ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಪ್ರಾಣಿ ಹಿಂಸೆಯ ಕಾರಣ ನೀಡಿ ಹಾಲು, ಚರ್ಮ ಮತ್ತು ರೇಷ್ಮೆ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ನಿರೂಪಕ ಅಮಿತಾಭ್ ಬಚ್ಚನ್ ಅವರು ಆಶ್ಚರ್ಯಚಕಿತರಾಗಿದ್ದಾರೆ.
ಅಮಿತಾಭ್ ಬಚ್ಚನ್ (Amitabh Bachchan) ಬಾಲಿವುಡ್ ಕಂಡ ಅಪರೂಪದ ನಟ. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ.
26
ಫುಲ್ ಎನರ್ಜಿ
ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. 80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್ ಬಚ್ಚನ್ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕೌನ್ ಬನೇಗಾ ಕರೋರ್ಪತಿ.
36
ಕೌನ್ ಬನೇಗಾ ಕರೋಡ್ ಪತಿ
ಕೌನ್ ಬನೇಗಾ ಕರೋಡ್ ಪತಿ (Kaun Banega Crorepati) ಇದೀಗ 17ನೇ ಸೀಸನ್ ನಡೆಯುತ್ತಿದೆ. ಇಷ್ಟೂ ವರ್ಷಗಳೂ ಇದನ್ನು ನಟ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಡ್ತಿರೋದು ವಿಶೇಷ. ಈ ಷೋನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಸಾಮಾನ್ಯ ಜನರಿಂದು ಹಿಡಿದು ಸೆಲೆಬ್ರಿಟಿಗಳವರೆಗೆ, ಬೇರೆ ಬೇರೆ ಭಾಷೆಗಳ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಎಲ್ಲರೂ ಹಾಟ್ ಸೀಟ್ನಲ್ಲಿ ಕುಳಿತಿದ್ದಾರೆ. ಆರಂಭದಲ್ಲಿ ಒಂದು ಕೋಟಿ ರೂಪಾಯಿಗೆ ಸೀಮಿತವಾಗಿದ್ದ ಈ ಷೋ ಇದೀಗ ಏಳು ಕೋಟಿಗೆ ಬಂದು ತಲುಪಿದೆ. ಹಲವಾರು ಮಂದಿ ಕೋಟಿ ಕೋಟಿ ಗೆದ್ದು ಬೀಗಿದ್ದಾರೆ.
ಇದೀಗ ನಟ ಅಮಿತಾಭ್ ಬಚ್ಚನ್ ಅವರು ಸಸ್ಯಾಹಾರದ ಕುರಿತು ಸ್ಪರ್ಧಿಯೊಬ್ಬ ಹೇಳಿದ ಮಾತು ಕೇಳಿ ಶಾಕ್ ಆಗಿ ಹೋಗಿದ್ದಾರೆ. ನೀವು ನನ್ನ ಕಣ್ಣು ತೆರೆಸಿದ್ರಿ. ನಿಜಕ್ಕೂ ಇದು ನನಗೆ ಗೊತ್ತೇ ಇರಲಿಲ್ಲ. ಈಗಲೇ ಮನೆಗೆ ಹೋಗಿ ಎಲ್ಲರಿಗೂ ನಾನು ತೊಂದರೆ ಕೊಡುತ್ತೇನೆ ಎಂದಿದ್ದಾರೆ.
56
ಹಾಲು ಕುಡಿಯದ ಸ್ಪರ್ಧಿ
ಸಿದ್ಧಾರ್ಥ ಶರ್ಮ ಎನ್ನುವ ಸ್ಪರ್ಧಿಯ ಬಾಯಿಯಿಂದ ಸಸ್ಯಾಹಾರದ ಮಾತನ್ನು ಕೇಳಿದ್ದಾರೆ ಅಮಿತಾಭ್. ಸಿದ್ಧಾರ್ಥ್ ಅವರು ಕಳೆದ ಏಳು ವರ್ಷಗಳಿಂದ ನಾನು ಹಾಲು ಕುಡಿಯುತ್ತಿಲ್ಲ. ಏಕೆಂದರೆ, ಆ ಹಾಲು ಸೃಷ್ಟಿಯಾಗಿರುವುದು ಅದರ ಮಗುವಿಗೆ ಕೊಡುವುದಕ್ಕಾಗಿ. ಅದನ್ನು ನಾವು ಕುಡಿದರೆ ಪ್ರಾಣಿ ಹಿಂಸೆ ಮಾಡಿದಂತೆ. ಹಾಲಿನ ಪದಾರ್ಥಗಳನ್ನು ಯಾವುದೂ ಸೇವಿಸುವುದಿಲ್ಲ ಎಂದಿದ್ದಾರೆ.
66
ಚರ್ಮದ ಶೂಸ್, ರೇಷ್ಮೆ ಬ್ಯಾನ್
ಅವರ ಪತ್ನಿಯನ್ನು ವಿಚಾರಿಸಿದಾಗ, ಅವರು, ತಮ್ಮ ಪತಿ ಚರ್ಮದ ಶೂಸ್ ಸೇರಿದಂತೆ ಯಾವುದನ್ನೂ ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲದೇ, ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಕಾಯಿ ಸಾಯಿಸಿ ಅದರಿಂದ ನೂಲು ತೆಗೆಯುವ ಕಾರಣದಿಂದ ರೇಷ್ಮೆ ಬಟ್ಟೆಗಳನ್ನೂ ಧರಿಸುವುದಿಲ್ಲ. ಮದುವೆಯ ಸಂದರ್ಭದಲ್ಲಿಯೂ ಅವರಿಗೆ ಬೇಕಾದ ರೀತಿಯಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು ಎಂದಿದ್ದಾರೆ. ಇದನ್ನು ಕೇಳಿ ನಟ ಅಮಿತಾಭ್ ಶಾಕ್ ಆಗಿದ್ದು, ನಿಜಕ್ಕೂ ಆ ನಿಟ್ಟಿನಲ್ಲಿ ನಾನು ಯೋಚನೆಯೇ ಮಾಡಿರಲಿಲ್ಲ. ನೀವು ನನ್ನ ಕಣ್ಣು ತೆರೆಸಿದಿರಿ. ಇವತ್ತೇ ಮನೆಗೆ ಹೋಗಿ ಎಲ್ಲರಿಗೂ ವಿಷಯ ಹೇಳುತ್ತೇನೆ. ಅವರಿಗೆಲ್ಲಾ ತೊಂದರೆ ಕೊಡುತ್ತೇನೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.