ಚಪಾತಿ, ರೊಟ್ಟಿ ಹಿಟ್ಟನ್ನ ಫ್ರಿಡ್ಜ್‌ನಲ್ಲಿ ಇಡ್ತೀರಾ? ಇಲ್ಲಿವೆ ನೋಡಿ ಅಪಾಯಗಳು

Published : Jul 10, 2025, 06:09 PM IST

ಚಪಾತಿ ಅಥವಾ ರೊಟ್ಟಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಮಿಸ್ ಮಾಡದೇ ಇದರಿಂದಾಗುವ ಅಪಾಯಗಳನ್ನು ತಿಳಿದುಕೊಳ್ಳಿ.

PREV
15
Riti Dough

ಕೆಲಸದ ಬ್ಯುಸಿಯಲ್ಲಿರೋರಿ ಕೆಲವೊಮ್ಮೆ ರಾತ್ರಿಯೇ ಚಪಾತಿ ಹಿಟ್ಟು ಕಲಸಿ, ಫ್ರಿಡ್ಜ್‌ನಲ್ಲಿಡುತ್ತಾರೆ. ಕೆಲವರು ಒಂದೇ ಬಾರಿಗೆ ಹೆಚ್ಚು ಹಿಟ್ಟು ಕಲಿಸಿ ಸ್ಟೋರ್ ಮಾಡುತ್ತಾರೆ .

25
ರೊಟ್ಟಿ, ಚಪಾತಿ ಹಿಟ್ಟು ಫ್ರಿಡ್ಜ್ ಲ್ಲಿ ಇಡೋದ್ರಿಂದ ಆಗುವ ನಷ್ಟಗಳು...
ರೊಟ್ಟಿ ಮಾಡೋದು ಸುಲಭ ಅಲ್ಲ. ಹಿಟ್ಟು ಕಲಸಿ, ನೆನೆಸಿಟ್ಟು, ಆಮೇಲೆ ರೊಟ್ಟಿ ಮಾಡಿ, ಬೇಯಿಸಬೇಕು. ಈ ಕೆಲಸ ತಪ್ಪಿಸಿಕೊಳ್ಳೋಕೆ ಮೊದಲೇ ಹಿಟ್ಟು ಕಲಸಿ ಫ್ರಿಡ್ಜ್‌ನಲ್ಲಿ ಇಟ್ಟು ಬೇಕಾದಾಗ ರೊಟ್ಟಿ ಮಾಡ್ತಾರೆ. ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾನಿಕಾರಕ ಬ್ಯಾಕ್ಟೀರಿಯಾ, ಪೋಷಕಾಂಶಗಳ ನಷ್ಟ, ಗ್ಯಾಸ್ ಸಮಸ್ಯೆ, ರುಚಿ ಕಡಿಮೆಯಾಗುವುದು ಹೀಗೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
35
ಹಿಟ್ಟನ್ನ ಗಾಳಿಯಾಡದ ಡಬ್ಬದಲ್ಲಿಟ್ಟರೆ ಏನಾಗುತ್ತೆ?

ಕೆಲವರು ಚಪಾತಿ ಹಿಟ್ಟನ್ನು ಗಾಳಿಯಾಡದ ಡಬ್ಬ, ಅಲ್ಯೂಮಿನಿಯಂ ಫಾಯಿಲ್ ಅಥವಾ ಜಿಪ್‌ಲಾಕ್ ಬ್ಯಾಗ್‌ಗಳಲ್ಲಿ ಶೇಖರಿಸುತ್ತಾರೆ. ಇದು ಸ್ವಲ್ಪ ಮಟ್ಟಿಗೆ ಸುರಕ್ಷಿತವಾದರೂ, ಇದು ಸಂಪೂರ್ಣವಾಗಿ ಕಲ್ಮಶಗಳನ್ನು ತಡೆಯುವುದಿಲ್ಲ. 

ವಿಶೇಷವಾಗಿ ಮಳೆಗಾಲದಲ್ಲಿ, ಲಿಸ್ಟೇರಿಯಾ ಮೊನೊಸೈಟೋಜೆನ್ಸ್‌ನಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳು ಈ ಚಪಾತಿ ಹಿಟ್ಟಿನಲ್ಲಿ ಬೆಳೆಯುತ್ತವೆ. ಇದು ಜ್ವರ, ತಲೆನೋವು, ಭೇದಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

45
ಚಪಾತಿ ಹಿಟ್ಟನ್ನು ಸುರಕ್ಷಿತವಾಗಿ ಹೇಗೆ ಶೇಖರಿಸುವುದು?

ಚಪಾತಿ ಹಿಟ್ಟನ್ನು ಕಲಸಿದ ದಿನವೇ ಬಳಸುವುದು ಒಳ್ಳೆಯದು. ಉಳಿದ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡಬಾರದು. 

ರೊಟ್ಟಿ ಮಾತ್ರವಲ್ಲ.. ಸಾಂಬಾರ್, ರಸಂ, ಚಟ್ನಿ ಮುಂತಾದವುಗಳನ್ನು ಅದೇ ದಿನ ತಯಾರಿಸಿ, ಉಳಿಯದಂತೆ ತಿನ್ನುವುದು ಒಳ್ಳೆಯದು. ಫ್ರಿಡ್ಜ್‌ನಲ್ಲಿಟ್ಟು, ನಂತರ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ.

55
ಹಿಟ್ಟನ್ನು ತಾಜಾವಾಗಿಡುವ ವಿಧಾನಗಳು:

ಚಪಾತಿ ಹಿಟ್ಟು ಕಲಸುವಾಗ ಒಂದು ಟೀ ಚಮಚ ಎಣ್ಣೆ ಹಾಕಿದರೆ ಹಿಟ್ಟಿನ ಮೇಲೆ ರಕ್ಷಣಾತ್ಮಕ ಪದರ ಉಂಟಾಗುತ್ತದೆ. ಇದು ಆಮ್ಲಜನಕದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಹಿಟ್ಟನ್ನು ಮೃದುವಾಗಿ, ತಾಜಾವಾಗಿಡಲು ಸಹಾಯ ಮಾಡುತ್ತದೆ. 

ಚಪಾತಿ ಹಿಟ್ಟನ್ನು ಒಂದು ಪಾತ್ರೆಯಲ್ಲಿಟ್ಟು ಒದ್ದೆ ಬಟ್ಟೆಯಿಂದ ಮುಚ್ಚಿ. ನಂತರ, ನೀವು ಅದನ್ನು ಮುಚ್ಚಳದಿಂದ ಬಿಗಿಯಾಗಿ ಮುಚ್ಚಬಹುದು. ಇದು ಚಪಾತಿ ಹಿಟ್ಟು ಒಣಗದಂತೆ ತಡೆಯುತ್ತದೆ. ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಹಿಟ್ಟು ತಾಜಾವಾಗಿರುತ್ತದೆ.

Read more Photos on
click me!

Recommended Stories