ಚಹಾ ತಯಾರಿಸುವಾಗ ಏಲಕ್ಕಿ ಸೇರಿಸ್ತೀರಾ? ಹಾಗಾದ್ರೆ ಈ ವಿಷಯ ನಿಮಗೆ ಗೊತ್ತಿರಲಿ!

ಚಹಾ ತಯಾರಿಸುವಾಗ ಏಲಕ್ಕಿ ಸೇರಿಸುತ್ತಾರೆ. ಏಲಕ್ಕಿ ಸೇರ್ಪಡೆ ಮಾಡೋದರಿಂದ ಚಹಾ ಪರಿಮಳದ ಜೊತೆಯಲ್ಲಿ ಅದರ ರುಚಿ ಸಹ ಹೆಚ್ಚಾಗುತ್ತದೆ. ಈ ರೀತಿಯ ಚಹಾ ಸೇವನೆಯಿಂದ ದೇಹದಲ್ಲಾಗುವ ಬದಲಾವಣೆಗಳ ಮಾಹಿತಿ ಇಲ್ಲಿದೆ.

ಏಲಕ್ಕಿ ಮಸಾಲೆ ಪದಾರ್ಥವಾಗಿದ್ದು, ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಏಲಕ್ಕಿಯಲ್ಲಿ ವಿಟಮಿನ್ ಬಿ6, ವಿಟಮಿನ್ ಬಿ3, ವಿಟಮಿನ್ ಸಿ, ಸತು, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಅಧಿಕ ಲಾಭಗಳನ್ನು ನೀಡುತ್ತದೆ.

ಏಲಕ್ಕಿಯನ್ನು ಔಷಧಿಗಳ ತಯಾರಿಕೆಯಲ್ಲಿಯೂ ಬಳಕೆ ಮಾಡಲಾಗುತ್ತದೆ. ಚಹಾದಲ್ಲಿ ಏಲಕ್ಕಿ ಹಾಕಿ ಮಸಾಲೆ ಟೀ ಮಾಡಲಾಗುತ್ತದೆ. ಈ ರೀತಿಯ ಚಹಾ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಏನು ಅನ್ನೋದನ್ನು ನೋಡೋಣ ಬನ್ನಿ.


ಏಲಕ್ಕಿ ಚಹಾವನ್ನು ನಿಯಮಿತವಾಗಿ ಕುಡಿಯೋದರಿಂದ ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ. ಅಸಿಡಿಟಿ ಸಮಸ್ಯೆ ಹೊಂದಿರೋರು ಸಹ ಏಲಕ್ಕಿ ಚಹಾ ಕುಡಿಯಬಹುದು. ಏಲಕ್ಕಿ ಟೀ ಕುಡಿಯುವುದರಿಂದ ಅಸಿಡಿಟಿ, ಅಜೀರ್ಣ, ಗ್ಯಾಸ್ ಮತ್ತು ವಾಯು ಸಮಸ್ಯೆಯಂತಹ ಸಮಸ್ಯೆಗಳನ್ನು ನಿವಾರಿಸಬಹುದು.

Cardamom Tea

ಏಲಕ್ಕಿ ಉತ್ಕರ್ಷಣ ನಿರೋಧಕ ಅಂಶಗಳನ್ನು ಹೇರಳವಾಗಿ ಹೊಂದಿದ್ದು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಅಧಿಕ ರಕ್ತದೊತ್ತಡದಿಂದ ಬಳಲುವ ಜನರು ತಮ್ಮ ಆಹಾರದಲ್ಲಿ ಏಲಕ್ಕಿ ಇರುವಂತೆ ನೋಡಿಕೊಳ್ಳುತ್ತಾರೆ.

ಏಲಕ್ಕಿ ಚಹಾ ಹೃದಯಕ್ಕೂ ಒಳ್ಳೆಯದು. ಪ್ರತಿದಿನ ಏಲಕ್ಕಿ ಚಹಾ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆರೋಗ್ಯ ತಜ್ಞರು ಸಹ ಮಧುಮೇಹಿಗಳಿಗೆ ಸಕ್ಕರೆ ರಹಿತ ಏಲಕ್ಕಿ ಚಹಾ ಕುಡಿಯುವಂತೆ ಸಲಹೆ ನೀಡುತ್ತಾರೆ.

ಏಲಕ್ಕಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಏಲಕ್ಕಿ ಚಹಾವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಶೀತದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಏಲಕ್ಕಿಯಲ್ಲಿರುವ ಅಂಶಗಳು ಉಸಿರಾಟ ಸಮಸ್ಯೆ ತೊಂದರೆಯನ್ನು ನಿವಾರಿಸುತ್ತದೆ.

ಅಧಿಕ ಕೊಬ್ಬು ಹೊಂದಿರುವ ಜನರು ಸಹ ಏಲಕ್ಕಿ ಚಹಾ ಕುಡಿಯುತ್ತಾರೆ. ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯನ್ನು ತಡೆಯಲು ಏಲಕ್ಕಿ ಸಹಾಯ ಮಾಡುತ್ತದೆ. ಏಲಕ್ಕಿ ಸೇವನೆ ಜೀವನದ ಒತ್ತಡವನ್ನು ಸಹ ಕಡಿಮೆ ಮಾಡುತ್ತಿದೆ.

Latest Videos

click me!