ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂಬಾನಿ ಕುಟುಂಬದ ಐಷಾರಾಮಿ ಜೀವನಶೈಲಿ ಆಗಾಗ ಸುದ್ದಿಯಲ್ಲಿರುತ್ತದೆ. ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಮಗ ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ ತಮ್ಮ ಐಷಾರಾಮಿ ಕಾರ್, ಡ್ರೆಸ್, ಬ್ಯಾಗ್‌ಗಳಿಂದ ಸುದ್ದಿಯಲ್ಲಿರುತ್ತಾರೆ.
ಹಾಗೆಯೇ ಸದ್ಯ ಜಗತ್ತಿನ ಕಾಸ್ಟ್ಲಿಯೆಸ್ಟ್ ನೆಕ್ಲೇಸ್ ಅಂಬಾನಿ ಸೊಸೆಯ ಬಳಿಯಿದೆ ಅನ್ನೋ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ. ವಿಶ್ವದ ಅತೀ ದುಬಾರಿಯಾಗಿರುವ ಡೈಮಂಡ್ ನೆಕ್ಲೇಸ್ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ, ಮಗ ಆಕಾಶ್ ಅಂಬಾನಿಯ ಪತ್ನಿ ಶ್ಲೋಕಾ ಮೆಹ್ತಾ ಬಳಿಯಿದೆಯಂತೆ.
ಜಗತ್ತಿನಲ್ಲೇ ಅತೀ ದುಬಾರಿ ಎಂದು ಗುರುತಿಸಿಕೊಂಡಿರುವ ಈ ನೆಕ್ಲೇಸ್ ಬೆಲೆ ಕೇವಲ ಒಂದೆರಡು ಕೋಟಿಯಲ್ಲ. ಬರೋಬ್ಬರಿ 450 ಕೋಟಿ ರೂ. ಎಂದು ತಿಳಿದುಬಂದಿದೆ. ಅತ್ತೆ ನೀತಾ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾಗೆ ಈ ನೆಕ್ಲೇಸ್‌ನ್ನು ಉಡುಗೊರೆಯಾಗಿ ನೀಡಿದ್ದಾರಂತೆ.
ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೆಶ್ ಅಂಬಾನಿ ಹಾಗೂ ನೀತಾ ಅಂಬಾನಿ ಹಿರಿಯ ಮಗ ಆಕಾಶ್ ಅಂಬಾನಿಯ ಮದುವೆ ಶ್ಲೋಕಾ ಮೆಹ್ತಾ ಜೊತೆ 2019ರ ಜೊತೆ ಮಾರ್ಚ್ 9ರಂದು ನಡೆದಿತ್ತು ಶ್ಲೋಕಾ ಮೆಹ್ತಾ ದೇಶದ ಪ್ರಸಿದ್ಧ ವಜ್ರ ವ್ಯಾಪಾರಿ ರಸೇಲ್ ಮೆಹ್ತಾರ ಮಗಳು. ಅಂಬಾನಿ ಹಾಗೂ ಮೆಹ್ತಾ ಕುಟುಂಬದ ನಡುವೆ ಈ ಹಿಂದೆ ವ್ಯಾಪಾರದ ಸಂಬಂಧವಿತ್ತು. ಹೀಗಾಗಿ ಪರಸ್ಪರ ಭೇಟಿ ಸಾಮಾನ್ಯವಾಗಿತ್ತು.
ಆಕಾಶ್ ಅಂಬಾನಿಯಂತೆ ಶ್ಲೋಕಾ ಶಿಕ್ಷಣ ವಿದೇಶದಲ್ಲಿ ಪಡದಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಇವರು ಒಡಹುಟ್ಟಿದವರಲ್ಲಿ ಕಿರಿಯರು. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಿಂದ ಶಿಕ್ಷಣ ಆರಂಬಿಸಿದರು ಶ್ಲೋಕಾ.. ಆಕಾಶ್ ಅಂಬಾನಿ ಕೂಡ ಅಲ್ಲೇ ಅಧ್ಯಯನ ಮಾಡಿದರು. ಆಗಲೇ ಒಬ್ಬರಿಗೊಬ್ಬರು ಪರಿಚಯವಾಗಿದ್ದು.
ಈ ಹಿಂದೆ ಬಾಲಿವುಡ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಆರತಕ್ಷತೆಯಲ್ಲಿ ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ. ಬ್ಲ್ಯಾಕ್ ಕಲರ್ ಸೂಟ್ ನಲ್ಲಿ ಮಿಂಚಿದ್ದರು. ವಜ್ರದ ಕಿವಿಯೋಲೆಗಳು ಮತ್ತು ವಜ್ರದ ಬಳೆಯೊಂದಿಗೆ ಕಪ್ಪು ವರ್ಣದ ಸೀರೆಯಲ್ಲಿ ಶ್ಲೋಕಾ ಸಂಪೂರ್ಣವಾಗಿ ಸುಂದರವಾಗಿ ಕಾಣುತ್ತಿದ್ದರು.
ಅದರಲ್ಲೂ ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಕೈಯಲ್ಲಿ ಕಂಗೊಳಿಸುತ್ತಿದ್ದ ಬೃಹತ್ ಎಮರಾಲ್ಡ್ ರಿಂಗ್. ಪಚ್ಚೆ ಉಂಗುರ ಎಲ್ಲರ ಕಣ್ಣು ಕೋರೈಸುವಂತಿತ್ತು. ಇದರ ಬೆಲೆ ಎಷ್ಟು ಅನ್ನೋ ಬಗ್ಗೆ ಎಲ್ಲರಲ್ಲಿ ಕುತೂಹಲ ಮೂಡಿತ್ತು.