ಆಮ್ಲೆಟ್ ಪ್ಯಾನ್‌ಗೆ ಅಂಟಿಕೊಂಡ್ರೆ, ಕುದಿಯುವ ನೀರಿನಲ್ಲಿ ಮೊಟ್ಟೆ ಒಡೆದರೆ ಈ ಸೂಪರ್ ಟ್ರಿಕ್ ಟ್ರೈ ಮಾಡಿ

Published : Dec 30, 2025, 01:30 PM IST

Omelette tips and tricks: ಕೆಲವೊಮ್ಮೆ ಮೊಟ್ಟೆ ಕುದಿಯುವ ನೀರಿನಲ್ಲಿ ಒಡೆಯುತ್ತದೆ ಅಥವಾ ಆಮ್ಲೆಟ್ ಪ್ಯಾನ್‌ಗೆ ಅಂಟಿಕೊಂಡು ಹಾಳಾಗುತ್ತದೆ. ನಿಮಗೂ ಹೀಗೆ ಆಗುತ್ತಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕೆಲವು ಸರಳಾತಿಸರಳ ಮನೆಮದ್ದಿನಿಂದ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು.  

PREV
16
ಮನೆ ಕೆಲಸವನ್ನು ಸುಲಭಗೊಳಿಸುವ ಸಿಂಪಲ್ ಟ್ರಿಕ್ಸ್‌

ಮೊಟ್ಟೆಗಳನ್ನು ಬೇಯಿಸುವುದು ಅಥವಾ ಆಮ್ಲೆಟ್ ಮಾಡುವುದು ಬಹಳ ಸಿಂಪಲ್ಲಾಗಿ ಕಾಣಿಸಬಹುದು. ಆದರೆ ಸರಿಯಾದ ವಿಧಾನ ಅನುಸರಿಸದಿದ್ದರೆ ಚಿಕ್ಕ ಸಮಸ್ಯೆಯೂ ಬೃಹದಾಕಾರವಾಗಿ ಕಾಣುತ್ತದೆ. ಮತ್ತೇಕೆ ತಡ ಅಡುಗೆ ಮನೆ ಕೆಲಸವನ್ನು ಸುಲಭಗೊಳಿಸುವ ಸಿಂಪಲ್ ಟ್ರಿಕ್ಸ್‌ ಇಲ್ಲಿವೆ ನೋಡಿ..

26
ಮೊಟ್ಟೆ ಹಾಳಾಗುತ್ತೆ

ಬಹುತೇಕರ ಮನೆಗಳಲ್ಲಿ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಅಥವಾ ಮಧ್ಯಾಹ್ನ, ರಾತ್ರಿ ಊಟದ ಜೊತೆ ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ಇರಲೇಬೇಕು. ಆದರೆ ಹೀಗೆ ಮೊಟ್ಟೆ ಮಾಡುವಾಗ ಮಾಡುವ ಸಣ್ಣ ತಪ್ಪು ಕೂಡ ಇಡೀ ಮೊಟ್ಟೆ ಹಾಳಾಗಲು ಕಾರಣವಾಗಬಹುದು. ಉದಾಹರಣೆಗೆ ಕೆಲವೊಮ್ಮೆ ಮೊಟ್ಟೆ ಕುದಿಯುವ ನೀರಿನಲ್ಲಿ ಒಡೆಯುತ್ತದೆ ಅಥವಾ ಆಮ್ಲೆಟ್ ಪ್ಯಾನ್‌ಗೆ ಅಂಟಿಕೊಂಡು ಹಾಳಾಗುತ್ತದೆ.

36
ಸರಳಾತಿಸರಳ ಮನೆಮದ್ದು

ಪದೇ ಪದೇ ನಿಮಗೂ ಹೀಗೆ ಆಗುತ್ತಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಕೆಲವು ಸರಳಾತಿಸರಳ ಮನೆಮದ್ದಿನಿಂದ ನೀವು ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು.

46
ಬಿರುಕು ಬಿಡುವುದನ್ನು ತಡೆಯುವುದು ಹೇಗೆ?

ವೇಗವಾಗಿ ಕುದಿಯುವ ನೀರು ಅಥವಾ ತಾಪಮಾನದಲ್ಲಿನ ಹಠಾತ್ ಬದಲಾವಣೆಯು ನೀರಿನಲ್ಲಿ ಆಗಾಗ್ಗೆ ಮೊಟ್ಟೆಯ ಚಿಪ್ಪು ಬಿರುಕು ಬಿಡಲು ಕಾರಣವಾಗಬಹುದು. ಇದು ಮೊಟ್ಟೆಗೆ ಹಾನಿ ಮಾಡುತ್ತದೆ ಮತ್ತು ಸಿಪ್ಪೆ ಬಿಡಿಸುವುದನ್ನ ಕಷ್ಟಕರವಾಗಿಸುತ್ತದೆ.

ಪರಿಹಾರ: ಮುಂದಿನ ಬಾರಿ ಈ ರೀತಿಯಾದಾಗ ಮೊಟ್ಟೆಗಳನ್ನು ಬೇಯಿಸುವಾಗ ನೀರಿಗೆ ಒಂದು ಟೀ ಚಮಚ ಬಿಳಿ ವಿನೆಗರ್ ಸೇರಿಸಿ. ಬಿಳಿ ವಿನೆಗರ್ ಮೊಟ್ಟೆಯ ಚಿಪ್ಪನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀರಿನಲ್ಲಿ ಮೊಟ್ಟೆ ಒಡೆಯುವುದನ್ನು ತಡೆಯುತ್ತದೆ.

56
ನಾನ್‌ಸ್ಟಿಕ್ ಪ್ಯಾನ್‌ಗೆ ಅಂಟಿಕೊಳ್ಳದಂತೆ ತಡೆಯುವುದು ಹೇಗೆ?

ಮೊಟ್ಟೆಗಳು ನಾನ್‌ಸ್ಟಿಕ್ ಪ್ಯಾನ್‌ಗೆ ಅಂಟಿಕೊಂಡರೆ ಅದು ಪ್ಯಾನ್‌ನ ಲೇಪನ ಅಥವಾ ತಪ್ಪಾದ ಅಡುಗೆ ವಿಧಾನಗಳಿಂದಾಗಿರಬಹುದು.

ಪರಿಹಾರ: ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಆಮ್ಲೆಟ್ ಮಾಡುವ ಮೊದಲು ಸ್ವಲ್ಪ ಉಪ್ಪು ಸಿಂಪಡಿಸಿ. ಇದು ಮೊಟ್ಟೆ ಪ್ಯಾನ್‌ಗೆ ಅಂಟಿಕೊಳ್ಳುವುದನ್ನು ತಡೆಯುತ್ತದೆ ಮತ್ತು ನೀವು ಹೆಚ್ಚು ಎಣ್ಣೆಯನ್ನು ಸೇರಿಸುವ ಅಗತ್ಯವಿಲ್ಲ. ಈ ವಿಧಾನವು ಆರೋಗ್ಯಕರ ಅಡುಗೆಗೆ ಸಹ ಪ್ರಯೋಜನಕಾರಿಯಾಗಿದೆ.

66
ಆಮ್ಲೆಟ್ ಮಾಡುವಾಗ ಪ್ಯಾನ್‌ಗೆ ಏಕೆ ಅಂಟಿಕೊಳ್ಳುತ್ತವೆ?

ಅನೇಕ ಜನರು ಆಮ್ಲೆಟ್ ಮಾಡಲು ಪ್ಯಾನ್ ಅನ್ನು ಹೆಚ್ಚು ಬಿಸಿ ಮಾಡುತ್ತಾರೆ. ಹೆಚ್ಚು ಬಿಸಿಯಾದ ಪ್ಯಾನ್‌ಗೆ ಮೊಟ್ಟೆ ಒಡೆದು ಹಾಕುವುದರಿಂದ ಅವು ತಕ್ಷಣವೇ ಅಂಟಿಕೊಳ್ಳಬಹುದು ಮತ್ತು ಆಮ್ಲೆಟ್ ಸರಿಯಾಗಿ ಹೊರಬರದಿರಬಹುದು.

ಪರಿಹಾರ: ಮುಂದಿನ ಬಾರಿ ಆಮ್ಲೆಟ್ ಮಾಡುವಾಗ ಪ್ಯಾನ್ ಸ್ವಲ್ಪ ಬಿಸಿ ಮಾಡಿ. ಹೆಚ್ಚಿನ ಶಾಖದ ಮೇಲೆ ಅಲ್ಲ. ಸ್ವಲ್ಪ ಬಿಸಿ ಮಾಡಿದ ಪ್ಯಾನ್ ಮೊಟ್ಟೆಗಳನ್ನು ಸಮವಾಗಿ ಬೇಯಲು ಸಹಾಯ ಮಾಡುತ್ತದೆ ಮತ್ತು ಅಂಟಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories