ಕೇವಲ 10 ನಿಮಿಷದಲ್ಲಿ, ಮೂರೇ ಪ್ರಮುಖ ಸಾಮಾಗ್ರಿಗಳನ್ನು ಬಳಸಿ ರುಚಿಕರವಾದ ಬೆಳ್ಳುಳ್ಳಿ ಚಿಕನ್ ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಸ್ಟಾರ್ಟರ್ ಅಥವಾ ಸಂಜೆ ಸ್ನ್ಯಾಕ್ಸ್‌ಗೆ ಇದು ಅತ್ಯುತ್ತಮ ಆಯ್ಕೆಯಾಗಿದ್ದು, ಇದನ್ನು ಸುಲಭವಾಗಿ ಮಾಡಬಹುದು.
ನಾನ್ ವೆಜ್ ಅಂದ್ರೆ ಸಿಕ್ಕಾಪಟ್ಟೆ ಮಸಾಲೆಗಳು ಬೇಕೆಂಬ ಕಲ್ಪನೆ ಬಹುತೇಕರಲ್ಲಿದೆ. ಆದ್ರೆ ಇಂದು ನಾವು ನಿಮಗೆ ಪ್ರಮುಖ ಮೂರೇ ಮೂರು ವಸ್ತುಗಳಿಂದ 10 ನಿಮಿಷದಲ್ಲಿ ಹೇಗೆ ಬೆಳ್ಳುಳ್ಳಿ ಚಿಕನ್ ಮಾಡಬಹುದು ಎಂದು ಹೇಳುತ್ತಿದ್ದೇವೆ. ಸ್ಟಾರ್ಟರ್ ಅಥವಾ ಸಂಜೆ ಸ್ನ್ಯಾಕ್ಸ್‌ಗೆ ಈ ಬೆಳ್ಳುಳ್ಳಿ ಚಿಕನ್ ಚೆನ್ನಾಗಿರುತ್ತದೆ.
26
ಬೆಳ್ಳುಳ್ಳಿ ಚಿಕನ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಚಿಕನ್: 200 ಗ್ರಾಂ, ಬೆಳ್ಳುಳ್ಳಿ: 100 ಗ್ರಾಂ, ಅಚ್ಚ ಖಾರದ ಪುಡಿ: 2 ಟೀ ಸ್ಪೂನ್, ಅಡುಗೆಎಣ್ಣೆ: 1 ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು
36
ಬೆಳ್ಳುಳ್ಳಿ ಚಿಕನ್ ಮಾಡುವ ವಿಧಾನ
ಮೊದಲಿಗೆ ಬೀಸಿನೀರಿನಲ್ಲಿ ಚಿಕನ್ ತೊಳೆದುಕೊಂಡು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ತದನಂತರ ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿ, ಒಂದು ಎಸಳಿನಲ್ಲಿ ಎರಡು ತುಂಡು ಆಗುವಂತೆ ಜಜ್ಜಿಕೊಂಡು ಎತ್ತಿಟ್ಟುಕೊಳ್ಳಬೇಕು.
ಈಗ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಳ್ಳಿ. ಮೊದಲಿಗೆ ಎರಡು ಟೀ ಸ್ಪೂನ್‌ನಷ್ಟು ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಬಿಸಿಯಾಗುತ್ತಿದ್ದಂತೆ ಜಜ್ಜಿಕೊಂಡಿರುವ ಬೆಳ್ಳುಳ್ಳಿಯಲ್ಲಿ ಅರ್ಧದಷ್ಟನ್ನು ಬಾಣಲೆಗೆ ಹಾಕಿ. ಇದಾದ ನಂತರ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡಿರುವ ಚಿಕನ್ ಸೇರಿಸಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿಕೊಳ್ಳಿ.
56
ರುಚಿಗೆ ತಕ್ಕಷ್ಟು ಉಪ್ಪು
ಈಗ ರುಚಿಗೆ ತಕ್ಕಷ್ಟು ಉಪ್ಪು, ಅಚ್ಚಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿಕೊಳ್ಳಬೇಕು. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ನೀರು ಸೇರಿಸಬಾರದು. ತಳ ಹಿಡಿಯದಂತೆ ಆಗಾಗ್ಗೆ ಕೈಯಾಡಿಸುತ್ತೀರಿ. ಇದಾದ ಬಳಿಕ ಮುಚ್ಚಳ ತೆಗೆದು ಉಳಿದಿರುವ ಬೆಳ್ಳುಳ್ಳಿ ಸೇರಿಸಿ ಐದು ನಿಮಿಷ ಬೇಯಿಸಿಕೊಂಡ್ರೆ ಮುಗೀತು.
66
ಸಂಜೆ ಸ್ನ್ಯಾಕ್ಸ್ ಗೆ ಒಳ್ಳೆಯ ಪ್ರೋಟಿನ್
ಕೊನೆಗೆ ಸೇರಿಸುವ ಬೆಳ್ಳುಳ್ಳಿ ಸಖತ್ ರುಚಿಯನ್ನು ನೀಡುತ್ತದೆ. ಕೊನೆಗೆ ಬೇಕಿದ್ರೆ ನಿಂಬೆಹಣ್ಣಿನ ರಸ ಮತ್ತು ಸಣ್ಣದಾಗಿ ಕತ್ತರಿಸಿದ ಕೋತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ. ಸಂಜೆ ಸ್ನ್ಯಾಕ್ಸ್ ಗೆ ಒಳ್ಳೆಯ ಪ್ರೋಟಿನ್ ಸಿಕ್ಕಂತಾಗುತ್ತದೆ. ಈ ರೆಸಿಪಿ ತಯಾರಿಸುವಾಗ ಬೇಕಿದ್ರೆ ಚಿಕನ್ ಮಸಾಲೆ, ಅರಿಶಿನ ಸೇರಿಸಿಕೊಳ್ಳಬಹುದು. ಇದು ನಿಮ್ಮ ಆಯ್ಕೆಗೆ ಬಿಟ್ಟದ್ದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.