Why snakes shed skin: ಹಾವುಗಳು ಬೇರೆ ಪ್ರಾಣಿಗಳಿಗಿಂತ ಸ್ವಲ್ಪ ಡಿಫರೆಂಟ್. ಅವುಗಳ ದೇಹ ಬೆಳೆದಂತೆ ಹಳೆಯ ಚರ್ಮವನ್ನು ಕಳಚಿ ಹೊಸ ಚರ್ಮವನ್ನು ಬೆಳೆಸಿಕೊಳ್ಳುತ್ತವೆ. ಇದನ್ನೇ ಹಾವು ಪೊರೆ ಬಿಡುವುದು ಅಂತಾರೆ. ಈ ಪ್ರಕ್ರಿಯೆ ನಡೆಯುವಾಗ ಹಾವಿನ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸುತ್ತವೆ.
ಹಾವುಗಳು ತಮ್ಮ ಜೀವಿತಾವಧಿಯುದ್ದಕ್ಕೂ ಬೆಳೆಯುತ್ತಲೇ ಇರುತ್ತವೆ. ಆದರೆ ಅವುಗಳ ಹೊರಗಿನ ಚರ್ಮ ದೇಹದ ಜೊತೆಗೆ ಹಿಗ್ಗುವುದಿಲ್ಲ. ದೇಹ ಬೆಳೆದಾಗ ಹಳೆಯ ಚರ್ಮ ಟೈಟ್ ಆಗುತ್ತದೆ. ಹಾಗಾಗಿ ಹಾವು ಹಳೆಯ ಚರ್ಮವನ್ನು ಸಂಪೂರ್ಣವಾಗಿ ಕಳಚಿ ಹೊಸ ಚರ್ಮವನ್ನು ಬೆಳೆಸಿಕೊಳ್ಳುತ್ತದೆ. ಮರಿ ಹಾವುಗಳು ಬೇಗನೆ ಬೆಳೆಯುವುದರಿಂದ ಪದೇ ಪದೇ ಪೊರೆ ಬಿಡುತ್ತವೆ. ದೊಡ್ಡ ಹಾವುಗಳಲ್ಲಿ ಈ ಪ್ರಕ್ರಿಯೆ ಸ್ವಲ್ಪ ಕಡಿಮೆ. ಹಾವಿನ ವಯಸ್ಸು, ಬೆಳವಣಿಗೆ, ಆರೋಗ್ಯ ಮತ್ತು ಆಹಾರದ ಆಧಾರದ ಮೇಲೆ ಪೊರೆ ಬಿಡುವ ಸಮಯ ನಿರ್ಧಾರವಾಗುತ್ತದೆ.
25
ಪೊರೆ ಬಿಡುವುದರಿಂದ ಹಾವಿಗೆ ಏನು ಲಾಭ?
ಹಳೆಯ ಚರ್ಮದ ಮೇಲೆ ಧೂಳು, ಉಣ್ಣೆಗಳು ಮತ್ತು ಸಣ್ಣ ಪರಾವಲಂಬಿ ಜೀವಿಗಳು ಸೇರಿಕೊಳ್ಳುತ್ತವೆ. ಪೊರೆ ಬಿಡುವಾಗ ಹಾವು ಈ ಹಳೆಯ ಪದರವನ್ನು ತೆಗೆದುಹಾಕುತ್ತದೆ. ಇದರಿಂದ ದೇಹದ ಮೇಲಿರುವ ಬೇಡದ ವಸ್ತುಗಳು ಕ್ಲೀನ್ ಆಗುತ್ತವೆ. ಜೊತೆಗೆ ಬೇಟೆಯಾಡುವಾಗ ಅಥವಾ ಓಡಾಡುವಾಗ ಹಾವಿನ ಚರ್ಮಕ್ಕೆ ಸಣ್ಣಪುಟ್ಟ ಗಾಯಗಳಾಗಿರಬಹುದು. ಹೊಸ ಚರ್ಮ ಬರುವುದರಿಂದ ದೇಹಕ್ಕೆ ಫ್ರೆಶ್ ಆದ ರಕ್ಷಣಾ ಕವಚ ಸಿಗುತ್ತದೆ. ಇದೇ ಕಾರಣಕ್ಕೆ ಪೊರೆ ಬಿಡುವುದು ಹಾವಿನ ಆರೋಗ್ಯಕ್ಕೆ ಬಹಳ ಮುಖ್ಯವಾದ ನೈಸರ್ಗಿಕ ಪ್ರಕ್ರಿಯೆ.
35
ಪೊರೆ ಬಿಡುವ ಮುನ್ನ ಹಾವಿನ ಕಣ್ಣುಗಳಿಗೆ ಏನಾಗುತ್ತದೆ?
ಪೊರೆ ಬಿಡುವ ಕೆಲವು ದಿನಗಳ ಮೊದಲು ಹಾವಿನ ಕಣ್ಣುಗಳ ಮೇಲೆ ಮಂಜಾದ ಪದರ ಕಾಣಿಸಿಕೊಳ್ಳುತ್ತದೆ. ಇದನ್ನು 'ಬ್ಲೂ ಫೇಸ್' (Blue Phase) ಅಂತ ಕರೆಯುತ್ತಾರೆ. ಈ ಟೈಮಲ್ಲಿ ಹಾವಿಗೆ ದೃಷ್ಟಿ ಮಂದವಾಗುತ್ತದೆ. ಕಣ್ಣು ಸರಿಯಾಗಿ ಕಾಣಿಸದ ಕಾರಣ ಸುತ್ತಮುತ್ತಲಿನ ಚಲನೆಯನ್ನು ಅದು ಬೇಗನೆ ಗುರುತಿಸುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಹಾವುಗಳು ಸಿಕ್ಕಾಪಟ್ಟೆ ಅಲರ್ಟ್ ಆಗಿರುತ್ತವೆ. ಹತ್ತಿರ ಬರುವ ಮನುಷ್ಯರು ಅಥವಾ ಪ್ರಾಣಿಗಳನ್ನು ಅಪಾಯ ಎಂದು ಭಾವಿಸಿ, ತಮ್ಮ ರಕ್ಷಣೆಗಾಗಿ ಕಚ್ಚಲು ಮುಂದಾಗುವ ಸಾಧ್ಯತೆ ಹೆಚ್ಚು.
ಹಳೆಯ ಚರ್ಮವನ್ನು ತೆಗೆಯಲು ಹಾವು ತನ್ನ ದೇಹವನ್ನು ಕಲ್ಲು, ಮರದ ಕೊಂಬೆ ಅಥವಾ ಒರಟಾದ ಜಾಗಗಳಿಗೆ ಉಜ್ಜಿಕೊಳ್ಳುತ್ತದೆ. ಮೊದಲು ತಲೆಯ ಭಾಗದಲ್ಲಿ ಹಳೆಯ ಚರ್ಮ ಕಳಚಲು ಶುರುವಾಗುತ್ತದೆ. ಆಮೇಲೆ ಹಾವು ನಿಧಾನವಾಗಿ ಮುಂದಕ್ಕೆ ಚಲಿಸುತ್ತಾ ಇಡೀ ಹಳೆಯ ಚರ್ಮವನ್ನು ಹೊರಹಾಕುತ್ತದೆ. ಈ ಪ್ರಕ್ರಿಯೆ ಹಾವಿಗೆ ಸ್ವಲ್ಪ ತ್ರಾಸದಾಯಕ. ಹಾಗಾಗಿ ಪೊರೆ ಬಿಡುವಾಗ ಹಾವುಗಳು ಸಾಮಾನ್ಯವಾಗಿ ಶಾಂತ ಮತ್ತು ಸುರಕ್ಷಿತ ಜಾಗವನ್ನು ಹುಡುಕಿಕೊಳ್ಳುತ್ತವೆ. ಈ ಟೈಮಲ್ಲಿ ಅವುಗಳಿಗೆ ತೊಂದರೆ ಕೊಡದಿರುವುದೇ ಒಳಿತು.
55
ಪೊರೆ ಬಿಟ್ಟ ಮೇಲೆ ಹಾವು ಹೆಚ್ಚು ಅಪಾಯಕಾರಿನಾ?
ಪೊರೆ ಸಂಪೂರ್ಣವಾಗಿ ಬಿಟ್ಟ ಮೇಲೆ ಹಾವಿನ ದೃಷ್ಟಿ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ. ಹೊಸ ಚರ್ಮ ಕೂಡ ಫ್ರೆಶ್ ಆಗಿ, ಹೊಳೆಯುತ್ತಿರುತ್ತದೆ. ಆದರೆ ಪೊರೆ ಬಿಟ್ಟ ಮೇಲೆ ಹಾವು ಹೆಚ್ಚು ವಿಷಕಾರಿಯಾಗಿ ಅಥವಾ ಅಪಾಯಕಾರಿಯಾಗಿ ಬದಲಾಗುತ್ತದೆ ಅನ್ನೋದು ಸುಳ್ಳು. ಪೊರೆ ಬಿಡುವ ಮುನ್ನ ಮತ್ತು ಆ ಪ್ರಕ್ರಿಯೆ ನಡೆಯುವಾಗ ಹಾವಿಗೆ ಸ್ವಲ್ಪ ಕಿರಿಕಿರಿಯಿರುತ್ತದೆ. ಕಣ್ಣು ಮಂಜಾಗುವುದರಿಂದ ಅಪಾಯವನ್ನು ಬೇಗನೆ ಅಂದಾಜಿಸಲು ಅದಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಮನುಷ್ಯರು ಹತ್ತಿರ ಹೋದರೆ, ತನ್ನ ರಕ್ಷಣೆಗಾಗಿ ಕಚ್ಚಲು ಪ್ರಯತ್ನಿಸುತ್ತದೆ. ಆದ್ದರಿಂದ ಹಾವು ಪೊರೆ ಬಿಡುತ್ತಿರುವುದು ಕಂಡರೆ, ಅದರಿಂದ ದೂರ ಇರುವುದು ಮತ್ತು ಅದನ್ನು ಕೆಣಕದಿರುವುದು ಸೇಫ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.