ದಿನವಿಡೀ ಕೆಲಸ ಮಾಡಿದರೂ ನಿದ್ದೆ ಬರಲ್ಲ ಎಂದು ಹಲವರು ಹೇಳುತ್ತಿರುತ್ತಾರೆ. ಒಂದು ವೇಳೆ ನಿದ್ದೆ ಬಂದರೂ ಪದೇ ಪದೇ ಎಚ್ಚರವಾಗುವ ಕಾರಣ ತಲೆನೋವು ಸಹ ಬರುತ್ತದೆ. ಕೆಲವರಿಗೆ ಒತ್ತಡ ಹಾಗೂ ಇತರೆ ಸಮಸ್ಯೆಗಳಿಂದ ಸಮಪರ್ಕವಾಗಿ ನಿದ್ದೆ ಬರಲ್ಲ. ಮಲಗಿದ ತಕ್ಷಣ ನಿದ್ದೆ ಬರಬೇಕಾದ್ರೆ ಹೀಗೆ ಮಾಡಿ.
ಪ್ರತಿಯೊಬ್ಬ ಮನುಷ್ಯನಿಗೂ ಒಳ್ಳೆಯ ನಿದ್ದೆ ಅಗತ್ಯವಿದೆ. ನಿದ್ದೆಯ ಕೊರತೆ ಉಂಟಾದ್ರೆ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಾವು ಸೇವಿಸುವ ಆಹಾರ ಸಹ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆಹಾರದಲ್ಲಿ ಫೈಬರ್ ಅಂಶ ಅಧಿಕವಾಗಿದ್ದರೆ ನಿದ್ದೆ ಬರುತ್ತದೆ. ಹಾಗಾಗಿ ಆಹಾರದಲ್ಲಿ ಫೈಬರ್ ಅಂಶ ಇದ್ದರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತಿದ್ರೆ ಒಳ್ಳೆಯ ನಿದ್ದೆ ಬರುತ್ತದೆ.
ರಾತ್ರಿ ಸೇವಿಸುವ ಆಹಾರದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಸಕ್ಕರೆ ಅಥವಾ ಸಿಹಿ ಆಹಾರ ಕಡಿಮೆ ಸೇವಿಸಿದ್ರೆ ರಾತ್ರಿ ಉತ್ತಮ ನಿದ್ದೆ ಮಾಡಬಹುದು. ರಾತ್ರಿ ಊಟದ ನಂತರ ಕನಿಷ್ಠ ಮೂರು ಗಂಟೆ ನಿದ್ದೆ ಮಾಡಬಾರದು.
ವಿಟಮಿನ್ ಬಿ6 ಇರುವ ಆಹಾರಗಳನ್ನು ಸೇವಿಸಬೇಕು. ವಿಟಮಿನ್ ಬಿ 6 ಹಾರ್ಲೋನ್ ಅಂಶಗಳು ಕಂಡು ಬರುತ್ತದೆ. ಈ ಅಂಶ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತವೆ. ಇದರಿಂದಾಗಿಯೂ ಉತ್ತಮ ನಿದ್ದೆ ಮಾಡಬಹುದು.
ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ಮೆಗ್ನಿಷಿಯಂ ಅಂಶ ಇರೋದರಿಂದ ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸರಳವಾಗಿ ನಡೆಯೋದರಿಂದ ನಿದ್ದೆ ಬರುತ್ತದೆ.
ಇನ್ನು ಮಲಗುವ ಅರ್ಧ ಗಂಟೆಗೂ ಮುನ್ನ ಒಂದು ಗ್ಲಾಸ್‌ನಷ್ಟು ಬಿಸಿನೀರು ಕುಡಿಯಬೇಕು. ಬಿಸಿನೀರು ಕುಡಿದ ನಂತರ ಯಾವುದೇ ಆಹಾರ ಸೇವನೆ ಮಾಡಬಾರದು. ರಾತ್ರಿ ಆಹಾರ ಆದಷ್ಟು ಲಘುವಾಗಿರುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದ್ದಲ್ಲಿ ಉತ್ತಮ ನಿದ್ದೆ ಮಾಡಬಹುದು.