Sweet Potato Chips Recipe: ಡೀಪ್ ಫ್ರೈ ಮಾಡ್ಬೇಕಾಗಿಲ್ಲ, ಸಿಂಪಲ್ ಆಗಿ ರುಚಿ ಹೆಚ್ಚಿಸುವ ಸಿಹಿ ಗೆಣಸಿನ ರೆಸಿಪಿ

Published : Jan 08, 2026, 03:32 PM IST

ಚಳಿ ಹೆಚ್ಚಾಗ್ತಿದ್ದಂತೆ ಬಿಸಿ ಬಿಸಿ ಟೀ ಕುಡಿಯೋ ಮನಸ್ಸಾಗುತ್ತೆ. ಟೀ ಜೊತೆ ಚಿಪ್ಸ್ ತಿನ್ನೋ ಬಯಕೆ ಕಾಮನ್.  ಟೀ, ಕಾಫಿ ಜೊತೆ ತಿನ್ನೋಕೆ ನೀವು ಮನೆಯಲ್ಲೇ ರುಚಿಯಾದ ಸಿಹಿ ಗೆಣಸಿನ ಚಿಪ್ಸ್ ಮಾಡ್ಕೊಳ್ಬಹುದು. ಡೀಪ್ ಫ್ರೈ ಮಾಡದೆ ಸಿಂಪಲ್ ಆಗಿ ಮಾಡೋದು ಹೇಗೆ ಗೊತ್ತಾ?

PREV
16
ಸಿಹಿ ಗೆಣಸಿನ ಚಿಪ್ಸ್

ಆಲೂಗಡ್ಡೆ ಚಿಪ್ಸ್ ಗಿಂತ ಸಿಹಿ ಗೆಣಸಿನ ಚಿಪ್ಸ್ ರುಚಿಯಲ್ಲಿ ಒಂದು ಕೈ ಮುಂದಿದೆ. ಡೀಪ್ ಫ್ರೈ ಮಾಡಿದ್ರೆ ತುಂಬಾ ಚಿಪ್ಸ್ ತಿನ್ನೋದು ಕಷ್ಟ. ಉಪವಾಸದ ಟೈಂನಲ್ಲಿ ಆರೋಗ್ಯಕರ ಆಹಾರ ತಿನ್ನಬೇಕು ಎನ್ನುವವರಿಗೆ ಈ ಸಿಹಿ ಗೆಣಸಿನ ಚಿಪ್ಸ್ ಒಳ್ಳೆಯದು. ಕಬ್ಬಿಣದ ಪ್ಯಾನ್ ನಲ್ಲಿ ನೀವು ಇದನ್ನು ಸುಲಭವಾಗಿ ತಯಾರಿಸ್ಬಹುದು.

26
ಸಿಹಿ ಗೆಣಸಿನ ಕ್ಲೀನಿಂಗ್

ಚಿಪ್ಸ್ ತಯಾರಿಸಲು ಸರಿಯಾದ ಸಿಹಿ ಗೆಣಸನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಫೈಬರ್ ಕಡಿಮೆ ಇರುವ ಮಧ್ಯಮ ಗಾತ್ರದ ಸಿಹಿ ಗೆಣಸನ್ನು ಆರಿಸಿ. ಸಿಹಿ ಗೆಣಸು ನೆಲದಡಿಯಲ್ಲಿ ಬೆಳೆಯುವುದ್ರಿಂದ ಮಣ್ಣು ಹೆಚ್ಚಿರುತ್ತದೆ. ಹಾಗಾಗಿ ಅದನ್ನು ಕ್ಲೀನ್ ಮಾಡುವಾಗ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ. ಸಿಹಿ ಗೆಣಸನ್ನು ತೊಳೆದ ನಂತರ, ಸ್ವಚ್ಛವಾದ, ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ.

36
ಚಿಪ್ಸ್ ಆಕಾರಕ್ಕೆ ಕತ್ತರಿಸಿ

ಸಿಹಿ ಗೆಣಸನ್ನು ಕ್ಲೀನ್ ಮಾಡಿದ ನಂತ್ರ ಅದರ ಸಿಪ್ಪೆ ತೆಗೆಯಿರಿ. ನಂತ್ರ ಚಿಪ್ಸ್ ಆಕಾರಕ್ಕೆ ಸಿಹಿ ಗೆಣಸನ್ನು ಕತ್ತರಿಸಿ. ಇದಕ್ಕೆ ಹರಿತವಾದ ಚಾಕು ಬಳಸಿ. ಕತ್ತರಿಸಿದ ಚಿಪ್ಸ್ ತುಂಬಾ ದಪ್ಪ ಅಥವಾ ತುಂಬ ತೆಳ್ಳಗಿರಬಾರದು. ಒಂದೇ ಗಾತ್ರದಲ್ಲಿ ಕತ್ತರಿಸಿದಾಗ ನಿಮಗೆ ಗರಿಗರಿಯಾದ ಚಿಪ್ಸ್ ಮಾಡೋದು ಸುಲಭವಾಗುತ್ತದೆ.

46
ಬೇಯಿಸುವ ವಿಧಾನ

ಒಂದು ಪಾತ್ರೆಗೆ ನೀರನ್ನು ಹಾಕಿ, ಗ್ಯಾಸ್ ಆನ್ ಮಾಡಿ ಬಿಸಿ ಮಾಡಿ. ಬಿಸಿಯಾದ ನೀರಿಗೆ ಚಿಪ್ಸ್‌ ಆಕಾರದಲ್ಲಿ ಕತ್ತರಿಸಿದ ಸಿಹಿ ಗೆಣಸನ್ನು ಹಾಕಿ. ಅದಕ್ಕೆ ಚಿಟಿಕೆ ಉಪ್ಪನ್ನು ಹಾಕಿ. ನೀರಿನಲ್ಲಿ ಸಿಹಿ ಗೆಣಸು ಬೇಯಬೇಕು. ಆದ್ರೆ ತುಂಬಾ ಹೊತ್ತು ನೀರಿನಲ್ಲಿ ಇಡಬೇಡಿ. ಒಂದು ನಿಮಿಷ ಬಿಸಿ ನೀರಿನಲ್ಲಿ ಹಾಕಿ ತೆಗೆದರೆ ಸಾಕು. ಹೀಗೆ ಮಾಡಿದ್ರೆ ಸಿಹಿ ಗೆಣಸಿನ ಅಂಟು ಹೋಗುತ್ತದೆ. ಚಿಪ್ಸ್ ಒಳಭಾಗ ಬೇಯುವುದಲ್ಲದೆ ಹೊರ ಭಾಗ ಗರಿಯಾಗಲು ಸಹಾಯಮಾಡುತ್ತದೆ.

56
ಮುಂದಿನ ವಿಧಾನ

ನೀರಿನಲ್ಲಿ ಬೇಯಿಸಿದ ಸಿಹಿ ಗೆಣಸಿನ ಚಿಪ್ಸನ್ನು ಈಗ ಬಟ್ಟೆಯ ಮೇಲೆ ಹಾಕಿ, ನೀರು ಆರಿಸಿ. ಹತ್ತಿ ಬಟ್ಟೆಯ ಮೇಲೆ ಇದನ್ನು ಹಾಕಿದಾಗ ನೀರು ಹೀರಿಕೊಳ್ಳುತ್ತದೆ. ಇದ್ರಿಂದ ಚಿಪ್ಸ್ ಗರಿಯಾಗುತ್ತದೆ. ಸಿಹಿ ಗೆಣಸಿನಲ್ಲಿ ನೀರಿನಾಂಶ ಇದ್ದರೆ ಚಿಪ್ಸ್ ಮೃದುವಾಗುತ್ತದೆ.

66
ಕಬ್ಬಿಣದ ಪ್ಯಾನ್ ಮೇಲೆ ರೋಸ್ಟ್

ಈಗ ಒಂದು ಕಬ್ಬಿಣದ ಪ್ಯಾನ್ ತೆಗೆದುಕೊಂಡು ಅದನ್ನು ಗ್ಯಾಸ್ ಮೇಲಿಟ್ಟು, ಗ್ಯಾಸ್ ಹಚ್ಚಿ. ಕಬ್ಬಿಣದ ಪ್ಯಾನ್ ಗೆ ಎಣ್ಣೆ ಸವರಿ. ನಂತ್ರ ಕತ್ತರಿಸಿದ ಸಿಹಿ ಗೆಣಸುಗಳನ್ನು ಒಂದೊಂದಾಗಿ ಅದರ ಮೇಲೆ ಇಡಿ. ನಂತ್ರ ಸಿಹಿ ಗೆಣಸಿನ ಮೇಲೆ ಎಣ್ಣೆ ಸವರಿ. ಕಡಿಮೆ ಉರಿಯಲ್ಲಿ ನಿಧಾನವಾಗಿ ಅದನ್ನು ಬೇಯಿಸಬೇಕು. ನಂತ್ರ ಅದಕ್ಕೆ ಕಲ್ಲು ಉಪ್ಪು ಹಾಗೂ ಮಸಾಲೆಯನ್ನು ಬೆರೆಸಿ ಸರ್ವ್ ಮಾಡಬೇಕು. ಉಪವಾಸದ ಟೈಂನಲ್ಲಿ ಇದು ಒಳ್ಳೆಯದು. ಸಿಹಿ ಗೆಣಸಿನ ಘಮ ಹಾಗೆಯೇ ಇರೋದಲ್ಲದೆ ಇದ್ರ ರುಚಿ ಹೆಚ್ಚು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories