕೂಡ ವಾತಾವರಣದಲ್ಲಿರುವ ವಿಷಾಂಶವನ್ನು ತೆಗೆದು ಹಾಕುತ್ತದೆ. 

ವೀಪಿಂಗ್ ಫಿಗ್

ವೀಪಿಂಗ್ ಫಿಗ್ ಕೂಡ ಗಾಳಿಯಲ್ಲಿರುವ ಮಾಲಿನ್ಯಕಾರಕವಾದ ಕ್ಸೈಲಿನ್ ಹಾಗೂ ಟೊಲ್ಯೂನ್ ಅಂಶಗಳನ್ನು ತೆಗೆದು ಹಾಕುತ್ತದೆ. ಇವಿಷ್ಟು ಸಸ್ಯಗಳು ಗಾಳಿಯನ್ನು ಶುದ್ಧಗೊಳಿಸಲು ಸಹಕಾರಿಯಾದ ಒಳಾಂಗಣದಲ್ಲಿ ಇಡಬಹುದಾದ ಸಸಿಗಳು ಎಂದು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಸಲಹೆ ನೀಡಿದೆ.

Latest Videos

click me!