ಅಡುಗೆ ಮನೆ ಸ್ವಚ್ಛತೆ ಬಹಳ ಮುಖ್ಯ. ಇದು ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಕಿಚನ್ ಟವೆಲ್ ಗಳನ್ನು ನಾವು ದಿನಕ್ಕೆ ಹತ್ತಾರು ಬಾರಿ ಬಳಕೆ ಮಾಡ್ತೇವೆ. ಎಣ್ಣೆ, ಮಸಾಲೆ ಜಿಡ್ಡು ಇರುವ ಈ ಬಟ್ಟೆ ಎಷ್ಟೇ ಕ್ಲೀನ್ ಮಾಡಿದ್ರೂ ಹೋಗೋದಿಲ್ಲ. ಅದಕ್ಕೆ ಸುಲಭ ಟಿಪ್ಸ್ ಇಲ್ಲಿದೆ.
ಅಡುಗೆ ಮಾಡುವಾಗ ಎಣ್ಣೆ, ಮಸಾಲೆ ಮತ್ತು ಆಹಾರದ ಕಲೆಗಳು ಕಿಚನ್ ಟವೆಲ್ಗಳಿಗೆ ಅಂಟಿಕೊಳ್ಳುತ್ತವೆ. ಸಾಮಾನ್ಯವಾಗಿ ಸೋಪು ಹಚ್ಚಿ ತೊಳೆದರೂ ಈ ಜಿಡ್ಡು ಸಂಪೂರ್ಣವಾಗಿ ಹೋಗುವುದಿಲ್ಲ. ಕೆಲವು ದಿನಗಳ ನಂತರ ಟವೆಲ್ ದುರ್ವಾಸನೆ ಬರಲು ಶುರುವಾಗುತ್ತದೆ. ಇದ್ರಿಂದ ರೋಗಗಳು ಹರಡುವ ಅಪಾಯವಿರುತ್ತದೆ.
24
ಕುದಿಯುವ ನೀರು ಮತ್ತು ಬೇಕಿಂಗ್ ಸೋಡಾ
ಒಂದು ಪಾತ್ರೆಯಲ್ಲಿ ನೀರು ಕುದಿಸಿ, ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಮತ್ತು ಒಂದು ಚಮಚ ಡಿಶ್ವಾಶ್ ಲಿಕ್ವಿಡ್ ಹಾಕಿ. ಜಿಡ್ಡಾದ ಟವೆಲ್ಗಳನ್ನು ಇದರಲ್ಲಿ 15–20 ನಿಮಿಷ ಇಡಿ. ನಂತರ ಸಾಮಾನ್ಯವಾಗಿ ತೊಳೆದರೆ ಟವೆಲ್ನಲ್ಲಿರುವ ಎಣ್ಣೆ ಮತ್ತು ಕೊಳೆ ಸಡಿಲವಾಗುತ್ತದೆ.
34
ವಿನೆಗರ್ನಿಂದ ಕೆಟ್ಟ ವಾಸನೆ ಕಡಿಮೆ
ಕಿಚನ್ ಟವೆಲ್ ತೊಳೆಯುವಾಗ ಫ್ಯಾಬ್ರಿಕ್ ಸಾಫ್ಟನರ್ ಬಳಸುವುದನ್ನು ತಪ್ಪಿಸಿ. ಅದರ ಬದಲು ವಾಷಿಂಗ್ ಸಮಯದಲ್ಲಿ ಅರ್ಧ ಕಪ್ ಬಿಳಿ ವಿನೆಗರ್ ಹಾಕಬಹುದು. ಇದು ಟವೆಲ್ನಲ್ಲಿರುವ ಕೆಟ್ಟ ವಾಸನೆ ಕಡಿಮೆಯಾಗಲು ಸಹಾಯ ಮಾಡುತ್ತದೆ. ಟವೆಲ್ ನಲ್ಲಿ ತುಂಬಾ ಎಣ್ಣೆಯ ಕಲೆ ಇದ್ದರೆ ನೇರವಾಗಿ ವಾಷಿಂಗ್ ಮೆಷಿನ್ಗೆ ಹಾಕಬೇಡಿ. ಕಲೆ ಇರುವ ಜಾಗಕ್ಕೆ ಸ್ವಲ್ಪ ಡಿಶ್ವಾಶ್ ಲಿಕ್ವಿಡ್ ಹಚ್ಚಿ, ಸುಮಾರು 30 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದರೆ ಜಿಡ್ಡು ಸಡಿಲವಾಗುತ್ತದೆ.
ಕಲೆ ತುಂಬಾ ಹಳೆಯದಾಗಿದ್ದರೆ ವಾಷಿಂಗ್ ಸೋಡಾಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಕಲೆ ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ಚೆನ್ನಾಗಿ ತೊಳೆದರೆ ಹಳೆಯ ಜಿಡ್ಡು ಮತ್ತು ಕೊಳೆ ಕಡಿಮೆಯಾಗಬಹುದು. ಟವೆಲ್ ತೊಳೆದ ನಂತರ ಒದ್ದೆ ಇರುವಾಗ್ಲೇ ಅದನ್ನು ತೆಗೆದಿಡಬೇಡಿ. ಸಾಧ್ಯವಾದರೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಹೀಗೆ ಮಾಡುವುದರಿಂದ ತೇವದ ವಾಸನೆ ಕಡಿಮೆಯಾಗುತ್ತದೆ. ಟವೆಲ್ ಹೆಚ್ಚು ಫ್ರೆಶ್ ಆಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.