ಸೂಜಿ ಮೆಣಸು ಕೃಷಿ ಶುರು ಮಾಡಲು ಮಾರ್ಚ್ ಕೊನೆಯ ವಾರ ಉತ್ತಮ ಸಮಯ. ಇದು ಯಾವುದೇ ವಾತಾವರಣದಲ್ಲೂ ಬೆಳೆಯುತ್ತೆ. ಆದರೂ, ಬೇಸಿಗೆ ಕೊನೆಯಲ್ಲಿ ಗಿಡ ನೆಟ್ಟರೆ, ಅದು ಹುಲುಸಾಗಿ, ಸದೃಢವಾಗಿ ಬೆಳೆಯಲು ಸಹಾಯ ಆಗುತ್ತೆ.
life Feb 04 2026
Author: Mahmad Rafik Image Credits:Getty
Kannada
ಮೆಣಸಿನ ಬೀಜ
ಚೆನ್ನಾಗಿ ಹಣ್ಣಾದ, ಕೆಂಪು ಬಣ್ಣದ ಗಾಂಧಾರಿ ಮೆಣಸಿನಿಂದ ಬೀಜಗಳನ್ನು ತೆಗೆದುಕೊಳ್ಳಿ. ಯಾವುದೇ ರೀತಿ ಹಾಳಾಗದ, ದಪ್ಪಗಿರುವ ಬೀಜಗಳು ಉತ್ತಮ ಇಳುವರಿಯನ್ನು ಕೊಡುತ್ತವೆ.
Image credits: Getty
Kannada
ಬಿತ್ತನೆಗೂ ಮುನ್ನ
ಬೀಜ ಬಿತ್ತುವ ಮೊದಲು, ಅವುಗಳನ್ನು ಅರ್ಧ ಗಂಟೆಗಳ ಕಾಲ ಸ್ಯೂಡೋಮೊನಸ್ ದ್ರಾವಣದಲ್ಲಿ ಅಥವಾ ಬರೀ ನೀರಿನಲ್ಲಿ ನೆನೆಸಿಡಿ. ಹೀಗೆ ಮಾಡುವುದರಿಂದ ಬೀಜಗಳು ಬೇಗ ಮೊಳಕೆಯೊಡೆಯುತ್ತವೆ ಮತ್ತು ರೋಗಗಳನ್ನು ತಡೆಯಬಹುದು.
Image credits: Getty
Kannada
4-5 ದಿನಗಳಲ್ಲಿ
ಬೀಜಗಳನ್ನು ತುಂಬಾ ಆಳವಾಗಿ ಬಿತ್ತಬೇಡಿ. 4-5 ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ. ಸಸಿಗಳಲ್ಲಿ 4-5 ಎಲೆಗಳು ಬಂದ ನಂತರ, ಅವುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸಿದ್ಧವಾಗುತ್ತವೆ.
Image credits: Getty
Kannada
ದೀರ್ಘಕಾಲದ ಬೆಳೆ
ಸಸಿಗಳನ್ನು ಗ್ರೋಬ್ಯಾಗ್ ಅಥವಾ ನೇರವಾಗಿ ಮಣ್ಣಿನಲ್ಲಿ ನೆಡಬಹುದು. ಹಲವು ವರ್ಷಗಳ ಕಾಲ (5 ವರ್ಷ) ಇಳುವರಿ ನೀಡುವ ಬೆಳೆಯಾಗಿದೆ. ಹಾಗಾಗಿ, ಗಿಡಗಳನ್ನು ನೆಡುವಾಗ ಅವುಗಳ ನಡುವೆ ಸರಿಯಾದ ಅಂತರ ಕಾಯ್ದುಕೊಳ್ಳುವುದು ಮುಖ್ಯ.
Image credits: Getty
Kannada
ಸುಣ್ಣದ ಬಳಕೆ
ಗಿಡ ನೆಡುವ ಗುಂಡಿಯಲ್ಲಿ ಸ್ವಲ್ಪ ಸುಣ್ಣವನ್ನು ಸೇರಿಸಿದರೆ ಮಣ್ಣಿನ ಆಮ್ಲೀಯತೆ ಕಡಿಮೆಯಾಗುತ್ತದೆ. ಒಂದು ವಾರದ ನಂತರ, ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಅನ್ನು ಮೂಲ ಗೊಬ್ಬರವಾಗಿ ಹಾಕಬಹುದು.
Image credits: Getty
Kannada
ಸೂರ್ಯನ ಬೆಳಕು
ಗಾಂಧಾರಿ ಗಿಡಕ್ಕೆ ಭಾಗಶಃ ನೆರಳು ಇಷ್ಟವಾದರೂ, ದಿನಕ್ಕೆ 5-6 ಗಂಟೆಗಳ ಕಾಲ ಸೂರ್ಯನ ಬೆಳಕು ಸಿಗುವುದು ಬಹಳ ಮುಖ್ಯ. ಇದರಿಂದ ಗಿಡದಲ್ಲಿ ಹೆಚ್ಚು ಮೆಣಸು ಬಿಡುತ್ತದೆ.
Image credits: Getty
Kannada
ನೀರುಣಿಸುವುದು
ಮಣ್ಣಿನಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಿ. ಮಣ್ಣು ಒಣಗಿದಂತೆ, ನಿಯಮಿತವಾಗಿ (2-3 ದಿನಗಳಿಗೊಮ್ಮೆ) ನೀರು ಹಾಕಿ. ಆದರೆ, ಗಿಡದ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ.
Image credits: Getty
Kannada
ಹೆಚ್ಚಿನ ಇಳುವರಿಗೆ
ಕಡಲೆ ಹಿಂಡಿಯನ್ನು ನೀರಿನಲ್ಲಿ ನೆನೆಸಿ, ಹುದುಗಿಸಿ, ಅದಕ್ಕೆ 10 ಪಟ್ಟು ನೀರು ಸೇರಿಸಿ ಗಿಡಕ್ಕೆ ಹಾಕುವುದರಿಂದ ಇಳುವರಿ ಹೆಚ್ಚಾಗುತ್ತದೆ. ತಿಂಗಳಿಗೊಮ್ಮೆ ಫಿಶ್ ಅಮೈನೋ ಆಸಿಡ್ ಸಿಂಪಡಿಸಿದ್ರೆ ಉತ್ತಮ ಫಲಿತಾಂಶ ಸಿಗುತ್ತೆ
Image credits: Getty
Kannada
ಬೇವಿನೆಣ್ಣೆ ಸಿಂಪಡಣೆ
ಎಲೆ ಮುರುಟು ರೋಗವನ್ನು ತಡೆಯಲು ಬೇವಿನೆಣ್ಣೆ-ಸೋಪು ಮಿಶ್ರಣವನ್ನು ಬಳಸಬಹುದು. ಗಿಡದ ಚಿಗುರನ್ನು ನಿಯಮಿತವಾಗಿ ಚಿವುಟುವುದರಿಂದ ಹೊಸ ಕೊಂಬೆಗಳು ಹುಟ್ಟಿ, ಹೆಚ್ಚು ಮೆಣಸು ಬಿಡಲು ಸಹಾಯವಾಗುತ್ತದೆ.