Salt Storage Tips : ಅಡುಗೆ ಮಾಡುವಾಗ ಉಪ್ಪನ್ನು ನಾವು ಪದೇಪದೇ ಬಳಸ್ತೇವೆ. ಹಾಗಾಗಿ ಗ್ಯಾಸ್ ಸ್ಟೌವ್ ಪಕ್ಕದಲ್ಲೇ ಉಪ್ಪಿನ ಡಬ್ಬ ಇಡುವ ಅಭ್ಯಾಸ ಅನೇಕರಿಗಿದೆ. ಕೈಗೆ ಸಿಗುವ ಜಾಗದಲ್ಲಿ ಉಪ್ಪಿದ್ದರೆ ಕೆಲಸ ಸುಲಭ ಅನ್ನೋದು ಎಲ್ಲರ ಅಭಿಪ್ರಾಯ. ಆದ್ರೆ ಇದು ಒಳ್ಳೆ ಅಭ್ಯಾಸವಲ್ಲ.
ಉಪ್ಪು ಸಾಮಾನ್ಯವಾಗಿ ಹಾಳಾಗುವ ವಸ್ತುವಲ್ಲ. ಸಾಮಾನ್ಯ ಉಪ್ಪು, ಅಂದರೆ ಸೋಡಿಯಂ ಕ್ಲೋರೈಡ್ ದೀರ್ಘಕಾಲದವರೆಗೆ ಸುರಕ್ಷಿತವಾಗಿರುತ್ತದೆ. ಆದ್ರೆ ಉಪ್ಪು ಒಂದು ವಿಶೇಷ ಗುಣವನ್ನು ಹೊಂದಿದೆ. ಇದು ಗಾಳಿಯಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಸರಿಯಾಗಿ ಸಂಗ್ರಹಿಸದಿದ್ದರೆ, ಉಪ್ಪು ಉಂಡೆಯಾಗುತ್ತದೆ. ಅಡುಗೆ ಮಾಡುವಾಗ ಗ್ಯಾಸ್ ಸುತ್ತಲೂ ಶಾಖ ಇರುತ್ತೆ. ಇದ್ರ ಜೊತೆ ನೀರಿನ ಆವಿ ಮತ್ತು ತೇವಾಂಶ ಇರುತ್ತೆ. ಉಪ್ಪು ಗಾಳಿಯಲ್ಲಿರುವ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಹೀಗಾಗಿ ಗ್ಯಾಸ್ ಪಕ್ಕದಲ್ಲೇ ಉಪ್ಪಿನ ಡಬ್ಬಿ ಇಟ್ಟರೆ, ಉಪ್ಪಿನ ಕಾಳುಗಳು ಒಂದಕ್ಕೊಂದು ಅಂಟಿಕೊಂಡು ಗಟ್ಟಿಯಾಗಬಹುದು. ತಕ್ಷಣ ಉಪ್ಪು ಹಾಳಾಗುತ್ತದೆ ಎಂದಲ್ಲ. ನೀವು ಸರಿಯಾಗಿ ಮುಚ್ಚಳ ಮುಚ್ಚಿಲ್ಲ ಎಂದ್ರೆ ಬೇಗ ಹಾಳಾಗುವ ಸಾಧ್ಯತೆ ಹೆಚ್ಚು.
24
ಸಿಂಕ್ ಪಕ್ಕದಲ್ಲೂ ಇಡಬೇಡಿ
ಗ್ಯಾಸ್ ಮಾತ್ರವಲ್ಲ, ಸಿಂಕ್ ಪಕ್ಕದಲ್ಲೂ ಉಪ್ಪು ಇಡುವುದು ಒಳ್ಳೆಯದಲ್ಲ. ಪಾತ್ರೆ ತೊಳೆಯುವಾಗ ಬೀಳುವ ನೀರಿನ ಹನಿಗಳು ಮತ್ತು ಅಲ್ಲಿರುವ ಹೆಚ್ಚಿನ ತೇವಾಂಶದಿಂದ ಉಪ್ಪು ಬೇಗನೆ ತೇವವಾಗಬಹುದು. ಆದ್ದರಿಂದ ಗ್ಯಾಸ್ ಮತ್ತು ಸಿಂಕ್ನಿಂದ ಸ್ವಲ್ಪ ದೂರದಲ್ಲಿರುವ ಒಣ ಕ್ಯಾಬಿನೆಟ್ ಅಥವಾ ಶೆಲ್ಫ್ನಲ್ಲಿ ಉಪ್ಪನ್ನು ಇಡುವುದು ಉತ್ತಮ.
34
ಉಪ್ಪನ್ನು ಹೇಗೆ ಸಂಗ್ರಹಿಸಬೇಕು?
ಉಪ್ಪನ್ನು ಗಾಳಿಯಾಡದಂತೆ ಮುಚ್ಚಳ ಚೆನ್ನಾಗಿ ಮುಚ್ಚುವ ಡಬ್ಬಿಯಲ್ಲಿ ಇಡಿ. ಗಾಜು, ಸೆರಾಮಿಕ್ ಅಥವಾ ಉತ್ತಮ ಗುಣಮಟ್ಟದ ಫುಡ್-ಗ್ರೇಡ್ ಪ್ಲಾಸ್ಟಿಕ್ ಡಬ್ಬಿ ಬಳಸಬಹುದು. ಉಪ್ಪು ತೆಗೆದುಕೊಳ್ಳುವಾಗ ಯಾವಾಗಲೂ ಒಣ ಚಮಚವನ್ನೇ ಬಳಸಿ. ಒದ್ದೆಯಾದ ಚಮಚ ಬಳಸಿದರೆ ಉಪ್ಪಿಗೆ ನೇರವಾಗಿ ತೇವಾಂಶ ಸೇರುತ್ತದೆ.
ಉಪ್ಪಿನಲ್ಲಿ ಸಣ್ಣಪುಟ್ಟ ಗಂಟುಗಳಾಗಿದ್ದರೆ, ಸ್ವಚ್ಛವಾಗಿದ್ದರೆ ಅದನ್ನು ಎಸೆಯುವ ಅಗತ್ಯವಿಲ್ಲ. ಚಮಚದ ಸಹಾಯದಿಂದ ಗಂಟುಗಳನ್ನು ಒಡೆದು ಬಳಸಬಹುದು. ಕೆಲವರು ಸ್ವಲ್ಪ ಒಣ ಅಕ್ಕಿಯನ್ನು ಉಪ್ಪಿನ ಡಬ್ಬಿಯಲ್ಲಿ ಇಡುತ್ತಾರೆ. ಆದರೆ ಅದಕ್ಕಿಂತ ಮುಖ್ಯವಾಗಿ ಡಬ್ಬಿ ಒಣವಾಗಿರುವಂತೆ ನೋಡಿಕೊಳ್ಳಿ ಮತ್ತು ಮುಚ್ಚಳವನ್ನು ಸರಿಯಾಗಿ ಮುಚ್ಚಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.