ಈ ಅಭ್ಯಾಸಗಳಿದ್ರೆ ಇನ್ನು 10 ವರ್ಷದಲ್ಲಿ ನಿಮ್ಮ ದೇಹ ಹಾಳಾಗೋದು ಗ್ಯಾರಂಟಿ

First Published | Sep 26, 2023, 7:00 AM IST

ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ಫಾಲೋ ಮಾಡೋ ಕೆಲವೊಂದು ಅಭ್ಯಾಸಗಳು ಆತನ ಆರೋಗ್ಯವನ್ನು ನಿರ್ಧರಿಸುತ್ತದೆ. ನಿಮ್ಮಲ್ಲಿರುವ ಕೆಲವೊಂದು ಕೆಟ್ಟ ಅಭ್ಯಾಸ ಮುಂದಿನ 10 ವರ್ಷಗಳಲ್ಲಿ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಪರಿಣಾಮ ಬೀರುತ್ತದೆ. ಅಂಥಾ ಅಭ್ಯಾಸ ಯಾವುದು ತಿಳ್ಕೊಳ್ಳಿ.

ಪ್ರತಿದಿನ ನಿಮ್ಮ ದೇಹವು ಜೀವಕೋಶಗಳನ್ನು ಪುನರುತ್ಪಾದಿಸುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಸಾಮಾನ್ಯ ಅಂದಾಜಿನ ಪ್ರಕಾರ, ಎಲ್ಲಾ ಮಾನವ ಜೀವಕೋಶಗಳನ್ನು ಬದಲಾಯಿಸಲು 7ರಿಂದ 10 ವರ್ಷಗಳು ಬೇಕಾಗುತ್ತದೆ. ಆದ್ದರಿಂದ, ಇಂದು ನೀವು ಅಳವಡಿಸಿಕೊಳ್ಳುವ ಕೊಳಕು ಅಭ್ಯಾಸವು ಮುಂದಿನ 10 ವರ್ಷಗಳಲ್ಲಿ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿರ್ಜೀವ, ದುರ್ಬಲ, ಅನಾರೋಗ್ಯಕರ ಮತ್ತು ತ್ವರಿತ ವಯಸ್ಸಾಗುವ ಈ ಅಭ್ಯಾಸಗಳನ್ನು ಆದಷ್ಟು ಬೇಗ ತ್ಯಜಿಸಿ.

ನಿಷ್ಕ್ರಿಯತೆ ಮತ್ತು ಕಳಪೆ ಆಹಾರ
ಚಟುವಟಿಕೆ ಮತ್ತು ಆಹಾರವು ದೇಹದ ಮೇಲೆ ಅತ್ಯಂತ ಆಳವಾದ ಪರಿಣಾಮ ಬೀರುತ್ತದೆ.  ನೀವು ದೇಹದ ಚಲನೆಯನ್ನು ಕಡಿಮೆ ಮಾಡಿದರೆ, ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಅದೇ ಸಮಯದಲ್ಲಿ, ಕೆಟ್ಟ ಆಹಾರವು (unhealthy food) ಸರಿಯಾಗಿ ಕೆಲಸ ಮಾಡಲು ಶಕ್ತಿಯನ್ನು ನೀಡುವುದಿಲ್ಲ. ಅದು ನಿಮ್ಮನ್ನು ದುರ್ಬಲ, ನಿರ್ಜೀವ ಮತ್ತು ಅನಾರೋಗ್ಯಕ್ಕೆ ದೂಡುತ್ತದೆ.

Latest Videos


ಬಹಳ ಹೊತ್ತು ಕುಳಿತುಕೊಳ್ಳುವುದು
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕಚೇರಿಯಲ್ಲಿ (sitting for long time) ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುತ್ತದೆ. ಈ ಸ್ಥಿತಿಯು ದೇಹಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಇದು ಬೊಜ್ಜು, ಹೃದ್ರೋಗ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಸಾಕಷ್ಟು ನೀರು ಕುಡಿಯದಿರುವುದು
ನೀರನ್ನು ಕುಡಿಯದ ಕಾರಣ, ದೇಹವು ನಿರ್ಜಲೀಕರಣಗೊಳ್ಳುತ್ತದೆ (dehydration), ಇದರಿಂದ ದೇಹದಲ್ಲಿನ ವಿಷ ಸಹ ಹೊರಗೆ ಹೋಗೋದಿಲ್ಲ. ಎನ್ಸಿಬಿಐ ಸಂಶೋಧನೆಯ ಪ್ರಕಾರ, ಸರಿಯಾದ ನೀರು ಕುಡಿಯೋದರಿಂದ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಎಲ್ಲಾ ಜೀವಾಣುಗಳು ಸುಲಭವಾಗಿ ಬಿಡುಗಡೆಯಾಗುತ್ತವೆ.

ದೇಹದ ತೂಕವನ್ನು ನಿಯಂತ್ರಿಸದಿರೋದು
ಬೊಜ್ಜು ಹೃದಯರಕ್ತನಾಳದ ಕಾಯಿಲೆ, ಕೊಬ್ಬಿನ ಯಕೃತ್ತು ಮತ್ತು ಮಧುಮೇಹ ಉಂಟು ಮಾಡುವ ರೋಗವಾಗಿದೆ. ಇದನ್ನು ತಪ್ಪಿಸಲು, ನೀವು ನಿಮ್ಮ ದೇಹದ ತೂಕದ (weight gain) ಬಗ್ಗೆ ಸಂಪೂರ್ಣ ಗಮನ ಹರಿಸಬೇಕು ಮತ್ತು ತೂಕ ಹೆಚ್ಚದಂತೆ ಕ್ರಮ ತೆಗೆದುಕೊಳ್ಳಬೇಕು. 

ಸರಿಯಾಗಿ ನಿದ್ರೆ ಮಾಡದಿರೋದು
ಜೀವಕೋಶಗಳನ್ನು ಆರೋಗ್ಯಕರವಾಗಿಡಲು ಬಯಸಿದರೆ, ಪ್ರತಿದಿನ ಸಾಕಷ್ಟು ನಿದ್ರೆ ಮಾಡಿ. ಮಲಗುವಾಗ, ದೇಹವು ಜೀವಕೋಶಗಳನ್ನು ಸರಿಪಡಿಸುತ್ತದೆ, ಇದು ಕೊಳಕು ಅಭ್ಯಾಸಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಕಡಿಮೆ ನಿದ್ರೆ (less sleep) ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ.

ಈ ಅಭ್ಯಾಸಗಳನ್ನು ಸಹ ಬಿಟ್ಟುಬಿಡಿ.
ಧೂಮಪಾನ, ಮದ್ಯಪಾನ (smoking and drinking)  ಮತ್ತು ಅತಿಯಾದ ಒತ್ತಡವು ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅದೇ ಸಮಯದಲ್ಲಿ, ನಿಮ್ಮ ಸಾಮಾಜಿಕ ಜೀವನವು ಚಿಕ್ಕದಾಗಿದ್ದರೆ ಒತ್ತಡವು ನಿಮ್ಮ ಮನಸ್ಸನ್ನು ಆಳುತ್ತದೆ. ಇದರಿಂದಾಗಿ ಮೆದುಳಿನ ಶಕ್ತಿ ವೇಗವಾಗಿ ಕಡಿಮೆಯಾಗುತ್ತದೆ ಮತ್ತು ಮರೆಗುಳಿತನಕ್ಕೆ ಕಾರಣವಾಗಬಹುದು. ಇದು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಲು ಸಹ ಕೆಲಸ ಮಾಡುತ್ತದೆ.

click me!