18ರ ಹುಡುಗನಾಗಲು ಹೊರಟಿರುವ 46ರ ಹರೆಯದ ಉದ್ಯಮಿ ಬ್ರಿಯಾನ್ ಲೈಫ್‌ಸ್ಟೈಲ್ ಹೇಗಿದೆ ನೋಡಿ?

First Published | Sep 26, 2023, 1:50 PM IST

ಚಿರ ಯೌವ್ವನವನ್ನು ಉಳಿಸಿಕೊಳ್ಳುವ ಸಾಹಸಕ್ಕೆ ಇಳಿದು ಸುದ್ದಿಯಲ್ಲಿರುವ ಜಗತ್ತಿನ ಶ್ರೀಮಂತ ಉದ್ಯಮಿ ಬ್ರಿಯಾನ್ ಜಾನ್ಸನ್, ಅವರು ತಾನು ಈ ಸಾಹಸಕ್ಕಾಗಿ ಪ್ರತಿದಿನವೂ 111 ಮಾತ್ರೆಗಳನ್ನು ಸೇವಿಸುತ್ತಿರುವುದಾಗಿ ಹೇಳಿದ್ದಾರೆ.

Bryan Johnson Lifestyle

ಚಿರ ಯೌವ್ವನವನ್ನು ಉಳಿಸಿಕೊಳ್ಳುವ ಸಾಹಸಕ್ಕೆ ಇಳಿದು ಸುದ್ದಿಯಲ್ಲಿರುವ ಜಗತ್ತಿನ ಶ್ರೀಮಂತ ಉದ್ಯಮಿ ಬ್ರಿಯಾನ್ ಜಾನ್ಸನ್, ಅವರು ತಾನು ಈ ಸಾಹಸಕ್ಕಾಗಿ ಪ್ರತಿದಿನವೂ 111 ಮಾತ್ರೆಗಳನ್ನು ಸೇವಿಸುತ್ತಿರುವುದಾಗಿ ಹೇಳಿದ್ದಾರೆ. 

Bryan Johnson Lifestyle

ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿದ ಬ್ರಿಯಾನ್‌ ಪ್ರಕೃತಿಗೆ ವಿರುದ್ಧವಾದ ಈ ಪ್ರಯತ್ನಕ್ಕಾಗಿ 2 ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿರುವುದಾಗಿ ಹೇಳುವ ಮೂಲಕ ಹಿಂದೆ ಸುದ್ದಿಯಲ್ಲಿದ್ದರು

Tap to resize

Bryan Johnson Lifestyle

ಬರೀ 111 ಮಾತ್ರಗಳು ಮಾತ್ರವಲ್ಲದೇ ಇನ್ನು ಅನೇಕ ಪ್ರಯೋಗಗಳನ್ನು ಇವರು ತಮ್ಮ ದೇಹದ ಮೇಲೆ ಪ್ರಯೋಗಿಸುತ್ತಿದ್ದಾರೆ. ತಮ್ಮ ಈ ಪ್ರಯೋಗದ ಪ್ರಗತಿಯನ್ನು ತಿಳಿಯಲು ವಿವಿಧ ಆರೋಗ್ಯ ಮೇಲ್ವಿಚಾರಣಾ ಸಾಧನಗಳನ್ನು ಸಹ ಬಳಸುತ್ತಾರೆ.

Bryan Johnson Lifestyle

ಇದರ ಜೊತೆಗೆ ಬೇಸ್‌ಬಾಲ್ ಕ್ಯಾಪ್‌ (baseball cap) ಕೂಡ ಧರಿಸುತ್ತಾರೆ.  ಈ ಕ್ಯಾಪ್‌ ನೆತ್ತಿಯ ಮೇಲೆ ಕೆಂಪು  ಲೈಟ್‌ನ್ನು ಹಾರಿಸುತ್ತದೆ. ಅಲ್ಲದೇ ಆತನ ದೇಹದ ಸ್ಟೂಲ್ ಸ್ಯಾಂಪಲ್ (ಮಲದ ಮಾದರಿಯ ಸಂಗ್ರಹ) ಸಂಗ್ರಹಿಸುತ್ತದೆ. 

Bryan Johnson Lifestyle

ಈತನ ಈ ಪ್ರಕ್ರಿಯೆಯಲ್ಲಿ ಈತನ ಮಗ ಹಾಗೂ ಅಪ್ಪ ಕೂಡ ಬೆಂಬಲವಾಗಿದ್ದಾರೆ. ಒಮ್ಮೆ ಈತ ಇದಕ್ಕಾಗಿ ಮಗನಿಂದ ರಕ್ತವನ್ನು ಪಡೆದಿದ್ದ.

Bryan Johnson Lifestyle

ಅಲ್ಲದೇ ಈತ ರಾತ್ರಿಯ ವೇಳೆ ನಿದ್ರಿಸುವಾಗ ಸಣ್ಣದಾದ ಜೆಟ್ ಪ್ಯಾಕ್‌ನಲ್ಲಿ ಮಲಗುತ್ತಾನೆ. ಇದು ಆತನ ಗುಪ್ತಾಂಗಕ್ಕೆ (penis) ಹೊಂದಿಕೊಂಡಿದ್ದು ರಾತ್ರಿಯ ವೇಳೆ ಅದರ ಚಲನೆಯನ್ನು (nighttime erections) ಕೂಡ ಗಮನಿಸುತ್ತದೆಯಂತೆ..!

Bryan Johnson Lifestyle

ತನ್ನ ಇಡೀ ದೇಹವನ್ನು ವಯಸ್ಸಾಗದಂತೆ ತಡೆಯುವುದಕ್ಕಾಗಿ ಹೊಸ ಪ್ರಯೋಗಕ್ಕೆ ಒಡ್ಡಿದ್ದು, ಈತನ ದೇಹದ ನಿರ್ವಹಣೆಯನ್ನು ಹೊರಭಾಗದಿಂದ ನಿರ್ವಹಿಸುವ ಸಾಹಸ ಇದಾಗಿದ್ದು, ಇದನ್ನು ಆತ ರಾಸ್ಕಲ್ ಮೈಂಡ್ ಎಂದು ಕರೆದಿದ್ದಾನೆ.

Bryan Johnson Lifestyle

 46 ವರ್ಷದ ಈತನ ದೇಹವನ್ನು 18 ವರ್ಷದ ತರುಣನ ದೇಹದಂತೆ ಮಾರ್ಪಡಿಸುವುದು ಇದರ ಗುರಿ. ಈ ಪ್ರಯೋಗದ ಹಿನ್ನೆಲೆಯಲ್ಲಿ ಈತನ ಬದುಕಿನ ದಿನಚರಿ ಸಂಪೂರ್ಣ ಬದಲಾಗಿದ್ದು, ಬೆಳಗ್ಗೆ 11 ಗಂಟೆಗೆಲ್ಲಾ ಈತ ತನ್ನ ರಾತ್ರಿಯ ಊಟವನ್ನು ಮುಗಿಸಿ ಬಿಡುತ್ತಾನೆ.  

Bryan Johnson Lifestyle

ಈ ಟೆಕ್‌ ಮಿಲಿಯನೇರ್‌ನ ಮುಖ್ಯ ಮಾರ್ಕೆಂಟಿಂಗ್ ಆಫೀಸರ್ ಆಗಿರುವ ಕೇಟ್ ಟೋಲೋ ಅವರು ಈ ಜೀವನಶೈಲಿಯ ಮೇಲುಸ್ತುವಾರಿ ವಹಿಸಿದ್ದಾರೆ. 

Bryan Johnson Lifestyle

ಇನ್ನು ಬ್ರಿಯಾನ್ ಜಾನ್ಸನ್‌ (Bryan Johnson) ಶ್ರೀಮಂತಿಕೆ ಬಗ್ಗೆ ಹೇಳುವುದಾದರೆ, ಈತ ತನ್ನ 30 ರ ಪ್ರಾಯದಲ್ಲಿರುವಾಗ ಈತನೇ ಸ್ಥಾಪಿಸಿದ್ದ ಪಾವತಿ ಸಂಸ್ಕರಣಾ ಕಂಪನಿ ಬ್ರೈನ್ಟ್ರೀ ಪೇಮೆಂಟ್ ಸೊಲ್ಯುಷನ್‌ (Braintree Payment Solutions) ಅನ್ನು ಈಬೇಗೆ (EBay)  $ 800 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡುತ್ತಾರೆ.

Bryan Johnson Lifestyle

ಬ್ರೈನ್ಟ್ರೀ ಪೇಮೆಂಟ್ ಸೊಲ್ಯುಷನ್‌ (Braintree Payment Solutions) ಅನ್ನು ಈಬೇಗೆ (EBay)  $ 800 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ ನಂತರ ಇವರ ಅದೃಷ್ಟ ಖುಲಾಯಿಸಿತು.

Bryan Johnson Lifestyle

46 ವರ್ಷದ ಮಿಲಿಯನೇರ್ ಬ್ರಿಯಾನ್‌ ತನ್ನ ಎಲೆಕ್ಟ್ರಿಕ್ ಆಡಿ ಕಾರನ್ನು ಸ್ವತಃ ಚಾಲನೆ ಮಾಡುತ್ತಾನೆ, ಆದರೆ ಅತ್ಯಂತ ನಿಧಾನವಾಗಿ ವಾಹನ ಚಲಾಯಿಸುವ ಆತ ಗಂಟೆಗೆ 16 ಮೈಲುಗಳಷ್ಟು ದೂರ ಮಾತ್ರ ಪ್ರಯಾಣಿಸುತ್ತಾನಂತೆ .

Bryan Johnson Lifestyle

ಈತ ಇತ್ತೀಚೆಗೆ ತನ್ನ ಆಹಾರ ಶೈಲಿಯನ್ನು ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕರ ಕೋರಿಕೆ ಮೇರೆಗೆ ಲೈಫ್‌ಸ್ಟೈಲ್ ನೀಲಾನಕಾಶೆ ಪೋಸ್ಟ್ ಮಾಡಿದ್ದಾಗಿ ಬ್ರಿಯಾನ್ ಹೇಳಿದ್ದಾನೆ.

Latest Videos

click me!