ತುಪ್ಪ ತಯಾರಿಸುವಾಗ ವೀಳ್ಯದೆಲೆ ಏಕೆ ಹಾಕ್ತಾರೆ? ಅಜ್ಜಿ ಕಾಲದ ಈ ಅದ್ಭುತ ಮನೆಮದ್ದಿನ ಹಿಂದಿರುವ ರಹಸ್ಯ ಇಲ್ಲಿದೆ

Published : May 23, 2026, 03:21 PM IST

Making ghee with betel leaf: ನುರಿತ ಅಡುಗೆಯವರು, ನಮ್ಮ ಹಿರಿಯರು ತುಪ್ಪ ತಯಾರಿಸುವಾಗ ಒಂದು ವಿಶಿಷ್ಟವಾದ ಎಲೆ ಬಳಸುತ್ತಾರೆ. ಅದೇ 'ವೀಳ್ಯದೆಲೆ'. ಹಾಗಾದರೆ ತುಪ್ಪಕ್ಕೂ ವೀಳ್ಯದೆಲೆಗೂ ಇರುವ ಸಂಬಂಧವೇನು? ಇದನ್ನು ಬಳಸುವುದರಿಂದ ತುಪ್ಪದ ರುಚಿ ಹೇಗೆ ಬದಲಾಗುತ್ತದೆ? ಎಂಬ ಮಾಹಿತಿ ಇಲ್ಲಿದೆ.     

PREV
17
ಇಂದಿನ 'ಕಿಚನ್ ಹ್ಯಾಕ್' ಅಲ್ಲ

ಭಾರತೀಯ ಅಡುಗೆಮನೆಯಲ್ಲಿ ತುಪ್ಪ ಕೇವಲ ಒಂದು ಪದಾರ್ಥವಲ್ಲ, ಅದು ನಮ್ಮ ಸಂಪ್ರದಾಯ ಮತ್ತು ಆರೋಗ್ಯದ ಅವಿಭಾಜ್ಯ ಅಂಗ. ಇಂದಿಗೂ ಅನೇಕ ಮನೆಗಳಲ್ಲಿ ಶುದ್ಧ ದೇಸಿ ತುಪ್ಪವನ್ನು (Ghee) ಹಳೆಯ ಪದ್ಧತಿಯಲ್ಲೇ ತಯಾರಿಸಲಾಗುತ್ತದೆ. ತುಪ್ಪದ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಜನರು ವಿಭಿನ್ನ ತಂತ್ರಗಳನ್ನು ಬಳಸುತ್ತಾರೆ. ಅಂತಹ ಒಂದು ಆಸಕ್ತಿದಾಯಕ ಮತ್ತು ಸಾಂಪ್ರದಾಯಿಕ ವಿಧಾನವೆಂದರೆ ತುಪ್ಪ ಕಾಯಿಸುವಾಗ ವೀಳ್ಯದೆಲೆ (Betel Leaf) ಹಾಕುವುದು.

ಹಲವರು ಮೊದಲ ಬಾರಿಗೆ ಇದನ್ನು ಕೇಳಿದಾಗ ಆಶ್ಚರ್ಯಪಡಬಹುದು. ಆದರೆ ಇದು ಇಂದಿನ 'ಕಿಚನ್ ಹ್ಯಾಕ್' ಅಲ್ಲ, ಬದಲಿಗೆ ಅಜ್ಜಿ ಕಾಲದ ಅದ್ಭುತ ಮನೆಮದ್ದು. ವೀಳ್ಯದೆಲೆ ಹಾಕುವುದರಿಂದ ತುಪ್ಪದ ಗುಣಮಟ್ಟ ಮತ್ತು ಸುಗಂಧ ಹೆಚ್ಚುತ್ತದೆ ಎಂದು ನಂಬಲಾಗಿದೆ. 

27
ತುಪ್ಪದಲ್ಲಿ ವೀಳ್ಯದೆಲೆ ಹಾಕುವುದರಿಂದ ಆಗುವ ಪ್ರಯೋಜನಗಳೇನು?

ವೀಳ್ಯದೆಲೆಯಲ್ಲಿ ನೈಸರ್ಗಿಕ ಸುಗಂಧ ಮತ್ತು ಬ್ಯಾಕ್ಟೀರಿಯಾ ವಿರೋಧಿ (Antibacterial) ಗುಣಗಳಿವೆ. ತುಪ್ಪ ತಯಾರಿಸುವಾಗ ಇದನ್ನು ಸೇರಿಸುವುದು ಒಂದು ಹಳೆಯ ದೇಸಿ ಪದ್ಧತಿ. ಇದರಿಂದ ತುಪ್ಪದಲ್ಲಿ ಹಿತವಾದ ತಾಜಾ ಸುವಾಸನೆ ಬರುತ್ತದೆ ಮತ್ತು ಕೆನೆಯ ಹಸಿ ವಾಸನೆ ಕಡಿಮೆಯಾಗುತ್ತದೆ. ಇದರ ಇತರ ಲಾಭಗಳು ಈ ಕೆಳಕಂಡಂತೆ ಇವೆ ನೋಡಿ..

37
ಹತ್ತೂರಿಗೆ ಹರಡುತ್ತೆ

ತುಪ್ಪ ತಯಾರಾಗುವ ಕೊನೆಯ ಹಂತದಲ್ಲಿ ವೀಳ್ಯದೆಲೆ ಹಾಕಿದಾಗ, ಅದರ ಪರಿಮಳವು ತುಪ್ಪದೊಂದಿಗೆ ಬೆರೆಯುತ್ತದೆ. ಇದರಿಂದ ತುಪ್ಪದ ಘಮವು ಹತ್ತೂರಿಗೆ ಹರಡುವಂತೆ ತಾಜಾ ಮತ್ತು ಅದ್ಭುತವಾಗಿರುತ್ತದೆ.

47
ನೊರೆ ಕಡಿಮೆ ಮಾಡಲು

ತುಪ್ಪ ಕಾಯಿಸುವಾಗ ಬರುವ ಅತಿಯಾದ ನೊರೆಯನ್ನು ನಿಯಂತ್ರಿಸಲು ವೀಳ್ಯದೆಲೆ ಸಹಾಯ ಮಾಡುತ್ತದೆ.

57
ರುಚಿ ಮತ್ತು ಗುಣಮಟ್ಟ

ಇದು ತುಪ್ಪಕ್ಕೆ ವಿಶಿಷ್ಟವಾದ ಫ್ಲೇವರ್ ನೀಡುವುದಲ್ಲದೆ, ಅದರ ಗುಣಮಟ್ಟವನ್ನು ದೀರ್ಘಕಾಲದವರೆಗೆ ಕಾಪಾಡುತ್ತದೆ.

67
ತೇವಾಂಶ ನಿವಾರಣೆ

ತುಪ್ಪದಲ್ಲಿ ಉಳಿದಿರುವ ಅಲ್ಪಸ್ವಲ್ಪ ತೇವಾಂಶವನ್ನು (Moisture) ಹೀರಿಕೊಳ್ಳಲು ವೀಳ್ಯದೆಲೆ ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ತುಪ್ಪ ಬೇಗನೆ ಹಾಳಾಗುವುದಿಲ್ಲ.

77
ಚಿನ್ನದ ಬಣ್ಣ..ವಿಜ್ಞಾನ ಮತ್ತು ಸಂಪ್ರದಾಯದ ಸಂಗಮ

ಈ ವಿಧಾನದಿಂದ ತುಪ್ಪವು ಸುಂದರವಾದ ಚಿನ್ನದ ಬಣ್ಣವನ್ನು (Golden color) ಪಡೆಯುತ್ತದೆ ಮತ್ತು ಹೆಚ್ಚು ಹೊಳೆಯುತ್ತದೆ. ನಮ್ಮ ಹಿರಿಯರು ಬಳಸುತ್ತಿದ್ದ ಇಂತಹ ಸಣ್ಣ ಪುಟ್ಟ ನೈಸರ್ಗಿಕ ಉಪಾಯಗಳು ಕೇವಲ ರುಚಿಗಷ್ಟೇ ಅಲ್ಲ, ವಿಜ್ಞಾನ ಮತ್ತು ಸಂಪ್ರದಾಯದ ಸಂಗಮವಾಗಿವೆ. ಅದಕ್ಕಾಗಿಯೇ ಇಂದಿಗೂ ಅನೇಕರು ಮನೆಯಲ್ಲಿ ತುಪ್ಪ ಮಾಡುವಾಗ ವೀಳ್ಯದೆಲೆ ಬಳಸಲು ಇಷ್ಟಪಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories