ಮನೆಯಲ್ಲಿರೋ ಹೂವಿನ ಗಿಡದ ಎಲೆಗಳಿಗೆ ಕೀಟ ಅಂಟಿಕೊಳ್ಳುತ್ತಿದ್ರೆ ಈ ಮನೆಮದ್ದು ಬಳಸಿ

Published : May 24, 2026, 03:07 PM IST

ನಗರ ಪ್ರದೇಶಗಳಲ್ಲಿ ಗಾರ್ಡನಿಂಗ್‌ ಜನಪ್ರಿಯವಾಗಿದ್ದು, ಅನೇಕರು ಗಿಡಗಳ ಆರೈಕೆಯ ಬಗ್ಗೆ ಚಿಂತಿತರಾಗಿರುತ್ತಾರೆ. ಹೂವಿನ ಗಿಡಗಳ ಎಲೆಗಳಿಗೆ ತಗಲುವ ರೋಗಗಳನ್ನು  ಹೇಗೆ ನಿವಾರಿಸಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
17
ಹೂವಿನ ಕುಂಡ

ಇಂದು ನಗರ ಭಾಗದ ಜನರು ಮನೆಯ ಮುಂದೆ ಸ್ವಲ್ಪ ಜಾಗವಿದ್ರೂ ಅಲ್ಲೊಂದು ಸಣ್ಣದಾದ ಗಾರ್ಡನ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರಂತೂ ಬಾಲ್ಕನಿಯಲ್ಲಿಯೇ ಅನೇಕ ಹೂವಿನ ಕುಂಡಗಳನ್ನು ಇರಿಸುತ್ತಾರೆ. ಆದ್ರೆ ಬಹುತೇಕರಿ ಗಿಡಗಳ ಆರೈಕೆ ಹೇಗೆ ಮಾಡಬೇಕು ಎಂಬುದರ ಮಾಹಿತಿ ಇರಲ್ಲ. ಇಂದು ನಾವು ನಿಮಗೆ ಹೂವಿನ ಗಿಡದ ಎಲೆಗಳು ರೋಗಕ್ಕೆ ತುತ್ತಾಗುತ್ತಿದ್ರೆ ಏನು ಮಾಡಬೇಕೆಂದು ಹೇಳುತ್ತಿದ್ದೇವೆ.

27
ಗಿಡಗಳಿಗೆ ಮನೆ ಔಷಧಿ

ಕೆಲವೊಮ್ಮೆ ಅತಿಯಾದ ಪೋಷಕಾಂಶದಿಂದಲೂ ಹೂವಿನ ಗಿಡಗಳು ರೋಗಕ್ಕೆ ತುತ್ತಾಗುತ್ತವೆ. ಈ ಸಂದರ್ಭದಲ್ಲಿ ರಾಸಾಯನಿಕ ಸಿಂಪಡನೆ ಮಾಡುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಔಷಧಿ ತಯಾರಿಸಬಹುದು. ಆ ಔಷಧಿ ಏನು ಎಂದು ನೋಡೋಣ ಬನ್ನಿ

37
1.ಕರ್ಪೂರ ಮತ್ತು ಅರಿಶಿನ

ಒಂದು ಹಿಡಿಯಷ್ಟು ಕರ್ಪೂರ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡ್ಕೊಳ್ಳಿ. ನಂತರ ಒಂದು ಲೋಟದಷ್ಟು ನೀರಿನ ಕರ್ಪೂರ ಸೇರಿಸಿ 10 ರಿಂದ 15 ನಿಮಿಷ ಕುದಿಸಿಕೊಳ್ಳಿ. ಈಗ ಇದಕ್ಕೆ ಒಂದು ಟೀ ಸ್ಪೂನ್‌ನಷ್ಟು ಅರಿಶಿನ ಪುಡಿ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕರ್ಪೂರ ಮತ್ತು ಅರಿಶಿನ ಮಿಶ್ರಿತ ನೀರು ತಣ್ಣಗಾದ ನಂತರ ಇದನ್ನು ಎಲೆಗಳ ಮೇಲೆ ಸಿಂಪಡಿಸಿ. ಇದರಿಂದ ಎಲೆ ಮೇಲಿನ ರೋಗ ನಿವಾರಣೆಯಾಗುತ್ತದೆ.

47
2.ಸೀಮೆಎಣ್ಣೆ

ಇದೇ ರೀತಿ ಸೀಮೆಎಣ್ಣೆ ಸಿಂಪಡನೆ ಮಾಡೋದರಿಂದಲೂ ಎಲೆಗಳ ಮೇಲೆ ಅಂಟಿಕೊಂಡಿರುವ ರೋಗ ನಿವಾರಣೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದ್ರೆ ಅತಿಯಾದ ಸೀಮೆಎಣ್ಣೆ ಸಿಂಪಡನೆ ಅಪಾಯಕಾರಿಯಾಗುವ ಸಾಧ್ಯತೆಗಳಿರುತ್ತವೆ.

57
3.ಗೋವಿನ ಮೂತ್ರ

ಆಯುರ್ವೇದದಲ್ಲಿ ಗೋವಿನ ಮೂತ್ರವನ್ನು ದಿವ್ಯ ಔಷಧ ಎಂದು ಪರಿಗಣಿಸಲಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಗೋವಿನ ಮೂತ್ರವನ್ನು ಒಂದು ಬಾಟೆಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡು ಎಲೆಗಳ ಮೇಲೆ ನಿಯಮಿತವಾಗಿ ಸಿಂಪಡಿಸಿ. ಈ ಮನೆಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

67
4.ಸಗಣಿ

ಸಗಣಿ ಮಿಶ್ರಿತ ನೀರು ಸಸ್ಯಗಳಿಗೆ ಸಾವಯವ ಗೊಬ್ಬರವಾಗುತ್ತದೆ. ಒಂದು ಹಿಡಿಯಷ್ಟು ಸಗಣಿಯನ್ನು ನೀರಿನಲ್ಲಿ ಬೆರೆಸಿ ಗಿಡಗಳ ಮೇಲೆ ಸಿಂಪಡನೆ ಮಾಡೋದರಿಂದ ರೋಗಗಳು ಮಾಯವಾಗುತ್ತವೆ. ಇದರ ಜೊತೆ ಗಿಡಗಳಿಗೆ ಬುಡದಿಂದ ನೀರು ಹಾಕೋದು ಎಷ್ಟು ಮುಖ್ಯವೋ? ಹಾಗೆಯೇ ಮೇಲಿನಿಂದ ನೀರು ಬೀಳುವ ವ್ಯವಸ್ಥೆ ಮಾಡಿ.

77
5.ಸಾಬೂನು ನೀರು

ಸಾಬೂನಿನ ಪುಡಿ ಸೇರಿಸಿದ ನೀರನ್ನು ಹೂವಿನ ಗಿಡದ ಮೇಲೆ ಸಿಂಪಡನೆ ಮಾಡಬಹುದು. ಇದು ಕ್ಷಿಪ್ರವಾಗಿ ಪರಿಣಾಮ ನೀಡದಿದ್ರೂ ಹಂತ ಹಂತವಾಗಿ ಕೆಲಸ ಮಾಡಲು ಶುರು ಮಾಡುತ್ತದೆ. ಆದ್ರೆ ಇದು ರಾಸಾಯನಿಕ ಮಿಶ್ರಣ ಆಗುತ್ತೆ ಎಂದು ಕೆಲವರು ಹೇಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories