ಕೇವಲ 1 ರೂಪಾಯಿ ಸಾಕು; ನಿಮ್ಮ ಕಿಚನ್ ಸ್ಲ್ಯಾಬ್ ಮೇಲಿನ ಜಿಡ್ಡು, ಕಲೆ ಮಾಯವಾಗಿ ಫಳ ಫಳ ಹೊಳೆಯುತ್ತೆ

Published : Mar 28, 2026, 06:41 PM IST

Kitchen Slab Cleaning Tips Kannada: ದಿನವೂ ಅಡುಗೆ ಮಾಡುವಾಗ ಎಣ್ಣೆ ಜಿಡ್ಡು ಮತ್ತು ಸಾರಿನ ಕಲೆಗಳು ಬಿದ್ದು ಕಿಚನ್ ಸ್ಲ್ಯಾಬ್ ಗಲೀಜಾಗುವುದು ಸಹಜ. ಇಂತಹ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ನೀವು ಇನ್ನು ಮುಂದೆ ದುಬಾರಿ ಕ್ಲೀನರ್‌ಗಳ ಮೇಲೆ ಹಣ ವ್ಯಯಿಸುವ ಅಗತ್ಯವಿಲ್ಲ. 

PREV
17
ದುಬಾರಿ ಲಿಕ್ವಿಡ್, ಕ್ಲೀನರ್ ಬಳಸುವ ಅವಶ್ಯಕತೆಯಿಲ್ಲ

ನಿಮ್ಮ ಅಡುಗೆಮನೆಯ ಸ್ಲ್ಯಾಬ್ (Kitchen Slab)ಮೇಲಿರುವ ಜಿಡ್ಡು ಮತ್ತು ಹಠಮಾರಿ ಕಲೆಗಳನ್ನು ನೋಡಿ ನಿಮಗೂ ಬೇಸರವಾಗಿದೆಯೇ? ಅದನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟದ ಕೆಲಸ ಎಂದು ನಿಮಗನಿಸುತ್ತಿದೆಯೇ? ಆದರೆ ಸ್ಲ್ಯಾಬ್ ಅನ್ನು ಕೇವಲ ಒಂದು ರೂಪಾಯಿಯಲ್ಲಿ ಚಕಾಚಕ್ ಎಂದು ಸ್ವಚ್ಛಗೊಳಿಸಬಹುದು. ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಸ್ಲ್ಯಾಬ್ ಮೇಲಿನ ಕಲೆಗಳನ್ನು ತೆಗೆಯಲು ನೀವು ಇನ್ನು ಮುಂದೆ ದುಬಾರಿ ಲಿಕ್ವಿಡ್, ಕ್ಲೀನರ್ ಬಳಸುವ ಅವಶ್ಯಕತೆಯಿಲ್ಲ. ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೇವಲ ಒಂದು ರೂಪಾಯಿಯ ಶಾಂಪೂ ಪಾಕೆಟ್‌ನಿಂದ ಕಿಚನ್ ಸ್ಲ್ಯಾಬ್ ಅನ್ನು ಸಂಪೂರ್ಣವಾಗಿ ಹೊಳೆಯುವಂತೆ ಮಾಡಬಹುದು. ಬನ್ನಿ, ಸುಲಭವಾದ ಈ ಟೆಕ್ನಿಕ್ ಹೇಗೆ ಬಳಸಬೇಕೆಂದು ತಿಳಿಯೋಣ.

27
ಶಾಂಪೂ ಹೇಗೆ ಪ್ರಯೋಜನಕಾರಿ?

ಅಡುಗೆಮನೆಯ ಸ್ಲ್ಯಾಬ್ ಅನ್ನು ಸ್ವಚ್ಛಗೊಳಿಸಲು ನಿಮಗೆ ಕೇವಲ ಒಂದು ರೂಪಾಯಿಯ ಶಾಂಪೂ ಪಾಕೆಟ್ ಮತ್ತು ಒಂದು ಕಾಟನ್ ಬಟ್ಟೆ (Cotton Cloth) ಸಾಕಾಗುತ್ತದೆ.

37
ಬಳಸುವ ವಿಧಾನ

ಮೊದಲು ಕಾಟನ್ ಬಟ್ಟೆಯ ಮೇಲೆ ಸ್ವಲ್ಪ ಶಾಂಪೂ ಹಾಕಿಕೊಳ್ಳಿ. ನಂತರ ಬಟ್ಟೆಯನ್ನು ಸ್ವಲ್ಪ ಒದ್ದೆ ಮಾಡಿ. ಈಗ ಈ ಬಟ್ಟೆಯಿಂದ ಕಿಚನ್ ಸ್ಲ್ಯಾಬ್ ಅನ್ನು ಚೆನ್ನಾಗಿ ಉಜ್ಜಿ.

47
ಫಲಿತಾಂಶ

ಹೀಗೆ ಮಾಡುವುದರಿಂದ ಕಿಚನ್ ಸ್ಲ್ಯಾಬ್ ಮೇಲೆ ಅಂಟಿಕೊಂಡಿರುವ ಜಿಡ್ಡು ಮತ್ತು ಹಠಮಾರಿ ಕಲೆಗಳು ಅತಿ ಸುಲಭವಾಗಿ ಸ್ವಚ್ಛವಾಗುತ್ತವೆ. ನೀವು ಕೂಡ ಈ ಸರಳ ತಂತ್ರವನ್ನು ಒಮ್ಮೆ ಪ್ರಯತ್ನಿಸಿ ನೋಡಿ.

57
ಸ್ಲ್ಯಾಬ್ ತುಂಬಾ ಗಲೀಜಾಗಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಕಿಚನ್ ಸ್ಲ್ಯಾಬ್ ತುಂಬಾ ಗಲೀಜಾಗಿದ್ದರೆ ಅಥವಾ ನೀವು ಹಲವು ದಿನಗಳಿಂದ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ.. 
*ಮೊದಲಿಗೆ ಇಡೀ ಸ್ಲ್ಯಾಬ್ ಅನ್ನು ಸ್ವಲ್ಪ ನೀರು ಹಾಕಿ ಒದ್ದೆ ಮಾಡಿಕೊಳ್ಳಿ.
*ನಂತರ ಒಂದು ಮಗ್‌ನಲ್ಲಿ ನೀರು ಮತ್ತು ಶಾಂಪೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಇಡೀ ಸ್ಲ್ಯಾಬ್ ಮೇಲೆ ಹರಡಿ.
*ಉತ್ತಮ ಫಲಿತಾಂಶಕ್ಕಾಗಿ ಈ ಮಿಶ್ರಣವನ್ನು ಸ್ಲ್ಯಾಬ್ ಮೇಲೆ ಸ್ವಲ್ಪ ಸಮಯ ಹಾಗೆಯೇ ಇರಲು ಬಿಡಿ.
*ಸ್ವಲ್ಪ ಸಮಯದ ನಂತರ ಸ್ಲ್ಯಾಬ್ ಅನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.

67
ಗಮನಿಸಬೇಕಾದ ಪ್ರಮುಖ ವಿಷಯಗಳು

ಅಡುಗೆಮನೆಯ ಸ್ವಚ್ಛತೆ ನೇರವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಎಷ್ಟು ಬಾರಿ ಸ್ವಚ್ಛಗೊಳಿಸಬೇಕು?
*ನೀವು ವಾರದಲ್ಲಿ 1 ರಿಂದ 2 ಬಾರಿ ಈ ಶಾಂಪೂ ಟೆಕ್ನಿಕ್ ಬಳಸಿ ಕಿಚನ್ ಸ್ಲ್ಯಾಬ್ ಅನ್ನು ಡೀಪ್ ಕ್ಲೀನಿಂಗ್ ಮಾಡಬಹುದು.
*ಕಿಚನ್ ಸ್ಲ್ಯಾಬ್ ಹೆಚ್ಚು ಗಲೀಜಾಗದಂತೆ ತಡೆಯಲು ನೀವು ಪ್ರತಿದಿನ ಅಡುಗೆ ಮಾಡಿದ ನಂತರ ಒದ್ದೆ ಬಟ್ಟೆಯಿಂದ ಸ್ಲ್ಯಾಬ್ ಅನ್ನು ಒರೆಸಬೇಕು.
*ಒಂದು ವೇಳೆ ನೀವು ಗಲೀಜು ಸ್ಲ್ಯಾಬ್ ಮೇಲೆ ಅಡುಗೆ ಮಾಡಿದರೆ, ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಆದ್ದರಿಂದ ಕಿಚನ್ ಸ್ಲ್ಯಾಬ್ ಅನ್ನು ಯಾವಾಗಲೂ ಸ್ವಚ್ಛವಾಗಿಡುವುದು ಬಹಳ ಮುಖ್ಯ.

77
ಸುವಾಸನೆ ಬರಲು

ಕಿಚನ್ ಸ್ಲ್ಯಾಬ್ ಸ್ವಚ್ಛಗೊಳಿಸಿದ ನಂತರ, ಅದಕ್ಕೆ ಹಿತವಾದ ಸುವಾಸನೆ ಬರಲು ಮತ್ತು ನೊಣಗಳು ಬರದಂತೆ ತಡೆಯಲು, ನೀವು ಕೊನೆಯಲ್ಲಿ ಒರೆಸುವ ನೀರಿಗೆ ಒಂದೆರಡು ಹನಿ ನಿಂಬೆ ರಸ ಅಥವಾ ಡೆಟಾಲ್ ಸೇರಿಸಿ ಒರೆಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories