Japan Hitech Washroom ವಿಶೇಷತೆ ಕಂಡು ಬೆಚ್ಚಿ ಬೆರಗಾದ ಕನ್ನಡದ Bhagyalakshmi Serial ನಟ; ಅಂಥದ್ದೇನಿದೆ?

Published : Apr 27, 2026, 08:27 AM IST

Japan Washrooms: ಜಪಾನ್ ದೇಶ ಎಂದಕೂಡಲೇ ಅಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ನೆನಪಾಗುವುದು. ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್‌ ರಂಗಪ್ರಸಾದ್‌, ಸಂಗೀತಾ ಭಟ್‌ ಅವರು ಇತ್ತೀಚೆಗೆ ಜಪಾನ್‌ಗೆ ಭೇಟಿ ನೀಡಿದ್ದು, ಅಲ್ಲಿನ ವಾಶ್‌ರೂಮ್‌ಗಳ ಬಗ್ಗೆ ಮಾತನಾಡಿದ್ದಾರೆ. 

PREV
17
ಶೌಚಾಲಯದಲ್ಲೂ ತಂತ್ರಜ್ಞಾನ

ಜಪಾನ್‌ನಲ್ಲಿ ತಂತ್ರಜ್ಞಾನ ಎನ್ನೋದು ಕೇವಲ ಬುಲೆಟ್ ಟ್ರೈನ್ ಅಥವಾ ರೋಬೋಟ್‌ಗಳಿಗೆ ಸೀಮಿತವಾಗಿಲ್ಲ. ಅಲ್ಲಿ ಇರುವ ಶೌಚಾಲಯಗಳಲ್ಲಿಯೂ ಕೂಡ ತಂತ್ರಜ್ಞಾನ ಇದೆ. ಅಲ್ಲಿನ ಶೌಚಾಲಯಗಳು ನಿಜಕ್ಕೂ ವಿಶ್ವದ ಅತ್ಯಂತ ಸ್ವಚ್ಛ, ಹೈಟೆಕ್ ಸೌಲಭ್ಯಗಳು ಎಂದು ಹೇಳಲಾಗುತ್ತದೆ.

27
ವಾಶ್ಲೆಟ್, ಬಿಡೆಟ್ ಸೌಲಭ್ಯ

ಅಲ್ಲಿನ ಶೌಚಾಲಯಗಳಲ್ಲಿ 'ವಾಶ್ಲೆಟ್' ಎಂಬ ಆಪ್ಶನ್‌ ಇರುತ್ತದೆ. ಅಲ್ಲಿ ಗುಂಡಿ ಒತ್ತಿದ ತಕ್ಷಣ ನೀರು ಚಿಮ್ಮಿ ಅಲ್ಲಿರೋದೆಲ್ಲ ಕ್ಲೀನ್‌ ಆಗುವುದು. ನಮಗೆ ಬೇಕಾದಂತೆ ಬಿಸಿ, ತಣ್ಣೀರು ಎಂದು ಮಾಡಿಕೊಳ್ಳಬಹುದು.

37
ಬಿಸಿ ಸೀಟ್

ಚಳಿಗಾಲದಲ್ಲಿ ಶೌಚಾಲಯದ ಸೀಟ್ ಮೇಲೆ ಕೂರೋದು ಕಷ್ಟ. ಆದರೆ ಜಪಾನ್‌ನಲ್ಲಿ ಸೀಟ್‌ಗಳು ಮೊದಲೇ ಬಿಸಿ ಇರುತ್ತವೆ. ನಾವು ನಮಗೆ ಬೇಕಾದ ತಾಪಮಾನಕ್ಕೆ ಇದನ್ನು ಸೆಟ್ ಮಾಡಿಕೊಳ್ಳಬಹುದು. ಅಲ್ಲಿನ ಜನರಿಗೆ ಹೆಚ್ಚಿನ ಆರಾಮ ಆಗುವುದು

47
ಶಬ್ದ ಮಾಡುವ ಯಂತ್ರ

ಶೌಚಾಲಯ ಬಳಸಿದಾಗ ಸೌಂಡ್‌ ಆದರೆ ಮುಜುಗರ ಆಗುವುದಂತೆ. ಹೀಗಾಗಿ 'ಓಟೋಹಿಮೆ' ವ್ಯವಸ್ಥೆ ಇರುತ್ತದೆ. ಇದರ ಬಟನ್‌ ಪ್ರೆಸ್‌ ಮಾಡಿದಾಗ, ನೀರು ಹರಿಯುವ ಶಬ್ದದ ಬದಲು ಹಕ್ಕಿಗಳ ಕಲರವ ಆಗುವುದಂತೆ.

57
ಸ್ವಯಂಚಾಲಿತ ಮುಚ್ಚಳ

ನೀವು ಶೌಚಾಲಯದ ಹತ್ತಿರ ಹೋಗುತ್ತಿದ್ದಂತೆ ಸೆನ್ಸಾರ್‌ ಆಗಿ ಮುಚ್ಚಳ ತೆಗೆಯುವುದು, ಆಮೇಲೆ ಕ್ಲೋಸ್‌ ಆಗುವುದು. ಇದನ್ನು ಕೈಯಿಂದ ಮುಟ್ಟುವ ಅಗತ್ಯವೇ ಇರುವುದಿಲ್ಲ, ಇದು ನೈರ್ಮಲ್ಯದ ದೃಷ್ಟಿಯಿಂದ ಉತ್ತಮ.

67
ಪಾರದರ್ಶಕ ಶೌಚಾಲಯಗಳು

ಇತ್ತೀಚೆಗೆ ಟೋಕಿಯೊದಂತಹ ನಗರಗಳಲ್ಲಿ ಪಾರದರ್ಶಕ ಗೋಡೆಗಳಿರುವ ಸಾರ್ವಜನಿಕ ಶೌಚಾಲಯ ಮಾಡಲಾಗಿದೆ. ಇವು ಹೊರಗಿನಿಂದ ನೋಡಲು ಗಾಜಿನಂತೆ ಪಾರದರ್ಶಕವಾಗಿರುತ್ತವೆ. ಆದರೆ ಒಳಗೆ ಹೋಗಿ ಬಾಗಿಲು ಲಾಕ್ ಮಾಡಿದ ತಕ್ಷಣ, ಆ ಗಾಜುಗಳು ಅಪಾರದರ್ಶಕವಾಗುತ್ತವೆ. ಇವೆಲ್ಲವೂ ಐಷಾರಾಮಿ ಸೌಲಭ್ಯಗಳಲ್ಲ, ಅವುಗಳು ಹಿರಿಯ ನಾಗರಿಕರಿಗೆ, ದೈಹಿಕವಾಗಿ ಅಶಕ್ತರಾದವರಿಗೆ ಸ್ವತಂತ್ರವಾಗಿ ಶೌಚಾಲಯ ಬಳಸಲು ಸಹಕಾರಿಯಾಗಿವೆ.

77
ಏರ್ ಡ್ರೈಯರ್

ನೀರಿನಿಂದ ಕೈ ಅಥವಾ ಅಂಗಾಂಗ ತೊಳೆದ ಬಳಿಕ ಪೇಪರ್‌ನಲ್ಲಿ ಒರೆಸಿಕೊಳ್ಳಬೇಕು ಅಂತೇನಿಲ್ಲ. ಅಲ್ಲಿ ಬಿಸಿ ಗಾಳಿಯ ಡ್ರೈಯರ್ ಇರುತ್ತದೆ. ಇದು ಚರ್ಮವನ್ನು ಮೃದುವಾಗಿ ಒಣಗಿಸುತ್ತದೆ, ಇದರಿಂದ ಟಾಯ್ಲೆಟ್ ಪೇಪರ್ ಬಳಕೆ ಕಡಿಮೆಯಾಗುವುದು

ದುರ್ವಾಸನೆ ಬರಲ್ಲ

ಶೌಚಾಲಯ ಬಳಸಿದ ತಕ್ಷಣ ಅಲ್ಲಿನ ಗಾಳಿಯನ್ನು ಫಿಲ್ಟರ್ ಮಾಡಿ ದುರ್ವಾಸನೆಯನ್ನು ಹೋಗಲಾಡಿಸಲಾಗುತ್ತದೆ. ಇದು ಸ್ವಯಂಚಾಲಿತ ವ್ಯವಸ್ಥೆಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories