ನಿಮ್ಮ ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಕೆಲವು ವಸ್ತುಗಳು ಟಾಯ್ಲೆಟ್ ಸೀಟ್‌ಗಿಂತಲೂ ಹೆಚ್ಚು ಕೊಳಕಾಗಿರುತ್ತವೆ ಮತ್ತು ಕ್ರಿಮಿಗಳನ್ನು ಹೊಂದಿರುತ್ತವೆ ಎಂದು ನಿಮಗೆ ತಿಳಿದಿದೆಯೇ? ಇವುಗಳ ಬಳಕೆಯಿಂದಲೇ ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚು.
ನಮ್ಮ ಆರೋಗ್ಯ ಶುರುವಾಗುವುದೇ ಅಡುಗೆಮನೆಯಿಂದ. ಆದರೆ, ನಾವು ತುಂಬಾ ಕ್ಲೀನ್ ಆಗಿ ಇಟ್ಟಿದ್ದೇವೆ ಅಂದುಕೊಳ್ಳುವ ನಮ್ಮ ಕಿಚನ್‌ನಲ್ಲಿರುವ ಕೆಲವು ವಸ್ತುಗಳೇ ರೋಗಗಳ ತಾಣವಾಗಿವೆ. ಸಾಮಾನ್ಯವಾಗಿ ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಅಂತ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ, ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ನಾವು ದಿನವೂ ಬಳಸುವ ಕಿಚನ್ ವಸ್ತುಗಳ ಮೇಲೆ ಟಾಯ್ಲೆಟ್ ಸೀಟ್‌ಗಿಂತ ನೂರಾರು ಪಟ್ಟು ಹೆಚ್ಚು ಕ್ರಿಮಿಗಳು ಅಡಗಿವೆ ಎಂಬುದು ಬಯಲಾಗಿದೆ.
26
ಮನೆಯಲ್ಲಿ ಟಾಯ್ಲೆಟ್ ಸೀಟ್‌ಗಿಂತ ಕೊಳಕಾಗಿರುವ ವಸ್ತುಗಳು:
ಸಾಮಾನ್ಯವಾಗಿ ಟಾಯ್ಲೆಟ್ ಸೀಟ್ ಮೇಲೆ ಹೆಚ್ಚು ಕ್ರಿಮಿಗಳು ಇರುತ್ತವೆ ಎಂದು ನಾವು ಭಾವಿಸುತ್ತೇವೆ, ಆದರೆ ನಿಜವಾಗಿ ನಮ್ಮ ಕಿಚನ್‌ನ ವಸ್ತುಗಳೇ ಬ್ಯಾಕ್ಟೀರಿಯಾಗಳ ಮನೆಯಾಗಿವೆ
ಕಿಚನ್ ಸ್ಪಾಂಜ್: ಪಾತ್ರೆ ತೊಳೆಯುವ ಸ್ಪಾಂಜ್‌ನಲ್ಲಿ ತೇವಾಂಶ ಹೆಚ್ಚು ಕಾಲ ಇರುವುದರಿಂದ, ಇದು ಟಾಯ್ಲೆಟ್ ಸೀಟ್‌ಗಿಂತ ಬರೋಬ್ಬರಿ 2 ಲಕ್ಷ ಪಟ್ಟು ಹೆಚ್ಚು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ.
ಕಟಿಂಗ್ ಬೋರ್ಡ್: ತರಕಾರಿ, ಮಾಂಸ ಕತ್ತರಿಸುವ ಬೋರ್ಡ್ ಮೇಲಿನ ಗೀರುಗಳಲ್ಲಿ ಕ್ರಿಮಿಗಳು ಸೇರಿಕೊಳ್ಳುತ್ತವೆ. ಇದು ಟಾಯ್ಲೆಟ್ ಸೀಟ್‌ಗಿಂತ 200 ಪಟ್ಟು ಹೆಚ್ಚು ಬ್ಯಾಕ್ಟೀರಿಯಾದಿಂದ ತುಂಬಿರುತ್ತದೆ.
36
ಕಿಚನ್ ಟವಲ್:
ಒದ್ದೆ ಕೈ ಒರೆಸುವ ಕಿಚನ್ ಟವಲ್‌ಗಳ ಮೇಲೆ ಟಾಯ್ಲೆಟ್ ಸೀಟ್‌ಗಿಂತ 80 ಪಟ್ಟು ಹೆಚ್ಚು ಕ್ರಿಮಿಗಳು ಸೇರುತ್ತವೆ.
ಟ್ಯಾಪ್ ಹ್ಯಾಂಡಲ್: ಅಡುಗೆ ಮಾಡುವಾಗ ಕೊಳಕು ಕೈಗಳಿಂದ ತಿರುಗಿಸುವ ನಲ್ಲಿಯ ಹ್ಯಾಂಡಲ್ ಮೇಲೆ 40 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಇರುತ್ತದೆ.
ಫ್ರಿಡ್ಜ್ ಹ್ಯಾಂಡಲ್: ಮನೆಯಲ್ಲಿ ಎಲ್ಲರೂ ದಿನವೂ ಪದೇ ಪದೇ ಮುಟ್ಟುವ ಫ್ರಿಡ್ಜ್ ಡೋರ್ ಹ್ಯಾಂಡಲ್ ಮೇಲೆ 20 ಪಟ್ಟು ಹೆಚ್ಚು ಕ್ರಿಮಿಗಳು ವಾಸಿಸುತ್ತವೆ.
ಕೇವಲ ಮನೆಯಲ್ಲಿ ಮಾತ್ರವಲ್ಲ, ಹೊರಗೆ ಹೋದಾಗಲೂ ನಮಗೆ ತಿಳಿಯದಂತೆ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕೈಗೆ ಅಂಟಿಸಿಕೊಳ್ಳುತ್ತೇವೆ:
ಶಾಪಿಂಗ್ ಕಾರ್ಟ್ ಹ್ಯಾಂಡಲ್: ಸೂಪರ್‌ಮಾರ್ಕೆಟ್‌ಗಳಲ್ಲಿ ಸಾವಿರಾರು ಜನರು ಮುಟ್ಟುವ ಈ ಹ್ಯಾಂಡಲ್ ಮೇಲೆ ಟಾಯ್ಲೆಟ್ ಸೀಟ್‌ಗಿಂತ 360 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಇರುತ್ತದೆ.
ದಿನವೂ ನೂರಾರು ಜನರು ಬಳಸುವ ಎಟಿಎಂ ಕೀಪ್ಯಾಡ್‌ಗಳ ಮೇಲೆ 100 ಪಟ್ಟು ಹೆಚ್ಚು ಕ್ರಿಮಿಗಳು ಇರುತ್ತವೆ.
ಲಿಫ್ಟ್ ಬಟನ್‌ಗಳು: ಆಫೀಸ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿನ ಲಿಫ್ಟ್ ಬಟನ್‌ಗಳ ಮೇಲೆ 40 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಇರುತ್ತದೆ.
ರೆಸ್ಟೋರೆಂಟ್ ಮೆನು ಕಾರ್ಡ್: ಹೋಟೆಲ್‌ಗಳಲ್ಲಿ ಸ್ವಚ್ಛಗೊಳಿಸದ ಮೆನು ಕಾರ್ಡ್‌ಗಳ ಮೇಲೆ 30 ಪಟ್ಟು ಹೆಚ್ಚು ಕ್ರಿಮಿಗಳು ಇರುತ್ತವೆ.
ಡೋರ್ ಹ್ಯಾಂಡಲ್‌ಗಳು: ಸಾರ್ವಜನಿಕ ಸ್ಥಳಗಳಲ್ಲಿನ ಬಾಗಿಲುಗಳ ಹಿಡಿಕೆಗಳ ಮೇಲೆ 20 ಪಟ್ಟು ಹೆಚ್ಚು ಬ್ಯಾಕ್ಟೀರಿಯಾ ಶೇಖರಣೆಯಾಗುತ್ತದೆ.
56
ಈ ಕಣ್ಣಿಗೆ ಕಾಣದ ಕ್ರಿಮಿಗಳ ದಾಳಿಯಿಂದ ಬಚಾವಾಗುವುದು ಹೇಗೆ?
ಸ್ಪಾಂಜ್ ಬದಲಿಸುವುದು: ಪಾತ್ರೆ ತೊಳೆಯುವ ಕಿಚನ್ ಸ್ಪಾಂಜ್ ಅನ್ನು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಹೊಸದನ್ನು ಬಳಸಬೇಕು.
ಪ್ರತ್ಯೇಕ ಕಟಿಂಗ್ ಬೋರ್ಡ್‌ಗಳು: ಹಸಿ ಮಾಂಸ (ಚಿಕನ್/ಮಟನ್) ಕತ್ತರಿಸಲು ಒಂದು ಬೋರ್ಡ್, ತರಕಾರಿ ಅಥವಾ ಹಣ್ಣುಗಳಿಗಾಗಿ ಇನ್ನೊಂದು ಬೋರ್ಡ್ ಅನ್ನು ಪ್ರತ್ಯೇಕವಾಗಿ ಬಳಸಿ.
ಮೊಬೈಲ್ ಫೋನ್ ಸ್ವಚ್ಛತೆ: ನಾವು ದಿನವಿಡೀ ಹಿಡಿದುಕೊಳ್ಳುವ ಫೋನ್ ಸ್ಕ್ರೀನ್ ಅನ್ನು ನಿಯಮಿತವಾಗಿ ಡಿಸಿನ್ಫೆಕ್ಟೆಂಟ್ ವೈಪ್ಸ್‌ನಿಂದ ಸ್ವಚ್ಛಗೊಳಿಸಬೇಕು.
ಟವಲ್‌ಗಳ ಬದಲಾವಣೆ: ಕಿಚನ್ ಟವಲ್‌ಗಳು ಮತ್ತು ಕೈ ಒರೆಸುವ ಟವಲ್‌ಗಳನ್ನು ಪ್ರತಿ 2-3 ದಿನಗಳಿಗೊಮ್ಮೆ ಬಿಸಿ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.
66
ಕೈಗಳ ಸ್ವಚ್ಛತೆ:
ಹೊರಗಿನಿಂದ ಮನೆಗೆ ಬಂದ ತಕ್ಷಣ ಮತ್ತು ಅಡುಗೆ ಆರಂಭಿಸುವ ಮೊದಲು, ಕೈಗಳನ್ನು ಸೋಪು ಅಥವಾ ಹ್ಯಾಂಡ್‌ವಾಶ್‌ನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಚೆನ್ನಾಗಿ ತೊಳೆಯಬೇಕು.
ಮನೆಯನ್ನು ಕ್ರಿಮಿ ರಹಿತವಾಗಿಡಲು ರಾಸಾಯನಿಕಗಳಲ್ಲದೆ, ಸ್ಯಾನಿಟೈಸಿಂಗ್ ಸ್ಪ್ರೇಗಳು, ಡಿಸಿನ್ಫೆಕ್ಟೆಂಟ್ ವೈಪ್ಸ್, ಅಥವಾ ನೈಸರ್ಗಿಕವಾದ ವಿನೆಗರ್, ನಿಂಬೆರಸ, ಟೀ ಟ್ರೀ ಆಯಿಲ್ ಹನಿಗಳನ್ನು ಬಳಸಿ ಸುಲಭವಾಗಿ ಸ್ವಚ್ಛಗೊಳಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.