Indoor plants in water: ಕೆಲವು ಸಸ್ಯಗಳು ಮಣ್ಣಿಲ್ಲದೆ, ಕೇವಲ ನೀರಿನಲ್ಲಿ ಮಾತ್ರ ಬೆಳೆಯುತ್ತವೆ. ವಿಶೇಷವೇನೆಂದರೆ ಈ ಸಸ್ಯಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿರುವುದಿಲ್ಲ. ಇದಲ್ಲದೆ, ಈ ಸಸ್ಯಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ನಿಮಗೆ ಹಣದ ಕೊರತೆ ಎಂದಿಗೂ ಎದುರಾಗುವುದಿಲ್ಲ ಎಂಬ ನಂಬಿಕೆಯಿದೆ.
ಗಾರ್ಡನಿಂಗ್ ಹವ್ಯಾಸ ಇರುವವರಿಗೆ ಸರಿಯಾದ ಮಣ್ಣನ್ನು ಹುಡುಕುವುದು ದೊಡ್ಡ ಸವಾಲಾಗಿರುತ್ತದೆ. ವಿಶೇಷವಾಗಿ ಬಾಡಿಗೆ ಮನೆಯಲ್ಲಿ ವಾಸಿಸುವಾಗ. ಆದರೆ ಮಣ್ಣಿನ ಅಗತ್ಯವೇ ಇಲ್ಲದ ಅನೇಕ ಸಸ್ಯಗಳಿವೆ ಎಂದು ನಿಮಗೆ ತಿಳಿದಿದೆಯೇ?. ಅಂದರೆ ಇವು ಮಣ್ಣಿಲ್ಲದೆ ಕೇವಲ ನೀರಿನಲ್ಲಿ ಬೆಳೆಯುತ್ತವೆ ಮತ್ತು ಇವುಗಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿರುವುದಿಲ್ಲ. ಮನೆಯಲ್ಲಿ ಈ ಸಸ್ಯಗಳನ್ನು ಬೆಳೆಸುವುದು ನಿಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಒಂದು ಉತ್ತಮ ಮಾರ್ಗವಾಗಿದೆ.
26
1. ಜಿಜಿ ಪ್ಲಾಂಟ್ (ZZ Plant)
ನಿಮ್ಮ ಮನೆ ಮತ್ತು ಕಚೇರಿ ಹಸಿರಾಗಿರಲು ಇದು ಒಂದು ಉತ್ತಮ ಆಯ್ಕೆಯಾಗಿದೆ. ಇದರ ವಿಶೇಷತೆಯೆಂದರೆ ಕೇವಲ ಒಂದು ಎಲೆಯಿಂದಲೂ ಹೊಸ ಸಸ್ಯವನ್ನು ಬೆಳೆಸಬಹುದು. ಇದಕ್ಕೆ ವಾರಕ್ಕೆ 2-3 ಬಾರಿ ನೀರು ಹಾಕಿದರೆ ಸಾಕು. ಎಲೆಯನ್ನು ನೀರಿನಲ್ಲಿ ಇರಿಸಿದಾಗ, ಬೇರುಗಳು ಕಾಣಿಸಿಕೊಳ್ಳಲು ಸುಮಾರು ಒಂದೂವರೆಯಿಂದ ಎರಡು ತಿಂಗಳು ಬೇಕಾಗುತ್ತದೆ.
36
3. ಸ್ನೇಕ್ ಪ್ಲಾಂಟ್ (Snake Plant)
ಮನೆ ಸುಂದರಗೊಳಿಸಲು ಸ್ನೇಕ್ ಪ್ಲಾಂಟ್ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಇದನ್ನು ನೀರಿನಲ್ಲಿ ನೆಟ್ಟಾಗ ಬೇರುಗಳು ಬೆಳೆಯಲು ಸುಮಾರು ಎರಡು ತಿಂಗಳು ಬೇಕಾಗುತ್ತದೆ. ಇದು ರಾತ್ರಿಯ ವೇಳೆಯಲ್ಲೂ ಆಮ್ಲಜನಕ ಉತ್ಪಾದಿಸುವ ಸಸ್ಯವಾಗಿರುವುದರಿಂದ ಇದನ್ನು ಮಲಗುವ ಕೋಣೆಯಲ್ಲಿ ನೀರಿನ ಜಾರ್‌ನಲ್ಲಿ ಇಟ್ಟು ಅಲಂಕರಿಸಬಹುದು.
ಮಾನ್‌ಸ್ಟೆರಾ ಸಸ್ಯವನ್ನು ಕೂಡ ನೀರಿನಲ್ಲಿ ಸುಲಭವಾಗಿ ಬೆಳೆಸಬಹುದು. ಸಸ್ಯದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿ ಇರಿಸಿದ 3-4 ವಾರಗಳಲ್ಲಿ ಹೊಸ ಬೇರುಗಳು ಮತ್ತು ಸಣ್ಣ ಎಲೆಗಳು ಬರಲು ಪ್ರಾರಂಭಿಸುತ್ತವೆ. ಇದನ್ನು ಫಿಲ್ಟರ್ ಮಾಡಿದ ಬೆಳಕು (Filtered light) ಇರುವ ಜಾಗದಲ್ಲಿ ಇರಿಸಿ. ಈ ಸಸ್ಯವು ಮನೆಯೊಳಗೆ ತಾಜಾ ಗಾಳಿಯನ್ನು ನೀಡುವುದಲ್ಲದೆ, ಆಧುನಿಕ ಕಲೆಯ ಅನುಭವ ನೀಡುತ್ತದೆ.
56
4. ಸಿಂಗೋನಿಯಮ್ ಪ್ಲಾಂಟ್ (Syngonium Plant)
ಸಿಂಗೋನಿಯಮ್ ತನ್ನ ಸೌಂದರ್ಯ ಮತ್ತು ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯದಿಂದಾಗಿ ನಗರಗಳಲ್ಲಿ ವೇಗವಾಗಿ ಜನಪ್ರಿಯವಾಗುತ್ತಿದೆ. ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ, ಇದು ಗಾಳಿಯಿಂದ ಫಾರ್ಮಾಲ್ಡಿಹೈಡ್‌ನಂತಹ ವಿಷಕಾರಿ ಅಂಶಗಳನ್ನು ತೆಗೆದುಹಾಕಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದು ಮಾನಸಿಕ ಶಾಂತಿಗೆ ಕಾರಣವಾಗುತ್ತದೆ. ನೀರಿನಲ್ಲಿ ನೆಟ್ಟ ಕೇವಲ ಎರಡು ವಾರಗಳಲ್ಲಿ ಇದರ ಕತ್ತರಿಸಿದ ಭಾಗಗಳು ಬೇರು ಬಿಡಲು ಪ್ರಾರಂಭಿಸುತ್ತವೆ. ಇದು ನೀರಿನಲ್ಲಿ ನಿಧಾನವಾಗಿ ಬೆಳೆಯುತ್ತಾ ತನ್ನ ಎಲೆಗಳ ಹೊಳಪನ್ನು ಉಳಿಸಿಕೊಳ್ಳುತ್ತದೆ.
66
5. ಮನಿ ಪ್ಲಾಂಟ್ (Money Plant)
ಮನಿ ಪ್ಲಾಂಟ್ ಬಹುತೇಕ ಪ್ರತಿಯೊಂದು ಮನೆಯಲ್ಲೂ ಕಂಡುಬರುತ್ತದೆ. ಇದರ ಸಣ್ಣ ಕತ್ತರಿಸಿದ ಭಾಗವನ್ನು ನೀರಿನ ಬಾಟಲಿಯಲ್ಲಿ ಇರಿಸಿದರೆ, 7 ರಿಂದ 10 ದಿನಗಳಲ್ಲಿ ಹೊಸ ಬೇರುಗಳು ಕಾಣಿಸಿಕೊಳ್ಳುತ್ತವೆ. ಕೇವಲ ಸಮಯಕ್ಕೆ ಸರಿಯಾಗಿ ನೀರನ್ನು ಬದಲಾಯಿಸುತ್ತಿದ್ದರೆ ಸಾಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.