ಎರಡು ದಿನಗಳಲ್ಲಿ ಮಕ್ಕಳಿಗೆ ಶಾಲೆ ಆರಂಭ ಆಗುತ್ತದೆ. ಮಕ್ಕಳ ಲಂಚ್ ಬಾಕ್ಸ್‌ಗೆ ಕಳಿಸುವ ಸೇಬು ಹಣ್ಣು ಕಪ್ಪಾಗುತ್ತದೆ ಹೀಗಾಗಿ ಮಕ್ಕಳು ಅದನ್ನು ತಿನ್ನುವುದಿಲ್ಲ ಎಂಬ ಚಿಂತೆ ಬಿಟ್ಟುಬಿಡಿ. ಈ ಸಿಂಪಲ್ ಟಿಪ್ಸ್ ಬಳಸಿ ಸೇಬು ಹಣ್ಣನ್ನು ತಾಜಾ ಆಗಿರಿಸಿ.
ಒಂದು ಲೋಟ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಹಿಂಡಿ. ನಂತರ ಕತ್ತರಿಸಿದ ಸೇಬಿನ ತುಂಡುಗಳನ್ನು ಈ ನೀರಿನಲ್ಲಿ ಅದ್ದಿ ತೆಗೆಯಿರಿ. ಇದು ಸೇಬು ಕಪ್ಪಾಗುವುದನ್ನು ತಡೆಯುತ್ತದೆ.
25
ಜೇನುತುಪ್ಪದ ನೀರು
ಒಂದು ಲೋಟ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ, ಕತ್ತರಿಸಿದ ಸೇಬಿನ ತುಂಡುಗಳನ್ನು ಈ ನೀರಿನಲ್ಲಿ ಅದ್ದಿ ತೆಗೆದರೆ ಸಾಕು.
35
ಉಪ್ಪು ನೀರು
ಸೇಬು ಕಪ್ಪಾಗುವುದನ್ನು ತಡೆಯಲು ಉಪ್ಪು ನೀರನ್ನು ಕೂಡ ಬಳಸಬಹುದು. ಒಂದು ಲೋಟ ತಣ್ಣೀರಿಗೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕರಗಿಸಿ. ನಂತರ ಸೇಬಿನ ತುಂಡುಗಳನ್ನು ಇದರಲ್ಲಿ ಅದ್ದಿ ತೆಗೆಯಿರಿ.
ಕತ್ತರಿಸಿದ ಸೇಬಿನ ತುಂಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ, ತೇವವಾದ ಪೇಪರ್ ಟವೆಲ್‌ನಿಂದ ಸುತ್ತಿ ಇಡಬಹುದು. ಇದು ಸೇಬು ಕಪ್ಪಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
55
ಮುಂಚಿತವಾಗಿ ಕತ್ತರಿಸಬೇಡಿ
ಸೇಬನ್ನು ತಿನ್ನುವ ಸ್ವಲ್ಪ ಸಮಯದ ಮುಂಚೆ ಮಾತ್ರ ಕತ್ತರಿಸಿ. ಹೀಗೆ ಮಾಡುವುದರಿಂದ ಅದು ಬೇಗನೆ ಕಪ್ಪಾಗುವುದನ್ನು ತಪ್ಪಿಸಬಹುದು. ಮೊದಲೇ ಕತ್ತರಿಸಿ ಇಡುವುದರಿಂದ ಸೇಬಿನ ಬಣ್ಣ ಬದಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.