ಟೀ ಮಾಡೋದು ಯಾರಿಗೆ ಗೊತ್ತಿಲ್ಲ ಎಂದೇ ಹಲವರು ಭಾವಿಸುತ್ತಾರೆ. ಆದರೆ, ಟೀಯನ್ನು ರುಚಿರುಚಿಯಾಗಿ ಮಾಡೋದು ಹಲವರಿಗೆ ಗೊತ್ತಿಲ್ಲ. ಆದರೆ, ಇಲ್ಲಿ ನಾವು ಹೇಳುತ್ತಿರೋದು ಕೇವಲ ರುಚಿಯ ಬಗ್ಗೆ ಅಲ್ಲ.. ಬದಲಿಗೆ ಟೀ ಕಾಯಿಸುವಾಗ ನೀವು ಈ ಒಂದು ಪದಾರ್ಥವನ್ನು ಸೇರಿಸಿದರೆ ಟೀ ಅದೆಷ್ಟು ರುಚಿಯಾಗುತ್ತೆ ಗೊತ್ತಾ?
ಟೀ ಮಾಡೋದು ಯಾರಿಗೆ ಗೊತ್ತಿಲ್ಲ ಎಂದೇ ಹಲವರು ಭಾವಿಸುತ್ತಾರೆ. ಆದರೆ, ಟೀಯನ್ನು ರುಚಿರುಚಿಯಾಗಿ ಮಾಡೋದು ಹಲವರಿಗೆ ಗೊತ್ತಿಲ್ಲ. ರುಚಿಗಳಲ್ಲೂ ಹಲವು ವಿಧಗಳಿವೆ, ಕೆಲವರಿಗೆ ಕೆಲವು ರುಚಿಗಳು ಇಷ್ಟವಾಗಬಹುದು, ಕೆಲವರಿಗೆ ಕೆಲವು ರುಚಿ ಕಷ್ಟವೂ ಆಗಬಹುದು ಅಂತೀರಾ?
210
ಟಿ ಮಾಡುವಾಗ ಇದೊಂದನ್ನು ಸೇರಿಸಿ
ಆದರೆ, ಇಲ್ಲಿ ನಾವು ಹೇಳುತ್ತಿರೋದು ಕೇವಲ ರುಚಿಯ ಬಗ್ಗೆ ಅಲ್ಲ.. ಬದಲಿಗೆ ಟೀ ಕಾಯಿಸುವಾಗ ನೀವು ಈ ಒಂದು ಪದಾರ್ಥವನ್ನು ಸೇರಿಸಿದರೆ ಟೀ ಅದೆಷ್ಟು ರುಚಿಯಾಗುತ್ತೆ ಗೊತ್ತಾ? ಈ ಸ್ಟೋರಿ ನೋಡಿ ನೀವೂ ಟ್ರೈ ಮಾಡಿ..
310
ನಾರ್ಮಲ್ ಟೀಗೆ ಮಾಡೋ ತರನೇ ಮಾಡಿ...
ಈ ಸ್ಪೆಷಲ್ ಟೀ ಹೀಗೆ ಮಾಡಿ:-
ಟೀ ಕಾಯಿಸೋದು ಬಹತೇಕರಿಗೆ ಗೊತ್ತು. ನೀರು ಕುದಿಯುತ್ತಿರುವಾಗ ಅಥವಾ ಹಾಲು-ನೀರು ಸೇರಿಸಿ ಅದು ಕುದಿಯುತ್ತಿರುವಾಗ ಟೀ ಸೊಪ್ಪನ್ನು ಹಾಕಿ. ಬಳಿಕ ಸಕ್ಕರೆ ಹಾಕೋದು ಇದ್ದೇ ಇದೆ.
ಜೊತೆಗೆ, ಟೀ ಕಾಯಿಸುವಾಗ (ಒಂದು ಕಪ್ ಟೀ ತಯಾರಿಸುವ ಅಳತೆಗೆ ಸರಿಯಾಗಿ) ಒಂದೆರಡು ಕಲ್ಲುಪ್ಪಿನ ಹರಳನ್ನು ಅದಕ್ಕೆ ಸೇರಿಸಿ. ಜಾಸ್ತಿ ಕಲ್ಲುಪ್ಪು ಸೇರಿಸಬಾರದು. ಈ ಟೀ ಕುಡಿಯಲು ಬಹಳಷ್ಟು ರುಚಿ ಎನ್ನಿಸುತ್ತದೆ. ಆದರೆ, ಇದು ಉಪ್ಪಿನ ಟೀ ಆಗದಂತೆ ಎಚ್ಚರ ವಹಿಸಿ. ಅಂದರೆ, ಒಂದು ಕಪ್ ಟೀಗೆ ಒಂದೆರಡು ಹರಳಿಗಿಂತ ಹೆಚ್ಚು ಉಪ್ಪು ಸೇರಿಸಬೇಡಿ!
