ಈ ಲೇಖನವು ಅಡುಗೆ ಮನೆಯ ಸಾಮಾನ್ಯ ಸಮಸ್ಯೆಗಳಾದ ಪೂರಿ ಕರಿಯುವಾಗ ಎಣ್ಣೆ ಕಪ್ಪಾಗುವುದು, ಸೀದಿದ ಹಾಲಿನ ವಾಸನೆ, ಹಾಗಲಕಾಯಿ ಕಹಿ ಮತ್ತು ಸಾಂಬಾರ್ ತೆಳುವಾಗುವುದಕ್ಕೆ ಪರಿಹಾರ ನೀಡುತ್ತದೆ. ಶುಂಠಿ, ವೀಳ್ಯದ ಎಲೆ, ಮಜ್ಜಿಗೆ ಮತ್ತು ಆಲೂಗಡ್ಡೆಯಂತಹ ವಸ್ತು ಬಳಸಿ ಸಮಸ್ಯೆ ನಿವಾರಿಸಬಹುದು ಎಂದು ವಿವರಿಸಲಾಗಿದೆ.
ಅಡುಗೆ ಮನೆಯ ಕೆಲವೊಂದು ಟಿಪ್ಸ್ ಕಲಿತಿಟ್ಟುಕೊಂಡರೆ ತುಂಬಾ ಒಳ್ಳೆಯದು. ಅಡುಗೆ ಮನೆಯ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ. ಆದರೆ ಅದು ತಿಳಿದಿರುವುದಿಲ್ಲವಷ್ಟೇ. ಅಂಥ ಕೆಲವು ಟಿಪ್ಸ್ಗಳನ್ನು ಇಲ್ಲಿ ನೀಡಲಾಗಿದೆ
25
ಪೂರಿ ಮಾಡುವಾಗ ಎಣ್ಣೆ ಕಪ್ಪಾಗದೇ ಇರಲು
ಪೂರಿ ಮಾಡುವ ಸಮಯದಲ್ಲಿ ಹೆಚ್ಚು ಪೂರಿ ಮಾಡುತ್ತಿದ್ದಂತೆಯೇ ಎಣ್ಣೆ ಕಪ್ಪಾಗಲು ಶುರುವಾಗುತ್ತದೆ. ಇದರಿಂದ ಹಲವು ಪೂರಿಗಳನ್ನು ಮಾಡುವುದು ಕಷ್ಟವಾಗುತ್ತದೆ. ಪೂರಿಯ ಮೇಲುಗಡೆ ಕಪ್ಪು ಬಣ್ಣ ಕುಳಿತುಕೊಂಡು, ನೋಡಲು ತಿನ್ನಲು ಅಸಹ್ಯ ಎನ್ನಿಸುತ್ತದೆ. ಈ ಸಮಯದಲ್ಲಿ ಒಂದೊಳ್ಳೆ ಟಿಪ್ಸ್ ಇದೆ. ಅದೇನೆಂದರೆ ಎಣ್ಣೆಯಲ್ಲಿ ಒಂದು ಚಿಕ್ಕ ಶುಂಠಿಯ ತುಂಡನ್ನು ಹಾಕಿ ಬಳಿಕ ಎಣ್ಣೆಯಲ್ಲಿ ಪೂರಿಯನ್ನು ಕರಿಯಿರಿ. ಹೀಗೆ ಮಾಡಿದರೆ ಕಪ್ಪು ಬಣ್ಣ ಬರುವುದೇ ಇಲ್ಲ.
35
ಸೀದಿದ ಹಾಲಿನ ವಾಸನೆ ಹೋಗಲು
ಹಾಲು ಸೀದು ಹೋದರೆ, ಕೆಟ್ಟ ವಾಸನೆ ಬರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಹಾಲನ್ನು ಇಟ್ಟು ಹೋಗಿ ಬಿಡುತ್ತೇವೆ.ಏನೋ ಕೆಲಸ ಬಂದಾಗ ಅದು ಮರೆತೇ ಹೋಗುತ್ತದೆ. ಆ ಸಮಯದಲ್ಲಿ, ಹಾಲು ಕತ್ತು ಹೋಗುತ್ತದೆ ಅರ್ಥಾತ್ ಸೀದು ಹೋಗುತ್ತದೆ. ಆಗ ವಾಸನೆ ಬರುತ್ತದೆ. ಅದನ್ನು ಹೋಗಲಾಡಿಸಲು, ಸೀದು ಹೋಗಿರುವ ಹಾಲಿಗೆ 2-3 ವೀಳ್ಯದ ಎಲೆಯನ್ನು ಹಾಕಿ ಕುದಿಸಿ. ಹೀಗೆ ಮಾಡಿದರೆ, ವಾಸನೆ ಬರುವುದಿಲ್ಲ.
ಹಾಗಲಕಾಯಿ ಕಹಿ. ಆದರೆ ದೇಹಕ್ಕೆ ಸಿಹಿ. ಆದರೆ ಏನು ಮಾಡಿದರೂ ಹಾಗಲಕಾಯಿ ಕಹಿ ಹೋಗುವುದಿಲ್ಲವೆನ್ನಿಸುತ್ತದೆಯೇ? ಹಾಗಿದ್ದರೆ ನಿಮಗಾಗಿ ಈ ಉಪಾಯ. ಹಾಗಲಕಾಯಿಯನ್ನು ಕತ್ತರಿಸಿದ ಬಳಿಕ ಅದನ್ನು ಸ್ವಲ್ಪ ಹೊತ್ತು ಮಜ್ಜಿಗೆಯಲ್ಲಿ ನೆನೆಸಿ ಇಡಿ. ಹೀಗೆ ಮಾಡಿದರೆ ತಕ್ಕ ಮಟ್ಟಿಗೆ ಹಾಗಲಕಾಯಿಯ ಕಹಿ ಹೋಗುತ್ತದೆ.
55
ಸಾಂಬಾರು ತೆಳು ಆಯ್ತಾ?
ಒಂದು ವೇಳೆ ಪಲ್ಯ, ಸಾಂಬಾರ್ ಮಾಡುವಾಗ ನೀರು ಹೆಚ್ಚಾದರೆ ಚಿಂತೆ ಬೇಡ, ಒಂದು ಬೆಂದಿರುವ ಆಲೂಗಡ್ಡೆಯನ್ನು ಪುಡಿಪುಡಿ ಮಾಡಿ ಅದಕ್ಕೆ ಹಾಕಿ ಕುದಿಸಿದರೆ ಅದು ದಪ್ಪ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.