Health Tips: ಉಪ್ಪು ಅಥವಾ ಸಕ್ಕರೆ, ಮೊಸರನ್ನು ಯಾವುದರ ಜೊತೆ ತಿಂದ್ರೆ ಆರೋಗ್ಯಕ್ಕೆ ಉತ್ತಮ

First Published | Apr 17, 2023, 7:00 AM IST

ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಕೂಲ್‌ಡ್ರಿಂಕ್ಸ್, ಐಸ್‌ಕ್ರೀಂಗಳ ಮೊರೆ ಹೋಗುತ್ತಿದ್ದಾರೆ. ಮೊಸರನ್ನ, ಲಸ್ಸಿಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ ಮೊಸರನ್ನು ಸಕ್ಕರೆ ಅಥವಾ ಉಪ್ಪು ಸೇರಿಸಿ ತಿನ್ನುತ್ತಾರೆ. ಆದರೆ ಇವೆರಡಲ್ಲಿ ಯಾವ ರೀತಿಯ ಅಭ್ಯಾಸ ಒಳ್ಳೆಯದು.

ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಜನರು ತಮ್ಮ ಆಹಾರದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುತ್ತಾರೆ. ಬೇಸಿಗೆಯಲ್ಲಿ ಮೊಸರು ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೀಗಾಗಿ ಬಹುತೇಕರು ಮೊಸರನ್ನು ಹೆಚ್ಚು ತಿನ್ನುತ್ತಾರೆ.

ಮೊಸರನ್ನು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಬಾರಿಯೂ ಸೇವಿಸಬಹುದು. ಆರೋಗ್ಯ ತಜ್ಞರ ಪ್ರಕಾರ, ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳ ಉತ್ತಮ ಮೂಲವಾಗಿದೆ. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇದರ ಬಳಕೆಯಿಂದ ದೂರವಾಗುತ್ತದೆ. ಆದರೆ ಮೊಸರು ತಿನ್ನುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. 

Latest Videos


ಕೆಲವರು ಮೊಸರನ್ನು ಉಪ್ಪು ಬೆರೆಸಿ ತಿನ್ನುತ್ತಾರೆ. ಇನ್ನು ಕೆಲವರು ಮೊಸರನ್ನು ಸಕ್ಕರೆ ಬೆರೆಸಿ ತಿನ್ನಲು ಇಷ್ಟಪಡುತ್ತಾರೆ. ಮೊಸರನ್ನು ಉಪ್ಪು ಅಥವಾ ಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಮೊಸರು ಮತ್ತು ಉಪ್ಪು:
ಆರೋಗ್ಯ ತಜ್ಞರ ಪ್ರಕಾರ, ಮೊಸರನ್ನು ಉಪ್ಪಿನೊಂದಿಗೆ ಬೆರೆಸಿ ಪ್ರತಿದಿನ ಸೇವಿಸುವುದರಿಂದ ವಾತ ಮತ್ತು ಕಫಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಇದರ ಬದಲಿಗೆ ಉಪ್ಪಿನೊಂದಿಗೆ ಮಜ್ಜಿಗೆ ರೂಪದಲ್ಲಿ ಮೊಸರು ಕುಡಿಯಬಹುದು.

ಮೊಸರನ್ನು ಉಪ್ಪಿನೊಂದಿಗೆ ಬೆರೆಸಿ ತಿಂದರೆ ಮಧುಮೇಹದ ಸಮಸ್ಯೆಯಿಂದ ದೂರವಿರಬಹುದು. ಮತ್ತೊಂದೆಡೆ, ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಉಪ್ಪು ಬೆರೆಸಿದ ಮೊಸರು ತಿನ್ನಬಾರದು.

ಮೊಸರು ಮತ್ತು ಸಕ್ಕರೆ:
ಅನೇಕ ಜನರು ಸಕ್ಕರೆಯೊಂದಿಗೆ ಮೊಸರು ಸೇವಿಸುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ಮೊಸರನ್ನು ಸಕ್ಕರೆಯೊಂದಿಗೆ ಬೆರೆಸಿ ಸೇವಿಸುವುದರಿಂದ ತ್ವರಿತವಾಗಿ ತೂಕ ಹೆಚ್ಚಾಗುತ್ತದೆ. ಹೀಗಾಗಿ ಬೊಜ್ಜಿನ ಸಮಸ್ಯೆ ಕಾಡಬಹುದು. ಮಧುಮೇಹಿಗಳು ಸಕ್ಕರೆ ಹೊಂದಿರುವ ಮೊಸರನ್ನು ಸೇವಿಸಬಾರದು. 

ಇದಲ್ಲದೆ ಮೊಸರು ಮತ್ತು ಸಕ್ಕರೆಯ ಸಂಯೋಜನೆಯು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನುವುದರಿಂದ ಹೊಟ್ಟೆಯಲ್ಲಿ ಉರಿ ಮತ್ತು ಆಮ್ಲೀಯತೆಯ ಸಮಸ್ಯೆ ದೂರವಾಗುತ್ತದೆ. ಮೊಸರು ಮತ್ತು ಸಕ್ಕರೆ ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.

click me!