ಮುಸ್ಲಿಂ ಮದ್ವೆಯಾದ ಕರೀನಾ ಆರಾಧಿಸುವ ಧರ್ಮ ಯಾವುದು? KWK ಶೋದಲ್ಲಿ ರಿವೀಲ್ ಆಯ್ತು ಸತ್ಯ!

Published : Dec 29, 2023, 06:13 PM ISTUpdated : Dec 29, 2023, 06:16 PM IST

ಕಾಫಿ ವಿತ್ ಕರಣ್ 8ನೇ ಸೀಸನ್ ನಡೆಯುತ್ತಿರುವುದು ಬಹುತೇಕ ನಿಮಗೆ ಗೊತ್ತೆ. ಈ ಶೋಗೆ ಬಂದ ಅತಿಥಿಗಳು ಕೂಡ ಇಲ್ಲಿ ತಮ್ಮ ಜೀವನದ ಹಲವು ಸಿಕ್ರೇಟ್‌ಗಳನ್ನು ಕೆಲವೊಮ್ಮೆ ರಿವೀಲ್ ಮಾಡುತ್ತಾರೆ. ಅದೇ ರೀತಿ ಈಗ ಸೈಫ್ ಅಲಿ ಖಾನ್ ತನ್ನ ಪತ್ನಿ ಕರೀನಾ ಫಾಲೋ ಮಾಡುವ ಧರ್ಮ ಯಾವುದು ಎಂಬುದನ್ನು ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಬಾಯ್ಬಿಟ್ಟಿದ್ದಾರೆ.

PREV
110
ಮುಸ್ಲಿಂ ಮದ್ವೆಯಾದ ಕರೀನಾ ಆರಾಧಿಸುವ ಧರ್ಮ ಯಾವುದು? KWK ಶೋದಲ್ಲಿ ರಿವೀಲ್ ಆಯ್ತು ಸತ್ಯ!

ಕಾಫಿ ವಿತ್ ಕರಣ್ 8ನೇ ಸೀಸನ್ ನಡೆಯುತ್ತಿರುವುದು ಬಹುತೇಕ ನಿಮಗೆ ಗೊತ್ತೆ. ಈ ಸೀಸನ್‌ನ ಈ ವಾರದ ಎಪಿಸೋಡ್‌ನಲ್ಲಿ ನಟ ಸೈಫ್ ಅಲಿಖಾನ್ ತಮ್ಮ ಅಮ್ಮ ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಠಾಗೋರ್ ಜೊತೆ ಭಾಗವಹಿಸಿದ್ದರು. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ಈ ಶೋದಲ್ಲಿ ನಿರೂಪಕ ಕರಣ್‌ ಹಲವು ಚಿತ್ರವಿಚಿತ್ರ, ಕೆಲವೊಮ್ಮೆ ಮುಜುಗರಕ್ಕೀಡುವ ಪ್ರಶ್ನೆಗಳನ್ನು ಕೇಳುವುದು ಗೊತ್ತೆ ಇದೇ. 

210

ಅಲ್ಲದೇ ಈ ಶೋಗೆ ಬಂದ ಅತಿಥಿಗಳು ಕೂಡ ಇಲ್ಲಿ ತಮ್ಮ ಜೀವನದ ಹಲವು ಸಿಕ್ರೇಟ್‌ಗಳನ್ನು ಕೆಲವೊಮ್ಮೆ ರಿವೀಲ್ ಮಾಡುತ್ತಾರೆ. ಅದೇ ರೀತಿ ಈಗ ಸೈಫ್ ಅಲಿ ಖಾನ್ ತನ್ನ ಪತ್ನಿ ಕರೀನಾ ಫಾಲೋ ಮಾಡುವ ಧರ್ಮ ಯಾವುದು ಎಂಬುದನ್ನು ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಬಾಯ್ಬಿಟ್ಟಿದ್ದಾರೆ.

310

ಬಾಲಿವುಡ್ ನಟ ಸೈಫ್‌ ಅಲಿಖಾನ್ ವಿಭಿನ್ನ ಸಂಸ್ಕೃತಿಯಲ್ಲಿ ಬೆಳೆದವರು. ಇವರ ತಾಯಿ ಬಾಲಿವುಡ್‌ನ ಹಿರಿಯ ನಟಿ ಶರ್ಮಿಳಾ ಠಾಗೋರ್ ಹಿಂದೂವಾದರೆ, ತಂದೆ ಪಟೌಡಿ ರಾಜಮನೆತನದವರು ಹಾಗೂ ಭಾರತದ ಮಾಜಿ  ಕ್ರಿಕೆಟಿಗ ಮನ್ಸೂರ್ ಅಲಿಖಾನ್ ಪಟೌಡಿ ಓರ್ವ ಮುಸ್ಲಿಂ. 

410

ಹಾಗೆಯೇ ಮೊದಲ ಪತ್ನಿ ಅಮೃತಾ ಸಿಂಗ್ ಹಿಂದೂ, 2ನೇ ಪತ್ನಿ ಕರೀನಾ ಕಪೂರ್ ಕೂಡ ಹಿಂದೂವೇ. ಮುಸ್ಲಿಂ ನಟನನ್ನು ಮದುವೆಯಾದ ನಂತರ ಬಹುಶಃ ಅವರು ಮುಸ್ಲಿಂ ಧರ್ಮವನ್ನು ಫಾಲೋ ಮಾಡುತ್ತಿರಬಹುದು. ಅಥವಾ ಎರಡು ಧರ್ಮವನ್ನು ಆರಾಧಿಸುತ್ತಿರಬಹುದು ಎಂಬುದು ಬಹುತೇಕರ ಭಾವನೆ. ಆದರೆ ಅವರು ಕ್ರಿಶ್ಚಿಯನ್ ಧರ್ಮವನ್ನು ಪಾಲೋ ಮಾಡುತ್ತಿರುವುದರ ಬಗ್ಗೆ ಸೈಫ್ ಸುಳಿವು ನೀಡಿದ್ದಾರೆ. 

510

ನಟ ಸೈಫ್ ಅಲಿಖಾನ್‌ಗೆ  ಈ ಶೋದಲ್ಲಿ ಕರಣ್ ಜೋಹರ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಸೈಫ್‌ಗೆ ಮಗ ತೈಮೂರ್ ಕೇಳುವ, ಅತ್ಯಂತ ಕುತೂಹಲಕಾರಿಯಾದ, ಆದರೆ ಉತ್ತರಿಸಲಾಗದ, ಚಿಂತನೆಗೆ ದೂಡುವ ಪ್ರಶ್ನೆ ಯಾವುದು? ಎಂದು ಕರಣ್ ಕೇಳಿದ್ದು, ಇದಕ್ಕೆ ಉತ್ತರಿಸಿದ ಸೈಫ್ ಅಲಿಖಾನ್ ಆತ ಹೆಚ್ಚಾಗಿ ಧರ್ಮ, ದೇವರುಗಳ ಬಗ್ಗೆ ಪ್ರಶ್ನೆ ಕೇಳುತ್ತಾನೆ ಎಂದಿದ್ದಾರೆ.

610

ಶೋದ ರಾಪಿಡ್ ರೌಂಡ್‌ನಲ್ಲಿ ಕರಣ್ ಈ ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರಿಸಿದ ಸೈಫ್ ಆತ ಇಂತಹದ್ದೇ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುತ್ತಾನೆ ಎಂಬುದು ಸ್ಪಷ್ಟವಾಗಿ ನೆನಪಿಲ್ಲ. ಆದರೆ ಆತ ಹೆಚ್ಚಾಗಿ ಧರ್ಮದ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಆತ ದೇವರ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾನೆ. ಆತನ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂದು ನಾನು ಅಲೋಚಿಸಬೇಕಾಗುತ್ತದೆ.

710

ಕೆಲ ದಿನಗಳ ಹಿಂದೆ ಆತ ಯೇಸುವಿನ ಶಿಲುಬೇಗೇರಿಸಿದ ಬಗ್ಗೆ ಪ್ರಶ್ನಿಸಿದ್ದ. ಅಲ್ಲವನ್ನೇ ಯೇಸುವನ್ನು ಏಕೆ ಕೊಲ್ಲಲಾಯ್ತು ಎಂದು ಪ್ರಶ್ನಿಸಿದ.  ಅವನು ವಿಶೇಷವಾಗಿ ಕ್ರಿಶ್ಚಿಯ್ ಧರ್ಮದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಇದಕ್ಕೆ ಕಾರಣ ಹೆಂಡ್ತಿ ಕರೀನಾ ಕಪೂರ್ ಎಂದು ಉತ್ತರಿಸಿದ್ದಾರೆ ಸೈಫ್.

810

ಇದೇ ಶೋದಲ್ಲಿ ತಮ್ಮ ಮೊದಲ ಮಗ (ಅಮೃತಾ ಸಿಂಗ್ ಪುತ್ರ) ಇಬ್ರಾಹಿಂ ಅಲಿ ಖಾನ್ ಶೋ ಜೊತೆ ಒಡನಾಡುವ ಹೆಣ್ಣು ಮಕ್ಕಳಿಗೆ ಯಾವುದಾದರೂ ಅರ್ಹತೆ ಇರಬೇಕು ಎಂದು ಬಯಸುವುದಾದರೆ ಏನು ಎಂದು ಕರಣ್ ಜೋಹರ್ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಸೈಫ್, ಇಲ್ಲಿ ನನ್ನ ಅಭಿಪ್ರಾಯ ಮುಖ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. 

910

ಅಲ್ಲದೇ ಇದೇ ಪ್ರಶ್ನೆಯನ್ನು ಮತ್ತೆ ಕೇಳಿದಾಗ ಹುಡುಗಿ ಸಿಂಗಲ್ ಆಗಿರಬೇಕು ಅಷ್ಟೇ ಎಂದು ಹೇಳಿದ್ದಾರೆ. ಅಲ್ಲದೇ ಮಗ ಇಬ್ರಾಹಿಂ ಅಲಿ ಖಾನ್ ಆಗಾಗ ನನ್ನ ಜೊತೆ ಹಲವು ವಿಚಾರಗಳ ಬಗ್ಗೆ ಸಲಹೆ ಕೇಳುತ್ತಿರುತ್ತಾನೆ ಎಂದು ಹೇಳಿದ್ದಾರೆ. 

1010

ಹಾಗೆಯೇ ತನ್ನ ಇನ್ನಿಬ್ಬರು ಪುಟಾಣಿ ಮಕ್ಕಳಾದ ತೈಮೂರ್ ಹಾಗೂ ಜೆಹಾಂಗೀರ್ ಜೊತೆ ಸ್ನೇಹ ಬೆಳೆಸುವ ಹೆಣ್ಮಕ್ಕಳಿಗೆ ಏನಾದರೂ ಅರ್ಹತೆ ಬೇಕಾ ಎಂದು ಕೇಳಿದಾಗ ಅವರನ್ನು ಕಂಬಿ ಹಿಂದೆ ಕಳಿಸಲಾಗುವುದು ಎಂದು ಸೈಫ್ ಅಲಿಖಾನ್ ಹೇಳಿದ್ದಾರೆ. ಸೈಫ್ ಅಲಿಖಾನ್ ಕೊನೆಯದಾಗಿ ಪ್ರಭಾಸ್ ಹಾಗೂ ಕೃತಿ ಸನನ್ ಜೊತೆ ಆದಿಪುರುಷ್ ಸಿನಿಮಾದಲ್ಲಿ ಕಳನಾಯಕನ ಪಾತ್ರ ಮಾಡಿದ್ದರು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories