Tomato: ಮಾರ್ಕೆಟ್‌ನಲ್ಲಿ ಟೊಮ್ಯಾಟೋ ಖರೀದಿಸಿ ಮನೆಯಲ್ಲಿ ಹೀಗೆ ಇಡಿ ತಿಂಗಳಾದ್ರೂ ತಾಜಾತನ ಇರುತ್ತೆ!

Published : Aug 19, 2026, 12:24 PM IST

ಟೊಮ್ಯಾಟೋ ಖರೀದಿಸಿದ ಕೆಲವೇ ದಿನಗಳಲ್ಲಿ ಮೆತ್ತಗಾಗಿ ಕೊಳೆತು ಹೋಗುತ್ತಿವೆಯೇ? ಚಿಂತೆ ಬೇಡ. ಇಲ್ಲಿ ಕೊಡಲಾದ ಸಿಂಪಲ್ ಟಿಪ್ಸ್ ಟ್ರೈ ಮಾಡಿ ಎರಡು ಮೂರು ವಾರಗಳ ಕಾಲ ಟೊಮ್ಯಾಟೋ ತಾಜಾವಾಗಿರುತ್ತವೆ. ಮುಂದೆ ಓದಿ;

PREV
16
ಟೋಮೆಟೋ ಹೆಚ್ಚು ದಿನ ಕೊಳೆಯದೆ ತಾಜಾವಾಗಿರಲು ಏನು ಮಅಡಬೇಕು?

ದಿನನಿತ್ಯದ ಊಟಕ್ಕೆ ಟೊಮ್ಯಾಟೋ ಬೇಕೇಬೇಕು. ತರಕಾರಿ ಗ್ರೇವಿಯಿಂದ ಸಲಾಡ್‌, ಚಟ್ನಿ, ಸ್ಯಾಂಡ್‌ವಿಚ್ ಮಾಡಲು ಟೊಮೆಟೋ ಬಹಳ ಮುಖ್ಯ. ಇದು ಆಹಾರದ ರುಚಿ ಹೆಚ್ಚಿಸುತ್ತೆ. ನೀವು ಮಾರ್ಕೆಟ್‌ನಿಂದದ ತಾಜಾ, ಕೆಂಪು ಟೊಮೆಟೊಗಳನ್ನು ಖರೀದಿಸಿದಾಗ ಸಮಸ್ಯೆ ಉದ್ಭವಿಸುತ್ತದೆ. ಕೆಲವೇ ದಿನಗಳಲ್ಲಿ ಅವು ಮೆತ್ತಗಾಗಿ ಕೊಳೆಯಾರಂಭಿಸುತ್ತವೆ. ಕೆಲವೊಮ್ಮೆ ಟೊಮೆಟೊಗಳು ಕೆಳಭಾಗದಿಂದ ಅಪ್ಪಚ್ಚಿಯಂತಾಗಿ ಬಳಸಲು ಯೋಗ್ಯವಲ್ಲದ ರೀತಿ ಕೆಟ್ಟ ವಾಸನೆಯೊಂದಿಗೆ ಕೊಳೆಯಲಾರಂಭಿಸುತ್ತವೆ. ಅಲ್ಲದೇ ಟೊಮೆಟೋ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಹೀಗಾಗಿ ಬಹಳ ದಿನಗಳ ವರೆಗೆ ಕೆಡದಂತೆ ಸಂರಕ್ಶಿಡಲು ಈ ವಿಧಾನ ಅನುಸರಿಸುವುದು ಬೆಸ್ಟ್!

26
ಟೊಮೆಟೋ ತಲೆಕೆಳಗಾಗಿರಿಸಿ

ಖರೀದಿಸಿ ತಂದ ಟೋಮೆಟೊ ಹತ್ತಿಪ್ಪತ್ತು ದಿನಗಳವರೆಗೆ ಕೆಡದಂತೆ ತಾಜಾವಾಗಿರಲಿಸಲು ಮಾರ್ಗವೆಂದರೆ ಕಾಂಡ ಸಮೇತ ತಲೆಕೆಳಗಾಗಿರಿಸಿ ದುಂಡಾದ ಭಾಗ ಮೇಲೆ ಇರುವಂತೆ ಇರಿಸಿ. ಹೀಗೆ ಮಾಡುವುದರಿಂದ ತೇವಾಂಶ ಹೊರಗುವುದು ತಡೆಯುತ್ತದೆ. ತಾಜಾವಾಗಿರುವಂತೆ ನೋಡಿಕೊಳ್ಳುತ್ತೆ.

36
ಕಾಂಡದ ಗುರುತುಗಳನ್ನು ಟೇಪ್‌ನಿಂದ ಮುಚ್ಚಲು ಹ್ಯಾಕ್ ಮಾಡಿ

ಟೊಮೆಟೊ ಖರೀದಿಸುವ ಮುನ್ನ ಈ ವಿಧಾನವನ್ನು ಬದಲಾಯಿಸುವುದು ಮುಖ್ಯ. ಕೆಲವು ಸರಳ ಹ್ಯಾಕ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಅವುಗಳನ್ನು 15 ದಿನಗಳವರೆಗೆ ಬಳಸಬಹುದು, ಕೆಡುವುದಿಲ್ಲ. ಆಗ್ತಾನೆ ಮಾರ್ಕೆಟ್‌ನಿಂದ ಖರೀದಿಸಿ ತಂದಷ್ಟೇ ತಾಜಾವಾಗಿರುತ್ತವೆ.

ಒಂದು ವೇಳೆ ಟೊಮೆಟೋ ಕಾಂಡ ಕಿತ್ತಿದ್ದರೆ, ಮುರಿದಿದ್ದರೆ. ಕಿತ್ತು ಹೋಗಿರುವ ಜಾಗಕ್ಕೆ ತೇಪ್ ಸುತ್ತಿ. ಹಾಗೆ ಮುಚ್ಚುವರಿಂದ ತೇವಾಂಶವು ಬೇಗನೆ ಹೊರ ಹೋಗುವುದಿಲ್ಲ. ಇದು ಹೆಚ್ಚಾಗಿ ಟೊಮೆಟೊದ ಅತ್ಯಂತ ಸೂಕ್ಷ್ಮ ಭಾಗವಾಗಿದೆ, ಆದ್ದರಿಂದ ಇದನ್ನು ತೆರೆದಿಡುವುದರಿಂದ ಹಣ್ಣು ಬೇಗನೆ ಸುಕ್ಕುಗಟ್ಟುತ್ತದೆ ಮತ್ತು ಮೃದುವಾಗುತ್ತದೆ. ನೀವು ಕೆಲವು ದಿನಗಳವರೆಗೆ ಟೊಮೆಟೊವನ್ನು ಬಳಸದಿದ್ದರೆ, ಈ ಸರಳ ಹ್ಯಾಕ್ ಸಹಾಯಕವಾಗಬಹುದು.

46
Tomato ಖರೀದಿಸಿದ ತಕ್ಷಣ ಫ್ರಿಡ್ಜ್‌ನಲ್ಲಿಡಬೇಡಿ

ಸಾಮಾನ್ಯವಾಗಿ ಜನರು ಟೊಮೆಟೊಗಳನ್ನು ಖರೀದಿಸಿದ ತಕ್ಷಣ ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ, ಆದರೆ ಪ್ರತಿಯೊಂದು ಟೊಮೆಟೊವನ್ನು ತಕ್ಷಣ ರೆಫ್ರಿಜರೇಟರ್‌ನಲ್ಲಿ ಇಡುವುದು ಸೂಕ್ತವ್ಲಲ. ಏಕೆಂದರೆ ಫ್ರಿಡ್ಜ್ ಅತ್ಯಂತ ತಂಪಾದ ತಾಪಮಾನವು ಟೊಮೆಟೊದ ವಿನ್ಯಾಸ ಮತ್ತು ರುಚಿಯ ಮೇಲೆ ಪರಿಣಾಮ ಬೀರುತ್ತೆ. ಇದು ಟೊಮೆಟೋ ಮೆತ್ತಗಾಗುವಂತೆ ಮಾಡುತ್ತದೆ. ಬಲಿಯದ ಅಥವಾ ಸ್ವಲ್ಪ ಮಾಗಿದ ಟೊಮೆಟೊಗಳನ್ನು ಅಡುಗೆ ಮನೆಯ ಒಂದು ಜಾಗದಲ್ಲಿ ತಂಪಾದ ಜಾಗದಲ್ಲಿಡುವುದು ಉತ್ತಮ.

56
ಒಂದರ ಮೇಲೊಂದು ಜೋಡಿಸಬೇಡಿ

ಖರೀದಿಸಿದ ಬಳಿಕ ಟೊಮ್ಯಾಟೋಗಳನ್ನ ಬುಟ್ಟಿಯಲ್ಲಿ ಒಂದರ ಮೇಲೊಂದು ಹಾಕಿ ಇಡುವುದು ತಪ್ಪು ವಿಧಾನ. ಹಾಗೆ ಮಾಡುವುದರಿಂದ ಮೇಲಿನಿಂದ ಭಾರ ಹೆಚ್ಚಾಗಿ ಕೆಳಗಿನ ಟೊಮೆಟೋಗಳು ಮೆತ್ತಗಾಗಿ ಒಡೆಯುತ್ತವೆ. ಇದು ಕ್ರಮೇಣ ಬೇಗನೆ ಕೊಳೆಯಲಾರಂಭಿಸುತ್ತದೆ. ಹೀಗಾಗಿ ಬುಟ್ಟಿಯಲ್ಲಿ ಹಾಕಿಡುವ ಬದಲು, ಒಂದು ಅಗಲವಾದ ತಟ್ಟೆಯಲ್ಲಿ ಹರಡಿ ಇಡುವುದು ಉತ್ತಮ. ಸಾಕಷ್ಟು ಸ್ಥಳಾವಕಾಶದಿಂದ ಒತ್ತಡ ಬಿಳುವುದಿಲ್ಲ.

66
ಬಾಳೆಹಣ್ಣು, ಸೇಬುಗಳಿಂದ ಟೊಮೆಟೊಗಳನ್ನು ದೂರ ಇರಿಸಿ

ಬಾಳೆಹಣ್ಣು ಸೇಬು, ಪೇರಳೆ ಮುಂತಾದ ಹಣ್ಣುಗಳ ಜೊತೆಗೆ ಟೊಮೆಟೊ ಒಟ್ಟಿಗೆ ಸೇರಿಸಬಾರದು. ಏಕೆಂದರೆ ಈ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ಹಣ್ಣಾಗುವ ಪ್ರಕ್ರಿಯೆಯನ್ನ ವೇಗ ಗಳನ್ನು ಅವುಗಳ ಹತ್ತಿರ ಸಂಗ್ರಹಿಸಿದರೆ, ಅವು ವೇಗವಾಗಿ ಹಣ್ಣಾಗಬಹುದು, ಅಷ್ಟೇ ಬೇಗ ಬೇಗ ಮೃದುವಾಗಬಹುದು. ಆದ್ದರಿಂದ, ಟೊಮೆಟೊಗಳಿಗೆ ಜಾಗವನ್ನು ಮೀಸಲಿಡಿ. ಹಣ್ಣಿನ ಬುಟ್ಟಿಗಳಿಂದ ಅವುಗಳನ್ನು ದೂರವಿಡಿ.

ಕಾಂಡಗಳಿರುವ ಟೊಮೆಟೊ ಖರೀದಿಸುವುದು ಉತ್ತಮ

ಮಾರ್ಕೆಟ್‌ನಲ್ಲಿ ಟೊಮೆಟೊ ಖರೀದಿಸುವಾಗ ತುಂಬಾ ಮೆತ್ತಗಾಗಿರುವ ಟೊಮೆಟೊಗಳ ಖರೀದಿಸಬೇಡಿ. ಸ್ವಲ್ಪ ದೃಢವಾದ, ಹೊಳೆಯುವ ಮತ್ತು ಕಲೆಗಳಿಲ್ಲದೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಟೊಮೆಟೊ ಕಾಂಡವನ್ನು ಹೊಂದಿದ್ದರೆ, ಬಳಸಲು ಸಿದ್ಧವಾಗುವವರೆಗೆ ಅದನ್ನು ತೆಗೆಯುವ ಅಗತ್ಯವಿಲ್ಲ. ಕಾಂಡವನ್ನು ಹಾಗೆಯೇ ಇಡುವುದರಿಂದ ಹೆಚ್ಚು ದಿನ ತಾಜಾವಾಗಿರುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories