ಒಗ್ಗರಣೆಗೆ ಒಂದೇ ಒಂದು ಚಮಚ ಕಡಲೆ ಹಿಟ್ಟು ಹಾಕಿ ನೋಡಿ.. ಊಟದ ರುಚಿ ಡಬ್ಬಲ್ ಆಗೋದು ಗ್ಯಾರಂಟಿ

Published : May 23, 2026, 04:25 PM IST

How to make dal thick and tasty: ನಮ್ಮ ಅಜ್ಜಿ ಮಾಡುವ ಸಾರು ಯಾಕೆ ಅಷ್ಟು ರುಚಿಯಾಗಿರುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ? ಅಜ್ಜಿ ಬಳಸುತ್ತಿದ್ದ ಆ 'ಕಡಲೆ ಹಿಟ್ಟಿನ ಒಗ್ಗರಣೆ'. ಇಂದಿನ ದಿನಗಳಲ್ಲಿ ಮರೆತುಹೋಗುತ್ತಿರುವ ಆ ಹಳೆಯ ಕಾಲದ ದೇಸಿ ವಿಧಾನದ ಪೂರ್ಣ ಮಾಹಿತಿ ಇಲ್ಲಿದೆ. 

PREV
16
ಹೋಟೆಲ್‌ನಂತೆ ಭರ್ಜರಿಯಾಗಿರುತ್ತೆ

ಕೆಲವರ ಮನೆಯಲ್ಲಿ ಮಾಡುವ ಬೇಳೆ ಸಾರು ಅಥವಾ ತರಕಾರಿ ಪಲ್ಯಗಳು ಹೋಟೆಲ್ ರುಚಿಯಂತೆ ಭರ್ಜರಿಯಾಗಿರುತ್ತವೆ. ಇದರ ರಹಸ್ಯ ಕೇವಲ ಮಸಾಲೆಗಳಲ್ಲಷ್ಟೇ ಇರುವುದಿಲ್ಲ, ಬದಲಿಗೆ ಒಗ್ಗರಣೆಗೆ ಹಾಕುವ ಆ ಒಂದು ಚಮಚ ಕಡಲೆ ಹಿಟ್ಟಿನಲ್ಲಿ (Besan) ಅಡಗಿರುತ್ತದೆ. ಅಜ್ಜಿ ಕಾಲದ ಈ ದೇಸಿ ಪದ್ಧತಿಯು ಅಡುಗೆಯ ರುಚಿ, ಸುಗಂಧ ಮತ್ತು ವಿನ್ಯಾಸವನ್ನೇ (Texture) ಬದಲಿಸಿಬಿಡುತ್ತದೆ.

26
ಒಗ್ಗರಣೆಗೆ ಕಡಲೆ ಹಿಟ್ಟು ಏಕೆ ಹಾಕಬೇಕು?

ಸಾಮಾನ್ಯವಾದ ಬೇಳೆ ಸಾರಿಗೆ ಕಡಲೆ ಹಿಟ್ಟಿನ ಒಗ್ಗರಣೆ ನೀಡಿದಾಗ ಅದರ ರುಚಿ ದುಪ್ಪಟ್ಟಾಗುತ್ತದೆ. ಒಗ್ಗರಣೆಯಲ್ಲಿ ಕಡಲೆ ಹಿಟ್ಟು ಹದವಾಗಿ ಬೆಂದಾಗ ಸಾರಿಗೆ ಒಂದು ರೀತಿಯ ಮಂದತ್ವ (Thick texture) ಬರುತ್ತದೆ. ಇದು ನೀರು ಮತ್ತು ಬೇಳೆ ಬೇರೆ ಬೇರೆಯಾಗದಂತೆ ತಡೆಯುತ್ತದೆ. ಅಲ್ಲದೆ, ಕಡಲೆ ಹಿಟ್ಟು ಎಣ್ಣೆ ಮತ್ತು ಮಸಾಲೆಗಳನ್ನು ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡುತ್ತದೆ, ಇದರಿಂದ ಸಾರಿನ ರುಚಿ ಸಮನಾಗಿ ಹರಡುತ್ತದೆ.

36
ಯಾವ ಅಡುಗೆಗಳಿಗೆ ಕಡಲೆ ಹಿಟ್ಟಿನ ಒಗ್ಗರಣೆ ಸೂಕ್ತ?

ಬೇಳೆ ಸಾರುಗಳು
ಹೆಸರು ಬೇಳೆ, ತೊಗರಿ ಬೇಳೆ ಅಥವಾ ಮಸೂರ್ ದಾಲ್ ಮಾಡುವಾಗ ಸ್ವಲ್ಪ ಕಡಲೆ ಹಿಟ್ಟು ಸೇರಿಸಿದರೆ ಸಾರು ನೀರಾಗದೆ ಹದವಾಗಿ ಬರುತ್ತದೆ.

46
ತರಕಾರಿ ಪಲ್ಯಗಳು

ಕೇವಲ ಸಾರು ಮಾತ್ರವಲ್ಲದೆ ಪಾಲಕ್, ಮೆಂತೆ, ಎಲೆಕೋಸು, ಹೀರೆಕಾಯಿ, ಸೋರೆಕಾಯಿ ಮತ್ತು ಬೆಂಡೆಕಾಯಿ ಪಲ್ಯ ಮಾಡುವಾಗಲೂ ಕಡಲೆ ಹಿಟ್ಟು ಬಳಸಬಹುದು. ಇದು ಪಲ್ಯಕ್ಕೆ ಒಂದು ರೀತಿಯ ಹಿತವಾದ ಸುವಾಸನೆಯನ್ನು ನೀಡುತ್ತದೆ.

56
ಮಜ್ಜಿಗೆ ಹುಳಿ/ಪಲ್ಯಗಳು

ಮಜ್ಜಿಗೆ ಅಥವಾ ಮೊಸರು ಬಳಸಿ ಮಾಡುವ ಅಡುಗೆಗಳಲ್ಲಿ ಕಡಲೆ ಹಿಟ್ಟು ಅತ್ಯಗತ್ಯ. ಮಜ್ಜಿಗೆಯನ್ನು ಬಿಸಿ ಮಾಡಿದಾಗ ಅದು ಒಡೆಯುವ ಸಾಧ್ಯತೆ ಇರುತ್ತದೆ. ಆಗ ಕಡಲೆ ಹಿಟ್ಟು ಮಜ್ಜಿಗೆ ಮತ್ತು ನೀರು ಒಂದಕ್ಕೊಂದು ಬೆರೆಯುವಂತೆ ಮಾಡಿ ಅಡುಗೆಯ ವಿನ್ಯಾಸವನ್ನು ಕಾಪಾಡುತ್ತದೆ.

66
ಹೇಗೆ ಬಳಸಬೇಕು?

ಒಗ್ಗರಣೆ ಕೊಡುವಾಗ ಸಾಸಿವೆ, ಜೀರಿಗೆ ಸಿಡಿದ ನಂತರ ಒಂದು ಚಮಚ ಕಡಲೆ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಸಾರು ಅಥವಾ ತರಕಾರಿ ಸೇರಿಸಿದರೆ ಘಮಘಮಿಸುವ ಅಡುಗೆ ಸಿದ್ಧ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories