ಬರೋಬ್ಬರಿ 4 ತಿಂಗಳು ಕಷ್ಟಪಟ್ಟು ಹೀಗೆ ಬಾಡಿ ಬಿಲ್ಡ್ ಮಾಡಿದ್ರು ಬಾಬಿ ಡಿಯೋಲ್

Published : Dec 29, 2023, 05:25 PM IST

ಆನಿಮಲ್ ಸಿನಿಮಾದಲ್ಲಿ ನಟ ಬಾಬಿ ಡಿಯೋಲ್ ಸ್ವಲ್ಪ ಸಮಯ ಮಾತ್ರ ಕಾಣಿಸಿಕೊಂಡರೂ ಸಹ, ಅವರ ಫಿಟ್ , ಕಟ್ಟುಮಸ್ತಾದ ಬಾಡಿ ನೋಡಿ ಜನರು ಫಿದಾ ಆಗಿದ್ದರು. ಈ ವಯಸ್ಸಲ್ಲಿ ಅಂತಹ ಫಿಟ್ ಬಾಡಿ ಪಡೆಯಲು ಅವರು ಏನು ಮಾಡಿದ್ರು ನೋಡೋಣ. 

PREV
18
ಬರೋಬ್ಬರಿ 4 ತಿಂಗಳು ಕಷ್ಟಪಟ್ಟು ಹೀಗೆ ಬಾಡಿ ಬಿಲ್ಡ್ ಮಾಡಿದ್ರು ಬಾಬಿ ಡಿಯೋಲ್

ಸಂದೀಪ್ ರೆಡ್ಡಿ ವಾಂಗಾ (Sandeep Reddy Vanga) ಅವರ ನಿರ್ದೇಶನದ ಆನಿಮಲ್ ಮೂವಿ ಹೆಚ್ಚು ಯಶಸ್ವಿಯಾಗೋಕೆ ಕಾರಣ ಒಂದು ರಣಬೀರ್ ಕಪೂರ್ ಮತ್ತೊಂದು ಬಾಬಿ ಡಿಯೋಲ್. ಬಾಬಿ ಡಿಯೋಲ್ ಪಾತ್ರಕ್ಕೆ ಜನರು ಫಿದಾ ಆಗಿದ್ದರು. 
 

28

ಬಾಬಿ ಡಿಯೋಲ್ (Bobby Deol) ಕಟ್ಟುಮಸ್ತಾದ ಬಾಡಿ ನೋಡಿ ಅಭಿಮಾನಿಗಳು ವಾವ್ ಅಂದಿದ್ದರು. ಇವರ ಈ ಲುಕ್ ನಿಂದಾಗಿ ರಣಬೀರ್ ಕಪೂರ್ ಗಿಂತಲೂ ಹೆಚ್ಚಾಗಿ ಬಾಬಿ ಡಿಯೋಲ್ ಜನಪ್ರಿಯತೆ ಪಡೆದಿದ್ದರು. 

38

ಬಾಬಿ ಡಿಯೋಲ್ ನ ಈ ಬಾಡಿ ಟ್ರಾನ್ಸಫಾರ್ಮೇಶನ್ (tranformation) ನೋಡಿ ಎಲ್ಲರಿಗೂ ಶಾಕ್ ಆಗಿತ್ತು. ಸಿನಿಮಾ ವೀಕ್ಷಕರನ್ನು ಬಾಬಿ ಡೀಯೋಲ್ ರ ಈ ಲುಕ್ ನ್ನು ತುಂಬಾನೆ ಮೆಚ್ಚಿಕೊಂಡಿದ್ದರು. ಆದರೆ ಈ ಲುಕ್ ಗಾಗಿ ಬಾಬಿ ಬರೋಬ್ಬರಿ ನಾಲ್ಕು ತಿಂಗಳು ಕಠಿಣ ಪರಿಶ್ರಮ ಪಟ್ಟಿದ್ದರು. 

48

ಬಾಬಿ ಡೀಯೋಲ್ ರ ಟ್ರೈನರ್ ಪ್ರಜ್ವಲ್ ಬಾಬಿಯವರನ್ನು ರಣಬೀರ್ ಕಪೂರ್ (Ranbir Kapoor) ಗಿಂತ ಹೆಚ್ಚು ಮಸ್ಕ್ಯುಲರ್ ಆಗಿ ತೋರಿಸಲು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದರು. ಅದಕ್ಕಾಗಿ ಸ್ಪೆಷಲ್ ವರ್ಕೌಟ್ ರೂಟೀನ್ ಮಾಡಿದ್ದು, ಅದನ್ನು ಬಾಬಿ ಡೀಯೋಲ್ ತಮ್ಮ 100 % ಕಠಿಣಪರಿಶ್ರಮದಿಂದ ಸಾಧಿಸಿದ್ದಾರೆ. 

58

ಬಾಬಿ ಡಿಯೋಲ್ ತಮ್ಮ ಫ್ಯಾಟ್ ಪರ್ಸೆಂಟ್ ಕಡಿಮೆ ಮಾಡಿ 12ಕ್ಕೆ ಇಳಿಸಿದ್ದರು. ಇವರ ವೈಟ್ ಕೂಡ 85 ರಿಂದ 90 ರ ನಡುವೆಯೇ ಇರುತ್ತಿತ್ತು. ಇದಕ್ಕಾಗಿ ಅವರು ಬೆಳಗ್ಗೆ ಮತ್ತು ಸಂಜೆ ಹೈ ಇಂಟೆನ್ಸಿಟಿ ಕಾರ್ಡಿಯೋ ವರ್ಕೌಟ್ ಮಾಡುತ್ತಿದ್ದರು. 
 

68

ಪಂಜಾಬಿ ಆಗಿರೋದರಿಂದ ಬಾಬಿ ಡಿಯೋಲ್ ಗೆ ಈ ಫುಡ್ ಡಯಟ್ (food diet) ಫಾಲೋ ಮಾಡೊದು ಕಷ್ಟವಾಗಿತ್ತು. ಪ್ರತಿದಿನ ಸ್ವೀಟ್ ತಿನೋದಕ್ಕೆ ಇಷ್ಟಪಡುತ್ತಿದ್ದ ಬಾಬಿ ನಾಲ್ಕು ತಿಂಗಳು ಸಿಹಿತಿಂಡಿಗಳಿಂದ ದೂರಾನೆ ಉಳಿದರು. 

78

ಡಯಟ್ ನಲ್ಲಿ ಬೆಳಗ್ಗೆ ಎದ್ದು ಮೊಟ್ಟೆ ತಿನ್ನುತ್ತಿದ್ದರು, ತಿಂಡಿಗೆ ದಲಿಯಾ, ಮಧ್ಯಾಹ್ನ ಊಟಕ್ಕೆ ಅನ್ನ ಮತ್ತು ಚಿಕನ್. ಸಂಜೆ ಸಲಾಡ್ ಮತ್ತು ರಾತ್ರಿ ಊಟಕ್ಕೆ ಮೀನು ಅಥವಾ ಕೋಳಿ ತಿನ್ನುತ್ತಿದ್ದರು. ಇವು ಕಾರ್ಬೋಹೈಡ್ರೇಟ್ ಮಿಶ್ರಣವಾಗಿತ್ತು. 

88

ಬಾಬಿ ಡಿಯೋಲ್ ರ ಇಂಟೆನ್ಸ್ ಟ್ರೈನಿಂಗ್ ಅಲ್ಲಿ ಕಾರ್ಡೀಯೋ, ವೇಟ್ ಮತ್ತು ಫಂಕ್ಷನಲ್ ಟ್ರೈನಿಂಗ್ ಎಲ್ಲವೂ ಸೇರಿತ್ತು. ಕಾರ್ಡಿಯೋ ಮತ್ತು ವೇಟ್ ಅವರಿಗೆ ಮಸ್ಕ್ಯುಲರ್ ಬಾಡಿ ಪಡೆಯಲು ಸಹಾಯ ಮಾಡಿತ್ತು. 

Read more Photos on
click me!

Recommended Stories