510
ಹಾಲು ಒಡೆಯುತ್ತದೆ ಅಂತಾನಾ?
ಕಲ್ಲಪ್ಪಿನ ಹರಳು ಹಾಕಿದರೆ ಟೀ ಒಡೆಯುವುದಿಲ್ಲವೇ?
ಹೌದು, ಹಲವರಿಗೆ ಈ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಕಾರಣ, ಸಾಮಾನ್ಯವಾಗಿ ಹಾಲಿಗೆ ಉಪ್ಪ ಸೇರಿಸಿದಾಗ ಹಾಲು ಒಡೆಯುತ್ತದೆ ಎನ್ನುವುದು ಹಲವರ ಸ್ವಾಭಾವಿಕ ಅನುಭವ ಹಾಗೂ ನಂಬಿಕೆ.
610
ಇಲ್ಲ, ನಿಮ್ಮ ಊಹೆ ತಪ್ಪು
ಆದರೆ, ನೀವು ಮಾಡಿ ನೋಡಿ.. ಹಾಲು-ಟೀ ಪುಡಿ-ನೀರು ಹಾಕಿ ಕಾಯಿಸುವಾಗ ಸ್ವಲ್ಪ (ಅಗತ್ಯವಿದ್ದಷ್ಟು ಮಾತ್ರ-ಕಪ್‌ಗೆ ಒಂದೆರಡು ಹರಳು ಕಲ್ಲುಪ್ಪು) ಉಪ್ಪು ಸೇರಿಸಿದರೆ ಟೀ ಒಡೆಯವುದಿಲ್ಲ.
710
ಮಾಡಿ ನೋಡಿ ಬೇಕಾದ್ರೆ
ಹಾಲಿಗೆ ಡೈರೆಕ್ಟ್ ಅಗಿ ಉಪ್ಪು ಸೇರಿಸಿ ಕುದಿಸಿದರೆ ಹಾಲು ಒಡೆಯಬಹುದೇನೋ! ಆದರೆ, ಉಪ್ಪು ಸೇರಿಸಿದ ಟೀ ಒಡೆದಿರುವುದಿಲ್ಲ, ಮಾಡಿ ನೋಡಿ..
810
ಆಹ್ಲಾದದ ಜೊತೆ ರುಚಿ ಕೂಡ
ಒಟ್ಟಿನಲ್ಲಿ ಹೇಳಬೇಕು ಎಂದರೆ, ಟೀ ಕುಡಿಯುವ ಪ್ರತಿಯೊಬ್ಬರಿಗೂ ಟೀ ನಿರ್ಧಿಷ್ಟ ಆಹ್ಲಾದ ಕೊಡುವುದರ ಜೊತೆಗೆ ರುಚಿಯಾಗಿಯೂ ಇರಬೇಕು. ಈ ಬಯಕೆ ಟೀ ಕಾಯಿಸುವ ಹಾಗು ಕುಡಿಯುವ ಪ್ರತಿಯೊಬ್ಬರಲ್ಲೂ ಇದ್ದೇಇರುತ್ತದೆ.
910
ಟೀ ಮಾಡಿ ಪ್ರಶಂಸೆ ಪಡೆಯಿರಿ
ಹಾಗಿರುವಾಗ ರುಚಿಯಾಗಿ ಟೀ ಮಾಡಲು ಈ ಟಿಪ್ಸ್ ಉಪಯೋಗಿಸಿ ಎಲ್ಲರೂ ಮೆಚ್ಚುವಂತಹ, ಅಚ್ಚರಿ ಪಡುವಂತಹ ಟೀ ಮಾಡಿದರೆ ಅದು ಒಳ್ಳೆಯದು ತಾನೆ?
1010
ಸಂಶಯ ಪಿಶಾಚಿ ಬಂದರೆ ವೈದ್ಯರನ್ನು ಕೇಳಿ ಕುಡಿಯಿರಿ
ಸೂಚನೆ: ಯಾರಿಗಾದರೂ ಟೀಗೆ ಅಷ್ಟು ಸ್ವಲ್ಪಮಾತ್ರದ ಕಲ್ಲುಪ್ಪನ್ನು ಟೀಗೆ ಸೇರಿಸುವುದರಿಂದ ಟೀ ಅನಾರೋಗ್ಯಕರವಾಗಬಹುದು, ಟೀ ಕೆಡಬಹುದು, ಅದು ವಿಷ ಆಗಬಹುದು ಎಂಬ ಸಂದೇಹವಿದ್ದರೆ ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಬಳಸಿ..