ಮಳೆಗಾಲದಲ್ಲಿ ಸೊಳ್ಳೆಯ ಕಾಟ ಎಷ್ಟಿರುತ್ತೆಂದರೆ ನೆಮ್ಮದಿಯಾಗಿ ಮಲಗಲು ಸಹ ಕಷ್ಟವಾಗುತ್ತದೆ. ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ನೀವು ಸುಲಭವಾಗಿ ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಬಾಳೆಹಣ್ಣಿನ ಸಿಪ್ಪೆಯ ಕಟುವಾದ ವಾಸನೆಯು ಸೊಳ್ಳೆಗಳನ್ನು ದೂರವಿಡುತ್ತದೆ ಮತ್ತು ಅದರ ಉರಿಯೂತದ ಗುಣಲಕ್ಷಣಗಳು ಸೊಳ್ಳೆ ಕಡಿತದಿಂದ ಉಂಟಾಗುವ ಕಿರಿಕಿರಿ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಸೊಳ್ಳೆಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆ ಬಳಸುವುದು ಹೇಗೆಂದು ನೋಡೋಣ...
26
ಸೊಳ್ಳೆ ಕಡಿತದಿಂದ ಸಿಗಲಿದೆ ಪರಿಹಾರ
ಬಾಳೆಹಣ್ಣು ತಿನ್ನಲು ಎಷ್ಟು ರುಚಿಕರ ಮತ್ತು ಪ್ರಯೋಜನಕಾರಿಯೋ ಅದರ ಸಿಪ್ಪೆಯೂ ಅಷ್ಟೇ ಉಪಯುಕ್ತವಾಗಿದೆ. ಹೌದು, ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಗುಣಗಳು ನಿಮ್ಮ ನಿದ್ರೆಯನ್ನು ಸುಧಾರಿಸುವುದಲ್ಲದೆ, ತ್ವಚೆ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ನೀವು ಅದರ ಸಿಪ್ಪೆಯಿಂದ ಮನೆಯಿಂದ ಸೊಳ್ಳೆಗಳನ್ನು ಓಡಿಸಬಹುದು ಹೇಗೆಂದು ನಿಮಗೆ ತಿಳಿದಿದೆಯೇ?. ಅಷ್ಟೇ ಅಲ್ಲ, ಸಿಪ್ಪೆಯಿಂದ ನೀವು ಸೊಳ್ಳೆಗಳನ್ನು ದೇಶಾಂತರ ಓಡಿಸಬಹುದು ಮಾತ್ರವಲ್ಲದೆ, ಅವು ಕಚ್ಚಿದ ನಂತರ ಪರಿಹಾರವನ್ನು ನೀಡಲು ಸಹ ಸಹಾಯ ಮಾಡುತ್ತವೆ. ಹಾಗಾದರೆ ಬನ್ನಿ ಇದನ್ನು ಬಳಸುವುದು ಹೇಗೆಂದು ನೋಡೋಣ..
36
ಇದು ಹೇಗೆ ಪರಿಣಾಮಕಾರಿಯಾಗಿದೆ?
ನಿಮಗೆಲ್ಲರಿಗೂ ತಿಳಿದಿರುವಂತೆ ಮಳೆಗಾಲದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಅವು ನಮ್ಮ ಜೀವನವನ್ನು ದುಸ್ತರಗೊಳಿಸುವುದಲ್ಲದೆ, ಡೆಂಗ್ಯೂ ಮತ್ತು ಮಲೇರಿಯಾ ಸೇರಿದಂತೆ ಅನೇಕ ರೋಗಗಳನ್ನು ಉಂಟುಮಾಡುತ್ತವೆ. ಆದರೆ ಸೊಳ್ಳೆಗಳು ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಕಟುವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ನೀವು ಬಾಳೆಹಣ್ಣಿನ ಸಿಪ್ಪೆ ಬಳಸುವ ಮೂಲಕ ಸೊಳ್ಳೆಗಳ ಪ್ರವೇಶವನ್ನು ನಿಷೇಧಿಸಬಹುದು.
