Kidney Health: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಗೆ ಯಾವುದೇ ರೀತಿಯ ಹಾನಿಯಾದರೂ ಅದು ತಡವಾಗಿ ತಿಳಿಯುತ್ತದೆ. ಇದರಿಂದ ರೋಗವು ಗಂಭೀರ ಸ್ವರೂಪ ಪಡೆದು, ಹೆಚ್ಚಿನ ಜಟಿಲತೆಗೆ ಕಾರಣವಾಗಬಹುದು.
ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿಗಳು ಕೂಡ ಒಂದು. ಕಿಡ್ನಿಗಳಿಗೆ ಹಾನಿಯಾದಾಗ ಅದರ ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುತ್ತವೆ. ಇದು ರೋಗವನ್ನು ಗಂಭೀರಗೊಳಿಸುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ, ಫಾಸ್ಫೇಟ್, ಆಕ್ಸಲೇಟ್ ಮತ್ತು ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುವುದೂ ಕಿಡ್ನಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
28
ಯಾವ ಅಭ್ಯಾಸ ಕಿಡ್ನಿ ಹಾಳು ಮಾಡುತ್ತೆ?
ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಮತ್ತು NSAIDಗಳಂತಹ ನೋವು ನಿವಾರಕಗಳ ಅತಿಯಾದ ಬಳಕೆಯು ಕಿಡ್ನಿಗಳಿಗೆ ಹಾನಿ ಮಾಡಬಹುದು. ನಮ್ಮ ಜೀವನಶೈಲಿಯ ಕೆಲವು ಅಭ್ಯಾಸಗಳು ಕಿಡ್ನಿಗಳ ಆರೋಗ್ಯವನ್ನು ಹಾಳುಮಾಡುತ್ತವೆ.
38
ಉಪ್ಪು ಅತಿಯಾಗಿ ಸೇವಿಸಿದರೆ..
ಅಡುಗೆಗೆ ಬಳಸುವ ಉಪ್ಪು ಮಾತ್ರವಲ್ಲ, ತಿಂಡಿಗಳು, ಉಪ್ಪಿನಕಾಯಿ, ಸಾಸ್‌ಗಳು ಮತ್ತು ಹೊರಗಿನ ಊಟದಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇದು ಕಾಲಕ್ರಮೇಣ ರಕ್ತದೊತ್ತಡದ ಮೇಲೆ ಪರಿಣಾಮ ಬೀರಿ, ಕಿಡ್ನಿಗಳ ಮೇಲಿನ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆ.
ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಕಿಡ್ನಿ ಆರೋಗ್ಯ ಹಾಳಾಗಬಹುದು. ಆದ್ದರಿಂದ, ಇಂತಹ ಆಹಾರಗಳನ್ನು ಆದಷ್ಟು ಕಡಿಮೆ ಮಾಡಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ.
58
ಅತಿಯಾದ ಧೂಮಪಾನ ಒಳ್ಳೆಯದಲ್ಲ
ಅತಿಯಾದ ಧೂಮಪಾನವು ಕಿಡ್ನಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಅಭ್ಯಾಸವು ರಕ್ತನಾಳಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಿ, ರಕ್ತ ಸಂಚಾರವನ್ನು ನಿಧಾನಗೊಳಿಸುತ್ತದೆ. ಇದು ಕಿಡ್ನಿಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ.
68
ಪ್ರೊಟೀನ್ ಪ್ರಮಾಣ ಹೆಚ್ಚಾದರೆ..
ದೇಹದಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚಾದರೂ ಅದು ಕಿಡ್ನಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೇಹದ ಅಗತ್ಯವನ್ನು ತಿಳಿಯದೆ ಪ್ರೊಟೀನ್ ಅತಿಯಾಗಿ ಸೇವಿಸುವುದು ಒಳಿತಿಗಿಂತ ಕೆಡುಕು ಮಾಡುತ್ತದೆ. ಹೆಚ್ಚಿನ ಪ್ರಮಾಣದ ಪ್ರೊಟೀನ್ ಶೇಕ್‌ಗಳು ಮತ್ತು ಅತಿಯಾದ ಪ್ರೊಟೀನ್ ಸೇವನೆಯು ಕಾಲಕ್ರಮೇಣ ಕಿಡ್ನಿಗಳ ಮೇಲೆ ಒತ್ತಡ ಹೇರಬಹುದು.
78
ಸಕ್ಕರೆ ಪಾನೀಯಗಳು, ಸಂಸ್ಕರಿಸಿದ ಆಹಾರ
ಸಕ್ಕರೆ ಅಂಶವಿರುವ ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳು ಕಿಡ್ನಿಗಳ ಮೇಲೆ ಪರಿಣಾಮ ಬೀರಬಹುದು. ಸಿಹಿ ಪಾನೀಯಗಳು ಮತ್ತು ಹೆಚ್ಚು ಸಂಸ್ಕರಿಸಿದ ಆಹಾರಗಳ ನಿಯಮಿತ ಸೇವನೆಯು ಚಯಾಪಚಯ ಕ್ರಿಯೆಯ ಸಮತೋಲನವನ್ನು ಹಾಳುಮಾಡುತ್ತದೆ.
88
ನಿಯಮಿತ ವ್ಯಾಯಾಮ ಒಳ್ಳೆಯದು
ವ್ಯಾಯಾಮದ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದು ಕಿಡ್ನಿಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಜೊತೆಗೆ, ಇದು ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.