Lemon preservation tips: ಅರ್ಧ ಕತ್ತರಿಸಿದ ನಿಂಬೆಹಣ್ಣು ಫ್ರಿಡ್ಜ್‌ನಲ್ಲಿಟ್ಟರೂ ಒಣಗುತ್ತಿದೆಯೇ? ಹಾಗಿದ್ದರೆ ಸುಲಭವಾದ ಈ 4 ಟಿಪ್ಸ್‌ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ಮನೆಯ ನಿಂಬೆಹಣ್ಣು ವಾರಗಳ ಕಾಲ ರಸಭರಿತವಾಗಿ ಮತ್ತು ತಾಜಾವಾಗಿರುತ್ತದೆ.
ಆ ಟಿಪ್ಸ್ ಯಾವುವು? ಅಡುಗೆ ಮನೆಯಲ್ಲಿ ಅರ್ಧ ಸೀಳಿದ ನಿಂಬೆಹಣ್ಣನ್ನು ಹಾಗೆಯೇ ಇಟ್ಟರೆ ಅದು ಬೇಗ ಒಣಗುವುದಲ್ಲದೆ ಕಪ್ಪಾಗಿ ಹೋಗುತ್ತದೆ. ನಿಂಬೆಹಣ್ಣಿನ ತುಂಡುಗಳನ್ನು ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿಡಲು ಕೆಲವು ಸುಲಭವಾದ ಮನೆಮದ್ದುಗಳಿವೆ. ನಿಂಬೆಹಣ್ಣಿನ ಬೆಲೆ ಹೆಚ್ಚಾಗಿರುವ ಈ ದಿನಗಳಲ್ಲಿ ಇಂತಹ ಟಿಪ್ಸ್‌ಗಳನ್ನು ಪಾಲಿಸುವುದರಿಂದ ಹಣವನ್ನೂ ಉಳಿಸಬಹುದು. ಹಾಗಿದ್ದರೆ ತಡ ಮಾಡದೆ ಆ ಟಿಪ್ಸ್‌ಗಳು ಯಾವುವು ಎಂದು ನೋಡೋಣ ಬನ್ನಿ.
26
ಅದ್ಭುತ ಕಿಚನ್ ಹ್ಯಾಕ್ಸ್
ಅದ್ಭುತ ಕಿಚನ್ ಹ್ಯಾಕ್ಸ್ ನಮ್ಮ ಅಡುಗೆ ಮನೆಯಲ್ಲಿ ನಿಂಬೆಹಣ್ಣಿನ ಬಳಕೆ ತುಂಬಾ ಹೆಚ್ಚು. ಅಡುಗೆಗೆ, ಸಲಾಡ್‌ಗಳಿಗೆ ಅಥವಾ ಕ್ಲೀನಿಂಗ್‌ಗಾಗಿ ಪದೇ ಪದೇ ನಿಂಬೆಹಣ್ಣನ್ನು ಬಳಸುತ್ತೇವೆ. ಆದರೆ, ಹೆಚ್ಚಿನ ಬಾರಿ ನಮಗೆ ಅರ್ಧ ನಿಂಬೆಹಣ್ಣು ಮಾತ್ರ ಬೇಕಾಗುತ್ತದೆ. ಉಳಿದ ಅರ್ಧವನ್ನು ಫ್ರಿಡ್ಜ್‌ನಲ್ಲಿ ಅಥವಾ ಹೊರಗಡೆ ಹಾಗೆಯೇ ಇಡುತ್ತೇವೆ. ಹೀಗೆ ಮಾಡುವುದರಿಂದ ಕೇವಲ ಕೆಲವು ಗಂಟೆಗಳಲ್ಲಿ ನಿಂಬೆಹಣ್ಣಿನ ಮೇಲ್ಪದರ ಒಣಗಿ, ರಸ ಕಡಿಮೆಯಾಗುತ್ತದೆ. ಕೆಲವೊಮ್ಮೆ ಅದು ಕಪ್ಪಾಗಿ ಬೂಸ್ಟು ಬರುತ್ತದೆ. ಇಂತಹ ಸಮಸ್ಯೆ ಬರದಂತೆ, ಸೀಳಿದ ನಿಂಬೆಹಣ್ಣನ್ನು ವಾರಗಳ ಕಾಲ ಫ್ರೆಶ್ ಆಗಿಡಲು ಇರುವ ಕೆಲವು ಅದ್ಭುತ ಕಿಚನ್ ಹ್ಯಾಕ್ಸ್ ಇಲ್ಲಿದೆ.
36
ಅಲ್ಯೂಮಿನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ರಾಪ್
ಅಲ್ಯೂಮಿನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ರಾಪ್ ಅರ್ಧ ಸೀಳಿದ ನಿಂಬೆಹಣ್ಣನ್ನು ಪ್ಲಾಸ್ಟಿಕ್ ಕ್ಲಿಂಗ್ ಫಿಲ್ಮ್ (Plastic Wrap) ಅಥವಾ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಗಾಳಿ ಹೋಗದಂತೆ ಬಿಗಿಯಾಗಿ ಸುತ್ತಿಡಿ. ಹೀಗೆ ಮಾಡುವುದರಿಂದ ನಿಂಬೆಹಣ್ಣಿನಲ್ಲಿರುವ ತೇವಾಂಶ ಆವಿಯಾಗುವುದಿಲ್ಲ. ನಂತರ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ನಾಲ್ಕೈದು ದಿನಗಳವರೆಗೆ ಈಗ ತಾನೇ ಕತ್ತರಿಸಿದಂತೆ ತಾಜಾವಾಗಿರುತ್ತದೆ.
ನೀರಿನ ಬಟ್ಟಲಿನ ಟಿಪ್ಸ್ ಇದು ತುಂಬಾ ಸುಲಭವಾದ ಮತ್ತು ಹಳೆಯ ಕಾಲದ ಪದ್ಧತಿ. ಒಂದು ಸಣ್ಣ ಬಟ್ಟಲು ಅಥವಾ ಗಾಜಿನ ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಳ್ಳಿ. ಕತ್ತರಿಸಿದ ನಿಂಬೆಹಣ್ಣಿನ ಒಳಭಾಗ (ರಸ ಇರುವ ಭಾಗ) ನೀರಿನಲ್ಲಿ ಮುಳುಗುವಂತೆ ಬೋರಲಾಗಿ ಇಡಿ. ನಂತರ ಆ ಬಟ್ಟಲನ್ನು ಫ್ರಿಡ್ಜ್‌ನಲ್ಲಿ ಇಡಿ. ಈ ಟಿಪ್ಸ್‌ನಿಂದ ನಿಂಬೆಹಣ್ಣು ಸುಮಾರು ಒಂದು ವಾರದವರೆಗೆ ಒಣಗದೆ ಅಥವಾ ಕೊಳೆಯದೆ ಇರುತ್ತದೆ. ಆದರೆ ದಿನಕ್ಕೊಮ್ಮೆ ನೀರನ್ನು ಬದಲಾಯಿಸುತ್ತಿರಬೇಕು.
56
ಅಡುಗೆ ಎಣ್ಣೆ ಅಥವಾ ವಿನೆಗರ್ ಹಚ್ಚುವುದು
ಅಡುಗೆ ಎಣ್ಣೆ ಅಥವಾ ವಿನೆಗರ್ ಹಚ್ಚುವುದು ನಿಂಬೆಹಣ್ಣಿನ ಕತ್ತರಿಸಿದ ಭಾಗಕ್ಕೆ ಒಂದು ಅಥವಾ ಎರಡು ಹನಿ ಅಡುಗೆ ಎಣ್ಣೆ (ಆಲಿವ್ ಆಯಿಲ್ ಅಥವಾ ರಿಫೈನ್ಡ್ ಆಯಿಲ್) ಅಥವಾ ಬಿಳಿ ವಿನೆಗರ್ ಹಚ್ಚಿ. ಇದು ನಿಂಬೆಹಣ್ಣಿನ ಮೇಲೆ ರಕ್ಷಣಾತ್ಮಕ ಪದರದಂತೆ ಕೆಲಸ ಮಾಡಿ ಗಾಳಿ ಸೋಕದಂತೆ ತಡೆಯುತ್ತದೆ. ನಂತರ ಅದನ್ನು ಒಂದು ಏರ್ ಟೈಟ್ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಟ್ಟರೆ ಹೆಚ್ಚು ದಿನಗಳ ಕಾಲ ಹಾಳಾಗುವುದಿಲ್ಲ.
66
ಜಿಪ್ ಲಾಕ್ ಬ್ಯಾಗ್‌ಗಳು
ಜಿಪ್ ಲಾಕ್ ಬ್ಯಾಗ್‌ಗಳು ನೀವು ನಿಂಬೆಹಣ್ಣನ್ನು ತುಂಡುಗಳಾಗಿ ಕತ್ತರಿಸಿ ಸಂಗ್ರಹಿಸಬೇಕೆಂದಿದ್ದರೆ, ಅವುಗಳನ್ನು ಒಂದು ಜಿಪ್ ಲಾಕ್ ಬ್ಯಾಗ್‌ಗೆ ಹಾಕಿ, ಅದರಲ್ಲಿರುವ ಗಾಳಿಯನ್ನು ಪೂರ್ತಿಯಾಗಿ ಹೊರಹಾಕಿ ಸೀಲ್ ಮಾಡಿ. ಈ ಪುಟ್ಟ ಟಿಪ್ಸ್‌ಗಳನ್ನು ಪಾಲಿಸುವುದರಿಂದ ಅಡುಗೆ ಮನೆಯಲ್ಲಿ ನಿಂಬೆಹಣ್ಣು ವ್ಯರ್ಥವಾಗದಂತೆ ನೋಡಿಕೊಳ್ಳಬಹುದು ಮತ್ತು ಬೇಕಾದಾಗ ಫ್ರೆಶ್ ಆಗಿ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.