ನಾನೊಬ್ಬನೇ ಸಾಯಲ್ಲ: ಸೂಪರ್‌ ಮಾರ್ಕೆಟ್‌ನಲ್ಲಿ ಮಲಗಿ, ತನ್ನ ಲಕ್ಷುರಿ ಅಪಾರ್ಟ್‌ಮೆಂಟ್‌ನ್ನು ಕೆಲಸದಾಕೆಗೆ ಕೊಟ್ಟ!

Published : May 24, 2026, 04:07 PM IST

ಒಂಟಿತನ ಒಮ್ಮೊಮ್ಮೆ ಎದ್ದು ಕಾಣಿಸೋದಿಲ್ಲ. ನಾವು ನಗುತ್ತೇವೆ, ಅಳುತ್ತೇವೆ, ಕೆಲಸ ಮಾಡುತ್ತಿರುತ್ತೇವೆ. ಹೀಗಿದ್ದರೂ, ಎಲ್ಲ ಇದ್ದರೂ ಕೂಡ ನಮಗೆ ಒಂಟಿತನ ಕಾಡುತ್ತದೆ. ಚೀನಾದಲ್ಲಿರುವ ವ್ಯಕ್ತಿಗೆ ಲಕ್ಷುರಿ ಫ್ಲ್ಯಾಟ್‌ ಇದ್ದರೂ ಕೂಡ ನಿದ್ದೆ ಮಾಡಲು ಭಯ ಆಗುತ್ತಿತ್ತಂತೆ.

PREV
15
ಒಂಟಿಯಾಗಿ ಸಾಯಲು ಇಷ್ಟ ಇಲ್ಲ

10 ವರ್ಷಗಳ ಕಾಲ ಓರ್ವ ವ್ಯಕ್ತಿ ( ಕಿಯಾಂಗ್ಮಿಂಗ್‌ ) ತನ್ನದೇ ಆದ ಲಕ್ಷುರಿ ಫ್ಲ್ಯಾಟ್‌ ಇದ್ದರೂ ಕೂಡ, ಸೂಪರ್‌ ಮಾರ್ಕೆಟ್‌ನ ಸಿಬ್ಬಂದಿಯ ಎಂಟ್ರೆನ್ಸ್‌ನಲ್ಲಿ ನಿದ್ದೆ ಮಾಡಿದ್ದರು. ಅವರಿಗೆ ಫ್ಲಾಟ್‌ ಇದ್ದರೂ ಕೂಡ ಒಂಟಿಯಾಗಿ ನಿದ್ದೆ ಮಾಡಲು ಭಯ ಆಗುತ್ತಿತ್ತಂತೆ. ನನಗೆ ಒಂಟಿಯಾಗಿ ಸಾಯಲು ಇಷ್ಟ ಇಲ್ಲ ಎಂದು ಅವರು ಹೇಳುತ್ತಿದ್ದರು. ಡಿವೋರ್ಸ್‌ ಆಗಿತ್ತು, ಮಗ ಕೂಡ ದೂರ ಇದ್ದನು, ಒಂಟಿತನ ಕಾಡುತ್ತಿತ್ತು. ಎಷ್ಟೇ ವ್ಯವಸ್ಥೆ, ಲಕ್ಷುರಿ ಇದ್ದರೂ ಕೂಡ ಅವರಿಗೆ ಒಂಟಿತನ ಕಾಡುತ್ತಿತ್ತು.

25
ಚಾಲೆ ಮೇಲೆ ಮಲಗುತ್ತಿದ್ದರು

ಸೂಪರ್‌ಮಾರ್ಕೆಟ್‌ನಲ್ಲಿ ಅವರು ಚಾಪೆಯ ಮೇಲೆ ಮಲಗುತ್ತಿದ್ದರು, ಜೇಬಿನಲ್ಲಿ ಹಣ ಇಟ್ಟುಕೊಳ್ಳುತ್ತಿದ್ದರು, ಹೋಟೆಲ್‌ನಲ್ಲಿ ದಿನವಿಡೀ ಕಳೆಯುತ್ತಿದ್ದರು. ಅವರನ್ನು ನೋಡಿದವರೆಲ್ಲ ಭಿಕ್ಷುಕ ಎಂದುಕೊಂಡರು. ಆದರೆ ಅವರು ಭಿಕ್ಷುಕ ಆಗಿರಲಿಲ್ಲ.

35
ಕುಟುಂಬವೇ ಇಲ್ಲ

ಕಿಯಾಂಗ್ಮಿಂಗ್‌ ಅವರಿಗೆ 2000 ರಲ್ಲಿ ಡಿವೋರ್ಸ್‌ ಆದ ಬಳಿಕ ಮಗ ಕೂಡ ದೂರ ಆದನು. ಅಪ್ಪ-ಮಗ ಮಾತನಾಡೋದು ನಿಲ್ಲಿಸಿದರು. ಒಂಟಿತನವು ನಿಜಕ್ಕೂ ಖಿನ್ನತೆ, ಹೃದಯ ಸಮಸ್ಯೆ, ದೌರ್ಬಲ್ಯ ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಕಿಯಾಂಗ್ಮಿಂಗ್ ಅವರು ಒಂಟಿಯಾಗಿ ಬದುಕಬಾರದು ಎಂದು ಹೀಗೆಲ್ಲ ಮಾಡಿದರು. ಆದರೆ ಎಷ್ಟೋ ಜನರು ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ.

45
ನಾನಿ ಮೀಟ್‌ ಆದರು

2021 ರಲ್ಲಿ ಕಿಯಾಂಗ್ಮಿಂಗ್ ಅವರನ್ನು ಹುಹಾಂಗ್ ( ಕೆಲಸ ಮಾಡುವ ವ್ಯಕ್ತಿ ) ಫಸ್ಟ್‌ ಟೈಮ್‌ ಭೇಟಿಯಾದರು. ಆಮೇಲೆ ಸಂಪೂರ್ಣವಾಗಿ ಕಿಯಾಂಗ್ಮಿಂಗ್‌ ಅವರನ್ನು ನೋಡಿಕೊಂಡರು. ಅನೇಕರಿಗೆ ಈ ಬದಲಾವಣೆ ಅರ್ಥ ಆಯ್ತು. ಆಮೇಲೆ ಕಿಯಾಂಗ್ಮಿಂಗ್‌ ಅವರು ಹುಹಾಂಗ್‌ರನ್ನು ಮಗಳು ಎಂದು ಕರೆದರು. ಆಮೇಲೆ ತನ್ನ ಫ್ಲ್ಯಾಟ್‌ನ್ನು ಅವರಿಗೆ ಬಿಟ್ಟುಕೊಡಲು ರೆಡಿಯಾದರು.

55
ನ್ಯಾನಿಗೆ ಆಸ್ತಿ ಸಿಗಲಿಲ್ಲ

ಇಂದು ಡಿವೋರ್ಸ್‌, ಸಿಟಿ ಜೀವನ ಎಂದು ಹಳ್ಳಿಯಲ್ಲಿ ವೃದ್ಧರು ಇರುತ್ತಾರೆ. ಅವಿಭಕ್ತ ಕುಟುಂಬ ಹೋಗಿ ವಿಭಕ್ತ ಕುಟುಂಬವಾಗಿದೆ. ಇಂದು ಅನಾರೋಗ್ಯದಲ್ಲಿ ಇರುವವರನ್ನು, ಅಶಕ್ತರನ್ನು, ವೃದ್ಧರನ್ನು ನೋಡಿಕೊಳ್ಳೋದು ಟಾಸ್ಕ್‌ ಆಗಿದೆ. ಹೀಗಾಗಿ ಆರೈಕೆ ಮಾಡುವುದು ಸ್ವತಃ ಒಂದು ಭಾವನಾತ್ಮಕ ಶ್ರಮವಾಗಿದೆ.

ಕಿಯಾಂಗ್ಮಿಂಗ್‌ ಅವರು ಹುಹಾಂಗ್‌ಗೆ ತನ್ನ ಆಸ್ತಿಯನ್ನು ವರ್ಗಾವಣೆ ಮಾಡೋದು ಸುಲಭ ಆಗಿರಲಿಲ್ಲ. ಚೀನಾದಲ್ಲಿರುವ ಕೋರ್ಟ್‌ ಈ ವಿಷಯವನ್ನು ಮಗನಿಗೆ ಹೇಳಬೇಕು ಎಂದರು, ಮಗ ಮಾತ್ರ ಆಸ್ತಿ ವರ್ಗಾವಣೆಯನ್ನು ಒಪ್ಪಲಿಲ್ಲ. ನ್ಯಾನಿ ಮೇಲೆ ಆರೋಪ ಮಾಡಿ ಆಮೇಲೆ ಆ ಫ್ಲಾಟ್‌ನ ಮಾಲೀಕತ್ವವನ್ನು ಪಡೆದನು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories