Snake Mimicry Facts: ಹಾವು ಅಂದ ತಕ್ಷಣ ಮೊದಲು ನೆನಪಾಗೋದು ಅದರ ವಿಷ ಮತ್ತು ಭಯ. ಆದರೆ ಎಲ್ಲ ಹಾವುಗಳು ವಿಷದಿಂದಲೇ ಶತ್ರುಗಳನ್ನು ಎದುರಿಸುವುದಿಲ್ಲ! ನಟಿಸುವುದು, ವಿಷ ಉಗುಳುವುದು ಮತ್ತು ದೇಹದ ಬಣ್ಣ ಬದಲಾಯಿಸುವುದು ಸೇರಿದಂತೆ ಅಚ್ಚರಿಯ 'ಮಿಮಿಕ್ರಿ' ತಂತ್ರಗಳನ್ನು ಬಳಸುತ್ತವೆ.
ಇದು ಹಾವಿನ ಲೋಕದ "ಬೆಸ್ಟ್ ಆಕ್ಟರ್". ಯಾರಾದರೂ ದಾಳಿ ಮಾಡಲು ಬಂದರೆ, ಇದು ಮಕಾಡೆಯಾಗಿ ಮಲಗಿ ನಾಲಿಗೆ ಹೊರಹಾಕಿ "ನಾನು ಸತ್ತಿದ್ದೇನೆ" ಎಂದು ನಟಿಸುತ್ತದೆ. ಅತಿಯಾದ ಭಯವಾದರೆ ತನ್ನ ಬಾಯಿಯೊಳಗಿನ ರಕ್ತನಾಳಗಳನ್ನು ಒಡೆದುಕೊಂಡು ರಕ್ತ ಬರುವಂತೆ ಮಾಡುತ್ತದೆ. ಇದನ್ನು ನೋಡಿ ಶತ್ರು ಪ್ರಾಣಿ "ಇದು ಕೊಳೆತ ಶವ" ಎಂದು ತಿಳಿದು ಹೊರಟುಹೋಗುತ್ತದೆ.
26
ರಾಟಲ್ ಸ್ನೇಕ್ (Rattlesnake)
ಈ ಹಾವಿನ ಕಣ್ಣುಗಳ ಹತ್ತಿರ 'ಲೋರಿಯಲ್ ಪಿಟ್' ಎಂಬ ವಿಶೇಷ ಅಂಗವಿರುತ್ತದೆ. ಇದು ಒಂದು ರೀತಿ 'ನೈಟ್ ವಿಷನ್ ಕ್ಯಾಮೆರಾ' ಇದ್ದಂತೆ. ಅಂದರೆ, ಕತ್ತಲಲ್ಲಿ ಕೂಡ ಶತ್ರುವಿನ ದೇಹದ ಶಾಖವನ್ನು (infrared) ಇದು ಪತ್ತೆಹಚ್ಚುತ್ತದೆ. ಕಣ್ಣಿಗೆ ಕಾಣುವ ಮೊದಲೇ ಶತ್ರು ಎಲ್ಲಿದ್ದಾನೆಂದು ಇದಕ್ಕೆ ಈ ಅಂಗದ ಸಹಾಯದಿಂದ ತಿಳಿಯುತ್ತದೆ.
36
ಸ್ಕಾರ್ಲೆಟ್ ಕಿಂಗ್‌ಸ್ನೇಕ್ (Scarlet Kingsnake)
ಈ ಹಾವಿಗೆ ವಿಷವೇ ಇರುವುದಿಲ್ಲ, ಆದರೆ ಇದು ನೋಡಲು ವಿಷಕಾರಿ 'ಕೋರಲ್ ಹಾವು' ತರಹವೇ ಇರುತ್ತದೆ. ಇತರ ಪ್ರಾಣಿಗಳು ಇದನ್ನು ನೋಡಿ "ಇದು ವಿಷಕಾರಿ ಹಾವು" ಎಂದು ಹೆದರಿ ದೂರ ಹೋಗುತ್ತವೆ. ತನ್ನ ರೂಪದ ಮೂಲಕವೇ ಶತ್ರುಗಳನ್ನು ಇದು ದಾರಿ ತಪ್ಪಿಸುತ್ತದೆ. ಇದು ಒಂದು ರೀತಿ ಮೋಸ ಮಾಡುವ ತಂತ್ರ.
ಇವು ಬೇಟೆಯಾಡುವಾಗ ತುಂಬಾ ಜಾಣತನ ಪ್ರದರ್ಶಿಸುತ್ತವೆ. ಶತ್ರು ಅಥವಾ ಬಲಿಯಾದ ಪ್ರಾಣಿಯನ್ನು ಸುತ್ತುವರೆದಾಗ ಆ ಪ್ರಾಣಿಯ ಹೃದಯ ಬಡಿತವನ್ನು ಗಮನಿಸುತ್ತವೆ. ಎಲ್ಲಿಯವರೆಗೆ ಹೃದಯ ಬಡಿಯುತ್ತಿರುತ್ತದೋ, ಅಲ್ಲಿಯವರೆಗೆ ಬಿಗಿಯಾಗಿ ಹಿಸುಕುತ್ತವೆ. ಹೃದಯ ಬಡಿತ ಸಂಪೂರ್ಣವಾಗಿ ನಿಂತ ಮೇಲೆ ಪ್ರಾಣಿ ಸತ್ತಿದೆ ಎಂದು ಖಚಿತಪಡಿಸಿಕೊಂಡೇ ಹಿಡಿತ ಬಿಡುತ್ತವೆ.
56
ಸ್ಪಿಟ್ಟಿಂಗ್ ಕೋಬ್ರಾ (Spitting Cobra)
ಈ ಹಾವಿನ ಹಲ್ಲುಗಳಲ್ಲಿ ವಿಶೇಷ ರಂಧ್ರಗಳಿರುತ್ತವೆ. ಇವು ಪರಭಕ್ಷಕದ ಕಣ್ಣಿನ ಚಲನೆಯನ್ನು ಗಮನಿಸಿ ಸರಿಯಾಗಿ ಕಣ್ಣಿಗೇ ವಿಷವನ್ನು ಚಿಮ್ಮಿಸುತ್ತವೆ. ಇದರಿಂದ ಶತ್ರುವಿಗೆ ತೀವ್ರ ನೋವಾಗಿ ಸ್ವಲ್ಪ ಹೊತ್ತು ದೃಷ್ಟಿ ಮಂದವಾಗುತ್ತದೆ. ಆ ಸಮಯದಲ್ಲಿ ಹಾವು ಅಲ್ಲಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳುತ್ತದೆ.
66
ಕಿಂಗ್ ಕೋಬ್ರಾ (King Cobra)
ಇದು ಜಗತ್ತಿನ ಅತಿ ಉದ್ದದ ಹಾವು. ಇದರ ವಿಶೇಷತೆ ಏನೆಂದರೆ, ಇದು ಶತ್ರುವನ್ನು ಎದುರಿಸುವಾಗ ತನ್ನ ದೇಹದ ಮುಂಭಾಗವನ್ನು ಅಂದರೆ ಸುಮಾರು 5-6 ಅಡಿಯಷ್ಟು ಎತ್ತರಕ್ಕೆ ಗಾಳಿಯಲ್ಲಿ ನಿಲ್ಲಿಸಬಲ್ಲದು. ಇದು ಹೆಡೆ ಬಿಚ್ಚಿ ಬುಸುಗುಟ್ಟಿದರೆ ದೊಡ್ಡ ಪ್ರಾಣಿಗಳೂ ಬೆಚ್ಚಿಬೀಳುತ್ತವೆ. ಇದರ ವಿಷ ನೇರವಾಗಿ ನರಮಂಡಲದ ಮೇಲೆ ದಾಳಿ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.