46
ನೀವೇನು ಮಾಡಬೇಕು?
ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡ ನಂತರ ಅದನ್ನು ಉಪಯೋಗಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ?. ಅದಕ್ಕೂ ಇಲ್ಲಿದೆ ಪರಿಹಾರ. ಮೊದಲಿಗೆ ನೀವು ಬಾಳೆಹಣ್ಣಿನ ಸಿಪ್ಪೆಯನ್ನು ಸಣ್ಣ ಸಣ್ಣ ಪೀಸ್ ಪೀಸ್ ಆಗಿ ಕಟ್ ಮಾಡಿ, ಮನೆಯ ಮೂಲೆಗಳಲ್ಲಿ ಇಡಬೇಕು. ಬೇಕಾದರೆ ನೀವು ಅದನ್ನು ಸ್ವಲ್ಪ ಸಿಪ್ಪೆಯನ್ನು ಸುಟ್ಟು ಮನೆಯಲ್ಲಿ ಅದರ ಹೊಗೆಯನ್ನು ಹರಡಬಹುದು.
56
ಸೊಳ್ಳೆ ಕಚ್ಚಿದರೂ ಸಹ ಉಪಯುಕ್ತ ಸಿಪ್ಪೆ
ಸೊಳ್ಳೆ ಕಚ್ಚಿದರೆ ತುರಿಕೆ ಮತ್ತು ಸುಡುವಂತಹ ಅನುಭವ ಸಹಜವೇ. ಆದರೆ ಈ ಸಂದರ್ಭದಲ್ಲಿ ಬಾಳೆಹಣ್ಣಿನ ಸಿಪ್ಪೆ ಎಷ್ಟು ಪರಿಣಾಮಕಾರಿಯೆಂದರೆ ನೀವು ಅದರ ಬಿಳಿ ಒಳಭಾಗವನ್ನು ನೇರವಾಗಿ ಸೊಳ್ಳೆ ಕಚ್ಚಿದ ಜಾಗಕ್ಕೆ ಉಜ್ಜಬಹುದು. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಕಿರಿಕಿರಿ ಮತ್ತು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ನೈಸರ್ಗಿಕ ಕಿಣ್ವಗಳು ಸೊಳ್ಳೆಯ ಲಾಲಾರಸದಲ್ಲಿರುವ ಪ್ರೋಟೀನ್‌ಗಳನ್ನು ಒಡೆಯುತ್ತವೆ, ಇದು ಊತ ಮತ್ತು ಸುಡುವಿಕೆಯಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ.
66
ನೈಸರ್ಗಿಕ, ಅಗ್ಗದ ಮತ್ತು ಪರಿಣಾಮಕಾರಿ ಪರಿಹಾರ
ಈ ಮೊದಲೇ ಹೇಳಿದ ಹಾಗೆ ಬಾಳೆಹಣ್ಣಿನ ಸಿಪ್ಪೆ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವುದು ಮಾತ್ರವಲ್ಲದೆ, ಸೊಳ್ಳೆ ಕಡಿತದಿಂದ ಉಂಟಾಗುವ ಕಿರಿಕಿರಿ ಮತ್ತು ತುರಿಕೆಯನ್ನು ಸಹ ನಿವಾರಿಸುತ್ತದೆ. ಅದೂ ಯಾವುದೇ ಕೆಮಿಕಲ್ ಅಥವಾ ಔಷಧಿ ಇಲ್ಲದೆ. ಆದ್ದರಿಂದ ಮುಂದಿನ ಬಾರಿ ಮಳೆಯ ಸಮಯದಲ್ಲಿ ಸೊಳ್ಳೆಗಳ ಸೈನ್ಯವು ಮನೆಗೆ ಪ್ರವೇಶಿಸಿದಾಗ ಭಯಪಡಬೇಡಿ. ಬಾಳೆಹಣ್ಣಿನ ಸಿಪ್ಪೆ ಸುಲಿದು ಸಿಪ್ಪೆಯನ್ನು ನಿಮ್ಮ ಆಯುಧವನ್ನಾಗಿ ಮಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.